News Karnataka Kannada
Friday, April 26 2024
ಹಾಸನ

ಮೋದಿಜೀ 9 ವರ್ಷಗಳ ಆಡಳಿತ ಸಾಧನೆಯ ಸಾರ್ಥಕತೆ ಮೆರೆದಿದೆ: ಲೋಹಿತ್‌ಜಂಬರಡಿ

Modiji has fulfilled the achievements of 9 years of governance: Lohith Jambardi
Photo Credit : News Kannada

ಹಾಸನ: ೨೦೧೩ನೇ ವರ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಸರ್ಕಾರ ಒಂಬತ್ತು ವರ್ಷಗಳ ಸಾಧನೆಯ ಸಾರ್ಥಕತೆಯನ್ನು ಮೆರೆದಿದೆ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಲೋಹಿತ್ ಜಂಬರಡಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತ ನಾಡಿ, ದೇಶವು ಅಂತರ್ಗತ, ಪ್ರಗತಿಪರ, ಮತ್ತು ಸಮರ್ಥನೀಯ ಅಭಿವೃದ್ಧಿ ಸಾಧಿಸುವಲ್ಲಿ ವಿಶ್ವವಂದ್ಯ ನಾಯಕ ಮೋದಿಜಿ ಬದ್ಧತೆಯ ಕೊಡುಗೆ ನೀಡಿದ್ದಾರೆ.ಎಲ್ಲಾ ನಾಗರಿ ಕರಿಗೆ ಅವಕಾಶ ನೀಡುವ ಅಭಿ ವೃದ್ಧಿಯ ರಾಜಕೀಯ, ವಿಕಾಸವಾದ ವನ್ನು ಮೋದಿಜಿ ಅವರ ಬಿಜೆಪಿ ಸರಕಾರ ತನ್ನದಾಗಿಸಿಕೊಂಡಿತ್ತು. ೨೦೧೪ ರಲ್ಲಿ, ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಭಾರತವನ್ನು ಪ್ರಥಮ ಸ್ಥಾನದಲ್ಲಿ ಇಡಲು ಶ್ರಮಿಸಿದ್ದಾರೆ, ಪ್ರತಿ ನೀತಿ ನಿರೂಪಣೆ ಮತ್ತು ಕ್ರಿಯೆಯು ಈ ಸಂಕಲ್ಪದಡಿ ನಿರೂಪಿತಗೊಂಡಿತ್ತು ಎಂದರು.

ಆಂತರಿಕ ಭದ್ರತೆ ಹಾಗೂ ಬಾಹ್ಯ ಎರಡದ ನಿರ್ವಹಣೆ, ಆರ್ಥಿಕ ನಿರ್ವಹಣೆ, ಸಬಲೀಕರಣ ಯೋಜನೆಗಳು, ಅಂಚಿನಲ್ಲಿರುವ ಗುಂಪುಗಳಿಗೆ ಆದ್ಯತೆ ಕೊಡಲಾಯಿತು. ಪ್ರಧಾನಿ ಮೋದಿಯವರ ಸರ್ಕಾರ ಸವಾಲಿನ ಗುರಿ ನಿಗದಿಪಡಿಸಿ ನಿಗದಿತ ಗಡುವಿನಲ್ಲಿ ಅದನ್ನು ಸಾಧಿಸುತ್ತ ಸಾಗಿಬಂದಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೀಕರಣದ ಅವಧಿಯಲ್ಲೇ ವ್ಯಕ್ತವಾಗಿತ್ತು, ರಫ್ತು, ಡಿಜಿಟಲ್ ಕ್ರಾಂತಿ, ಗ್ರಾಮೀಣ ಪ್ರದೇಶದ ವಿದ್ಯುದೀಕರಣ, ಮನೆ ಮನೆಗೆ ನಲ್ಲಿ ನೀರು ಸೇರಿ ಎಲ್ಲ ಕ್ಷೇತ್ರ ಗಳಲ್ಲಿ ಇದು ಸಾಧ್ಯವಾಗಿದೆ. ಜನ್ ಧನ್, ಆಧಾರ್ ಮತ್ತು ಮೊಬೈಲ್ ಪರಸ್ಪರ ಹೊಂದಿಸಿ ಮಧ್ಯವರ್ತಿ ಗಳಿಲ್ಲದೆ ನೇರ ಹಣ ವರ್ಗಾವಣೆಗೆ (ಡಿಬಿಟಿ) ಮೋದಿಜಿ ಚಾಲನೆ ಕೊಟ್ಟರು, ಪ್ರಧಾನಿ ಮೋದಿಯವರ ಅತ್ಯುತ್ಸಾಹಿ ನಾಯಕತ್ವದ ಅಡಿಯಲ್ಲಿ ದೇಶದ ಏಳಿಗೆಗಾಗಿ ಮೂಲ ಸೌಕರ್ಯವು ವೇಗವಾಗಿ ಬೆಳೆಯು ತ್ತಿದೆ. ಹಿಂದಿನ ಆಡಳಿತದಲ್ಲಿ ಇದಕ್ಕೆ ತದ್ವಿರುದ್ಧದ ದೂರದೃಷ್ಟಿ ಇಲ್ಲದ ಕಾಮಗಾರಿಗಳು ನಡೆಯುತ್ತಿದ್ದವು ಎಂದರು.

ಕಳೆದ ಒಂಬತ್ತು ವರ್ಷಗಳಲ್ಲಿ ಎಲ್ಲಾ ಭಾರತೀಯರನ್ನು ಪ್ರೇರೇಪಿ ಸುವ ಮತ್ತು ದೊಡ್ಡ ಕನಸು ಮತ್ತು ಆಕಾಂಕ್ಷೆ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ, ಜಗತ್ತು ಈಗ ಭಾರತದ ಅಭಿವೃದ್ಧಿಯತ್ತ ನೋಡು ತ್ತಿದೆ. ಜೂನ್ ೨೧ ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿ ಸಲಾಗಿದೆ. ಭಾರತೀಯರಿಗೆ ಜಾಗತಿಕ ಮನ್ನಣೆ ಲಭಿಸಿದೆ. ಭಾರತದ ಬೆಳವಣಿಗೆಯ ಭಾಗವಾಗಿ ಭಾರತೀಯ, ’ಅಮೃತ’ ಸಾಲ’ದಲ್ಲಿ ಏನೇನು ಮಾಡಬಹುದು ಎಂಬ ನೀಲನಕ್ಷೆ ಸಿದ್ದಗೊಂಡಿದೆ. ಇದು ಮೋದಿಯವರ ದೂರದೃಷ್ಟಿಯ ನಾಯಕತ್ವದ ಫಲವಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಶಾಸಕ ಸಿಮೆಂಟ್‌ಮಂಜು, ಪ್ರಸನ್ನಕುಮಾರ್, ಹೈನೆಟ್‌ವಿಜಯ್ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು