News Kannada
Wednesday, March 22 2023

ಮಡಿಕೇರಿ

ಕೊಡಗಿನಲ್ಲಿ 9 ಮತ್ತು ಮೇಲ್ಪಟ್ಟ ತರಗತಿಗಳ ಆರಂಭ ಸಧ್ಯಕ್ಕಿಲ್ಲ

Photo Credit :

ಮಡಿಕೇರಿ ; ಕೊಡಗಿನಲ್ಲಿ ಸದ್ಯಕ್ಕೆ 9 ನೇ ಮತ್ತು ಮೇಲ್ಪಟ್ಟ ತರಗತಿಗಳ ಆರಂಭ ಸದ್ಯಕ್ಕೆ ಇಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ದಿನಾಂಕ: 16.08.2021ರ ಸುತ್ತೋಲೆಯಲ್ಲಿ ರಾಜ್ಯದಲ್ಲಿ ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ದಿನಾಂಕ: 23.08.2021 ರಿಂದ ಆರಂಭಿಸುವ ಬಗ್ಗೆ ನಿರ್ದೇಶನ ನೀಡಿರುತ್ತಾರೆ. ಆದರೆ ಕೋವಿಡ್-19 ಸೋಂಕಿನ ಪ್ರಮಾಣ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನ ಪ್ರಕ್ರಿಯೆಗಳನ್ನು ಮುಂದುರೆಸಲು ತಿಳಿಸಿರುತ್ತಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ 10 ದಿನಗಳ ಸರಾಸರಿ ಕೋವಿಡ್-19 ಸೋಂಕಿನ ಪ್ರಮಾಣವು ಶೇ.2ರಷ್ಟು ಇರುವುದರಿಂದ ದಿನಾಂಕ: 23.08.2021 ರಿಂದ 9 ಮತ್ತು ಮೇಲ್ಪಟ್ಟ ತರಗತಿಗಳನ್ನು ಆರಂಭಿಸಲು ಆಗುವುದಿಲ್ಲವೆಂದು ತಿಳಿಸಿದೆ. ಈ ತರಗತಿಗಳನ್ನು ಆರಂಭಿಸುವ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

See also  ಕೊಡಗು: ಕೋವಿಡ್ ಪಾಸಿಟಿವಿಟಿ ದರ ಶೇ.0.25ಕ್ಕೆ ಹೆಚ್ಚಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು