News Kannada
Tuesday, December 06 2022

ಮಡಿಕೇರಿ

ಗ್ಲೋಬಲ್ ಕೊಡವ ತಕ್ಕ್ ಆಫ್-2021 ಸ್ಪರ್ಧೆ : ಕೊಡಗು ತಂಡ ಅಧಿಕ ಅಂಕ ಗಳಿಸಿ ಚಾಂಪಿಯನ್

Photo Credit :

ಕೊಡಗು: ಅಮೆರಿಕಾದ ಬಲ್ಲಚಂಡ ನಯನ ಹಾಗೂ ತಂಡದವರು ಮರ್ಕಾರ ಹೋಮ್ ಆಫೀಸ್ ಸಹಯೋಗದಲ್ಲಿ ನಡೆಸಿದ ಗ್ಲೋಬಲ್ ಕೊಡವ ತಕ್ಕ್ ಆಫ್-2021 ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ ಕೊಡಗು ತಂಡ ಅಧಿಕ ಅಂಕ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ವೆಬಿನಾರ್ ಮೂಲಕ ನಡೆದ ಸ್ಪರ್ಧೆಯನ್ನು ಹಲವು ದೇಶಗಳ ಕೊಡವಾಭಿಮಾನಿಗಳು ವೀಕ್ಷಿಸಿ ಮತ ಚಲಾಯಿಸಿದರು.
ಕೊಡಗು ತಂಡದೊಂದಿಗೆ ಅಮೆರಿಕಾ, ಮಿಡ್ಲ್ ಈಸ್ಟ್ ಹಾಗೂ ಬೆಂಗಳೂರು ತಂಡಗಳು ಭಾಗವಹಿಸಿದ್ದವು. ಕೊಡವ ಭಾಷೆಯ ಹಿಡಿತ, ಪ್ರಸ್ತುತಪಡಿಸುವ ಶೈಲಿ, ವಿಷಯದ ಅಧ್ಯಯನ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಇದಲ್ಲದೆ ರಸಪ್ರಶ್ನೆ ಕಾರ್ಯಕ್ರಮವೂ ನಡೆಯಿತು.

ಇದರಲ್ಲಿ ಕೊಡಗು ತಂಡದ ಚೇಂದಂಡ ಶಮಿ ಮಾದಯ್ಯ ಮೊದಲ ಸ್ಥಾನ ಗಳಿಸಿದರೆ, ಕೊಡಗು ತಂಡದ ಪರವಾಗಿ ಡಾ. ತಿತೀರ ರೇಖಾ ವಸಂತ್, ಐತಿಚಂಡ ರಮೇಶ್ ಉತ್ತಪ್ಪ, ಚೆಯ್ಯಂಡ ಸತ್ಯ ಗಣಪತಿ, ಚೇಂದಂಡ ಶಮಿ ಮಾದಯ್ಯ, ಚೋಕಿರ ಅನಿತಾ ದೇವಯ್ಯ,‌ ಕ್ಯಾಲೇಟಿರ ಪವಿತ್ ಪೂವಯ್ಯ, ಬಾಳೆಯಡ ದಿವ್ಯಾ ಮಂದಪ್ಪ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ, ಬೆಂಬಲ ನೀಡಿ ಓಟು ಮಾಡಿದ ಎಲ್ಲಾ ಅಭಿಮಾನಿಗಳಿಗೂ ಕೊಡಗು ತಂಡ ಧನ್ಯವಾದ ಅರ್ಪಿಸಿದೆ.

See also  ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನ ಮಾನ ; ಹೈ ಕೋರ್ಟ್‌ ನಿಂದ ಸರ್ಕಾರಕ್ಕೆ ನಿರ್ದೇಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು