News Karnataka Kannada
Thursday, April 25 2024
Cricket
ಹಾಸನ

ಸಕಲೇಶಪುರ: ಮಧ್ಯಾಹ್ನದ ಊಟ ಸೇವಿಸಿದ ೩೫ ಮಂದಿ ಸೈನಿಕರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

As many as 35 soldiers fell ill after consuming mid-day meal, hospitalised
Photo Credit : News Kannada

ಸಕಲೇಶಪುರ: ಮಧ್ಯಾಹ್ನದ ಊಟ ಸೇವಿಸಿದ ೩೫ ಮಂದಿ ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ.

ಕುಡುಗರಹಳ್ಳಿ ಬಳಿಯ ಕ್ಯಾಂಪ್‌ನಲ್ಲಿ ಘಟನೆ ನಡೆದಿದ್ದು, ಚಾಲನಾ ತರಬೇತಿಗೆಂದು ಬಂದಿದ್ದ ಸೈನಿಕರು ಕುಡುಗರಹಳ್ಳಿ ಬಳಿ ಕ್ಯಾಂಪ್ ಹಾಕಿದ್ದರು. ಬುಧವಾರ ಮಧ್ಯಾಹ್ನ ಕ್ಯಾಂಪ್‌ನಲ್ಲಿ ತಯಾರಾಗಿದ್ದ ಆಹಾರವನ್ನು ಸೇವಿಸಿದ ಬಳಿಕ ಸೈನಿಕರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮಿಲಿಟರಿ ವಾಹನಗಳಲ್ಲಿ ಕರೆತಂದು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯ ವಿಚಾರಿಸಿದ್ದಾರೆ. ಅಸ್ವಸ್ಥಗೊಂಡಿರುವ ಸೈನಿಕರು ಚೇತರಿಸಿಕೊಳ್ಳುತ್ತಿದ್ದು,  ವಿಷ ಪೂರಿತ ಆಹಾರ ಸೇವನೆಯಿಂದ  ಅಸ್ವಸ್ಥಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು