News Kannada
Saturday, December 03 2022

ಮಡಿಕೇರಿ

ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ನಲ್ಲಿ ಭಗವತಿ ಬಂಟ್ಸ್ ಚಾಂಪಿಯನ್ಸ್

Photo Credit :

ಮಡಿಕೇರಿ:ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಮೂರು ದಿನ ಕಾಲ ನಡೆದ ಬಂಟ್ಸ್ ಚಾಂಪಿಯನ್ಸ್ ಲೀಗ್  ಕ್ರಿಕೆಟ್-2022ನಲ್ಲಿ ಭಗವತಿ ಬಂಟ್ಸ್ ಮಡಿಕೇರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಂಟ್ಸ್ ಹಂಟರ್ಸ್ ಐಗೂರು ತಂಡವನ್ನು 52 ರನ್ ಅಂತರದಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಭಗವತಿ ಬಂಟ್ಸ್ ತಂಡ ನಿಗದಿತ 6 ಓವರ್‌ನಲ್ಲಿ        5 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತು. ಅಗ್ರ ಕ್ರಮಾಂಕದ ಆಟಗಾರರು ಬೇಗ ವಿಕೆಟ್ ಕೈಚೆಲ್ಲಿದರೂ ರೇಣುಕಾ ಪ್ರಸಾದ್ ಶೆಟ್ಟಿ ಏಕಾಂಗಿಯಾಗಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. 20 ಎಸೆತದಲ್ಲಿ 13 ಸಿಕ್ಸರ್ ಸಿಡಿಸಿದ ರೇಣುಕಾ ಪ್ರಸಾದ್ ವೈಯಕ್ತಿಕವಾಗಿ 79 ರನ್ ಗಳಿಸಿ ಔಟಾಗದೆ ಉಳಿದರು.

ಗುರಿ ಬೆನ್ನತ್ತಿದ ಐಗೂರು ತಂಡ ನಿಗದಿತ ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 44 ರನ್ ಗಳಿಸಲು ಮಾತ್ರ ಶಕ್ತವಾಯಿತು. ದಿವಿನ್(12), ಪ್ರವೀಣ್(14) ಹೊರತುಪಡಿಸಿ ಯಾವ ಆಟಗಾರನೂ ಎರಡಂಕಿ ರನ್ ಗಳಿಸಲಿಲ್ಲ. ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ ರೇಣುಕಾ ಪ್ರಸಾದ್ ಎರಡು ಓವರ್‌ನಲ್ಲಿ 12 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು.     ಭಗವತಿ ಬಂಟ್ಸ್ ತಂಡ ಆಡಿದ ೯ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಗಮನಸೆಳೆಯಿತು. ವಿಜೇತ ತಂಡಕ್ಕೆ ಟ್ರೋಫಿ, 60ಸಾವಿರ ರೂ. ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ, 40ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಬಂಟ್ಸ್ ಹಂಟರ್ಸ್ ಐಗೂರು ವಿರುದ್ಧ ಭಗವತಿ ಬಂಟ್ಸ್ ತಂಡ 29 ರನ್ ಗೆಲುವು ದಾಖಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಎಲಿಮಿನೇಟರ್ ಪಂದ್ಯದಲ್ಲಿ ಸಮುದ್ರ ಶೆಟ್ಟಿ ಗ್ರೂಪ್ಸ್ ತಂಡವನ್ನು 15ರನ್ ಅಂತರದಿಂದ ಮಣಿಸಿದ ಬೊಟ್ಲಪ್ಪ ಬಂಟ್ಸ್ ತಂಡ ದ್ವಿತೀಯ ಕ್ವಾಲಿಫೈಯರ್‌ಗೆ ಪ್ರವೇಶಿಸಿತು. ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಬೊಟ್ಲಪ್ಪ ಬಂಟ್ಸ್ 6 ಓವರ್‌ನಲ್ಲಿ 5 ವಿಕೆಟ್‌ಗೆ 45 ರನ್ ಗಳಿಸಿತು. ಬಂಟ್ಸ್ ಹಂಟರ್ಸ್ ತಂಡ 4.2  ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿ ಎರಡನೇ ತಂಡವಾಗಿ ಫೈನಲ್‌ಗೇರಿತು. ಬೊಟ್ಲಪ್ಪ ಬಂಟ್ಸ್ ತೃತೀಯ, ಸಮುದ್ರ ಶೆಟ್ಟಿ ಗ್ರೂಪ್ಸ್ ನಾಲ್ಕನೇ ಬಹುಮಾನ ಪಡೆಯಿತು.

ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ಭಗವತಿ ಬಂಟ್ಸ್ ತಂಡದ ರೇಣುಕಾ ಪ್ರಸಾದ್ ಶೆಟ್ಟಿ 9 ಪಂದ್ಯದಲ್ಲಿ  ವೈಯಕ್ತಿಕವಾಗಿ 270 ಗಳಿಸಿದರು. ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರಿ ೧೫ ವಿಕೆಟ್ ಕಬಳಿಸಿದರು. ಆ ಮೂಲಕ ಸರಣಿ ಶ್ರೇಷ್ಠ, ಬೆಸ್ಟ್ ಬ್ಯಾಟರ್, ಬೆಸ್ಟ್ ಬೌಲರ್, ಅಂತಿಮ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಉತ್ತಮ ಕ್ಷೇತ್ರ ರಕ್ಷಕ – ಸಂದೇಶ್ ರೈ(ಬಂಟ್ಸ್ ಹಂಟರ್ಸ್ ಐಗೂರು), ಉದಯೋನ್ಮುಖ ಆಟಗಾರ ದಿವಿನ್ ರೈ(ಐಗೂರು). ಕಿರಿಯ ಪ್ರತಿಭೆ-ದಿಗಂತ್ ರೈ(ಬಂಟ್ಸ್ ದ ಹಂಟರ್ಸ್ ಮಡಿಕೇರಿ) ಪ್ರಶಸ್ತಿ ಪಡೆದರು.

See also  ಜನ-ಜಾನುವಾರು ರಕ್ಷಣೆಗೆ ಮುಂದಾಗಲು ಅಧಿಕಾರಿಗಳಿಗೆ ಸಚಿವ ನಾಗೇಶ್ ಸೂಚನೆ

ಇದಕ್ಕೂ ಮುನ್ನ ನಡೆದ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸುಮತಿ ಶೆಟ್ಟಿ ನಾಯಕತ್ವದ ಭಗವತಿ ಬಂಟ್ಸ್ ತಂಡ ಪ್ರಥಮ, ದೀಕ್ಷಾ ಕಿಶೋರ್ ರೈ ನಾಯಕತ್ವದ ಯಂಗ್ ಬಂಟ್ಸ್ ಕೈಕೇರಿ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್‌ನಲ್ಲಿ ದೀಕ್ಷಾ  ಕಿಶೋರ್ ನಾಯಕತ್ವದ ಯಂಗ್ ಬಂಟ್ಸ್ ಕೈಕೇರಿ ಪ್ರಥಮ, ಜಯಂತಿ ಆರ್. ಶೆಟ್ಟಿ ನಾಯಕತ್ವದ ಭಗವತಿ ಬಂಟ್ಸ್ ದ್ವಿತೀಯ ಸ್ಥಾನ ಪಡೆಯಿತು.

ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಯೋಗೇಶ್ ಶೆಟ್ಟಿ ನಾಯಕತ್ವದ ಮಲ್ನಾಡ್ ಬಂಟ್ಸ್ ಪ್ರಥಮ, ಸತೀಶ್ ರೈ ನಾಯಕತ್ವದ ಯಂಗ್ ಬಂಟ್ಸ್ ಕೈಕೇರಿ ದ್ವಿತೀಯ ಸ್ಥಾನ ಗಳಿಸಿತು.

ವೈಯಕ್ತಿಕ ಬಹುಮಾನವನ್ನು ಪ್ರಿ ನರ್ಸರಿ(ಚಾಕೋಲೆಟ್ ಹೆಕ್ಕುವುದು)- ತ್ರಿಶಾಲಿ ರಮೇಶ್ ರೈ(ಪ್ರ), ಮೋನಲ್ ರವಿಕಿರಣ್ ರೈ(ದ್ವಿ), ಅದ್ವಿತ್ ಸಂತೋಷ್ ರೈ(ತೃ), ನಿಖಿಲ್ ಅರುಣ್ ಶೆಟ್ಟಿ(ಚ)

(ಎಲ್‌ಕೆಜಿ, ಯುಕೆಜಿ) ಬಾಲಕರ ವಿಭಾಗದ ಕಪ್ಪೆ ಜಿಗಿತ – ಮನ್ವಿಕ್ ಶರತ್ ರೈ(ಪ್ರ). ಬಾಲಕಿಯರ ವಿಭಾಗದ ರ್‍ಯಾಬಿಟ್ ರೇಸ್ – ಆರಾಧ್ಯ ಲೋಕೇಶ್ ರೈ(ಪ್ರ), ಅದಿತ್ರಿ ಸಂತೋಷ್ ರೈ(ದ್ವಿ).

1 – 3ನೇ ತರಗತಿ ಬಾಲಕರ 50 ಮೀ. ಓಟ – ಸಮೃದ್ಧ್ ಸದಾಶಿವ ರೈ(ಪ್ರ), ಬಾಲಕಿಯರ ವಿಭಾಗದ ಬುಕ್ ಬ್ಯಾಲೆನ್ಸ್ ಓಟ – ಸಾನ್ವಿ ಸತೀಶ್ ರೈ ಕೈಕೇರಿ(ಪ್ರ).  ವಂಶಿಕ ಚಂದ್ರಶೇಖರ್ ರೈ(ದ್ವಿ), ಹಿತಶ್ರೀ ಸಚಿನ್ ರೈ(ತೃ), ಜನ್ಯ ಸತೀಶ್ ರೈ(ಚ). 4. 5ನೇ ತರಗತಿ 75 ಮೀ. ಓಟ, ಬಾಲಕರ ವಿಭಾಗ – ಕಾರ್ತಿಕ್ ಸತೀಶ್ ರೈ ಕೈಕೇರಿ(ಪ್ರ), ಅನ್ಶುಲ್ ಜಯರಾಮ್ ರೈ(ದ್ವಿ).

ಬಾಲಕಿಯರ ವಿಭಾಗ – ಐಶ್ವರ್ಯ ಲೋಕೇಶ್ ರೈ(ಪ್ರ), ಚಿರಸ್ವಿ ಜಯ ರೈ(ದ್ವಿ), ಅನನ್ಯ ಪ್ರಕಾಶ್ ರೈ(ತೃ), 6, 7ನೇ ತರಗತಿ 100 ಮೀ. ಓಟ, ಬಾಲಕರ ವಿಭಾಗ – ಆದಿತ್ಯ ಜಿತೇಂದ್ರ ರೈ(ಪ್ರ)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು