News Kannada
Saturday, December 10 2022

ಮಡಿಕೇರಿ

ಸರ್ವಕಾಲಿಕ ದಾಖಲೆ ಬರೆದ ರೊಬಸ್ಟಾ ಪಾರ್ಚ್‌ಮೆಂಟ್‌ ಕಾಫಿ ದರ

Photo Credit : News Kannada

ಮಡಿಕೇರಿ   : ಉಕ್ರೇನ್‌ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದದಕಾರಣದಿಂದಾಗಿ ಇಂಧನದ ಜತೆಗೇ  ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಬ್ರೆಜಿಲ್‌ ನಲ್ಲಿನ ಹಿಮಪಾತದ ಕಾರಣದಿಂದಾಗಿ ಅರೇಬಿಕಾ ಕಾಫಿ ಬೆಳೆ ನಷ್ಟ ಆಗಿದ್ದು
ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜು ಕಡಿಮೆ ಆದ ಕಾರಣಕ್ಕೆ ಕಳೆದ ಆರುತಿಂಗಳಿನಿಂದ ಅರೇಬಿಕಾ ಪಾರ್ಚ್‌ಮೆಂಟ್‌ ಕಾಪಿ ದರ ಗರಿಷ್ಟ ಬೆಲೆ ಏರಿಕೆ ದಾಖಲಿಸಿತ್ತು.

ಕಳೆದ ವರ್ಷದ ಅಕ್ಟೋಬರ್‌ ವೇಳೆಗೆ  ಸುಮಾರು 10,500 -700 ರ ಆಸು ಪಾಸಿನಲ್ಲಿದ್ದ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ದರ ಫೆಬ್ರುವರಿ ತಿಂಗಳಿನಲ್ಲಿ  50 ಕೆಜಿ ಚೀಲವೊಂದಕ್ಕೆ 16,600 ರೂಪಾಯಿಗಳ ಸರ್ವಕಾಲಿಕ ಏರಿಕೆ ದಾಖಲಿಸಿ  ಇದೀಗ 15,800
ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ದಾಖಲಿಸಿದೆ.

ಅರೇಬಿಕಾ ದರ ಏರಿಕೆಯನ್ನು ರೊಬಸ್ಟಾ ಕಾಫಿ ಬೆಳೆಗಾರರು  ಗಮನಿಸಿ ನಿರಾಶರಾಗಿದ್ದರು. ಏಕೆಂದರೆ ಅರೇಬಿಕಾ ಕಾಫಿ ದರ ಚೀಲವೊಂದಕ್ಕೆ 5000 ರೂಪಾಯಿಗಳ ಏರಿಕೆ ದಾಖಲಿಸಿದರೂ ರೊಬಸ್ಟಾ ಕಾಫಿ ದರ ಚೀಲಕ್ಕೆ ಕೇವಲ 100-300 ರೂಪಾಯಿಗಳ ಏರಿಕೆ  ದಾಖಲಿಸಿತ್ತು. ಇದೀಗ ರೋಬಸ್ಟಾ ಕಾಫಿ ಬೆಳೆಗಾರರೂ ಸಂತಸ ಪಡುವ ಸುದ್ದಿ ಬಂದಿದೆ. ಕಳೆದ ಎರಡು ತಿಂಗಳ ಹಿಂದೆ 50 ಕೆಜಿ ಚೀಲಕ್ಕೆ 7200-300 ರೂಪಾಯಿಗಳಿಗೆ ಮಾರಾಟವಾಗುತಿದ್ದ  ರೊಬಸ್ಟಾ ಕಾಫಿ ದರ   ಸೋಮವಾರ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ  ಮಾರುಕಟ್ಟೆಯಲ್ಲಿ   10 ಸಾವಿರ ರೂಪಾಯಿಗಳಿಗೆ ಮಾರಾಟವಾಗಿ ಸರ್ವಕಾಲಿಕ ಏರಿಕೆ ದಾಖಲಿಸಿದೆ.  ಆದರೆ ಮಂಗಳವಾರ ಮಾರುಕಟ್ಟೆಯಲ್ಲಿ ಅಲ್ಪ ಕುಸಿತ ದಾಖಲಿಸಿದ್ದು 9600ರಿಂದ 9800 ದರ ಇತ್ತು.

ಕಾಫಿ ಮಾರುಕಟ್ಟೆಯ ಇತಿಹಾಸದಲ್ಲೇ ರೊಬಸ್ಟಾ  ಪಾರ್ಚ್‌ಮೆಂಟ್‌ ಕಾಫಿಗೆ ಈ ದರದೊರೆತಿರುವುದು ಇದೇ ಮೊದಲಾಗಿದೆ. ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ದ ನಡೆಯುತ್ತಿರುವ ನಡುವೆಯೂ ಇಷ್ಟೊಂದು ಏರಿಕೆ ದಾಖಲಿಸಿರುವುದು ಅಚ್ಚರಿಯ ಬೆಳವಣಿಗೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಯುದ್ದ ನಡೆಯದಿದ್ದರೆ ಈ ದರ ಇನ್ನಷ್ಟು ಅಧಿಕ ಆಗಿರುತಿತ್ತು ಎಂದು ಅವರು ಹೇಳಿದ್ದಾರೆ. ಮಾರುಕಟ್ಟೆ ಮೂಲಗಳ ಪ್ರಕಾರ ಈಗಾಗಲೇ ಯುದ್ದದ ಕಾರಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ  ಕಾಫಿಯ ಅವಕ ಕಡಿಮೆ ಆಗಿದೆ. ಜತೆಗೆ ಸಾಗಾಟ ವೆಚ್ಚವೂ ತುಂಬಾ ದುಬಾರಿ ಆಗಿದ್ದು ಕಂಟೇನರ್‌ ಗಳ ಕೊರತೆಯೂ ಇದಕ್ಕೆ ಕಾರಣವಾಗಿದೆ. ಈ
ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಉಪಾದ್ಯಕ್ಷ  ನಾಪೋಕ್ಲುವಿನ ಡಾ ಸಣ್ಣುವಂಡ ಕಾವೇರಪ್ಪ ಅವರು ಕಾಫಿ ಬೆಳೆಯುವ  ಪ್ರಮುಖ  ರಾಷ್ಟ್ರಗಳಾದ ಬ್ರೆಜಿಲ್‌ , ವಿಯಟ್ನಾಂ, ಕೊಲಂಬಿಯಾ ಮುಂತಾದ ರಾಷ್ಟ್ರಗಳಲ್ಲಿ  ಆವು  ಕಾಫಿಯ ದರ ಸಮತೋಲನಕ್ಕಾಗಿ ಕಾಯ್ದಿರಿಸುತಿದ್ದ ಬಫರ್‌ ಸ್ಟಾಕ್‌ ಕೂಡ ಕಡಿಮೆ ಆಗಿದ್ದು  ದರ ಏರಿಕೆಗೆ ಇದೂ ಒಂದು
ಕಾರಣ ಎಂದರಲ್ಲದೆ  ಮುಂದಿನ ಎರಡು ವರ್ಷ ಕಾಫಿ ದರ ಏರುಮುಖವಾಗಿ ಇರಲಿದೆ ಎಂದುಹೇಳಿದರು.

ಮೊದಲು ಅರೇಬಿಕಾ ಕಾಫಿ ದರ ಏರಿಕೆಯಿಂದ ದೇಶದ ಶೇಕಡಾ 28 ರಷ್ಟು ಕಾಫಿ ಬೆಳೆಗಾರರಿಗೆಮಾತ್ರ ಅನುಕೂಲ ಆಗಿತ್ತು. ಏಕೆಂದರೆ ದೇಶದ ಒಟ್ಟು ಕಾಫಿ ಉತ್ಪಾದನೆ ಯಾದ 3.6 ಲಕ್ಷ ಟನ್‌ ಗಳಲ್ಲಿ ಅರೇಬಿಕಾ ಪಾಲು ಸುಮಾರು ಒಂದು ಲಕ್ಷ ಟನ್‌ ಗಳಷ್ಟಿದೆ. ರೊಬಸ್ಟಾ ದ ಉತ್ಪಾದನೆ 2.5 ಲಕ್ಷ ಟನ್‌ ಗಳಿಗೂ ಹೆಚ್ಚಿದೆ.  ದೇಶದ ಉತ್ಪಾದನೆಯ ಶೇಕಡಾ 30 ರಷ್ಟು ಪಾಲು ಹೊಂದಿರುವ ಕೊಡಗಿನಲ್ಲಿ ವಾರ್ಷಿಕ 1.3 ಲಕ್ಷ ಟನ್‌ ಗಳಷ್ಟು ಕಾಫಿ ಉತ್ಪಾದನೆ ಆಗುತಿದ್ದು ಇದರಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಅರೇಬಿಕಾ ಬೆಳೆಯಲಾಗುತಿದ್ದು ಒಟ್ಟು ಉತ್ಪಾದನೆ 20 ಸಾವಿರ ಟನ್‌ ಗಳಷ್ಟಿದ್ದರೆ  ಮಡಿಕೇರಿ , ವೀರಾಜಪೇಟೆ , ಪೊನ್ನಂಪೇಟೆ ತಾಲ್ಲೂಕಿನಲ್ಲಿ ರೊಬಸ್ಟಾ ಬೆಳೆ ಅಧಿಕವಾಗಿದ್ದು ಜಿಲ್ಲೆಯ ರೊಬಸ್ಟಾ ಉತ್ಪಾದನೆ  1.10 ಲಕ್ಷ ಟನ್‌ ಗಳಾಗಿದೆ. ಇದೀಗ ರೊಬಸ್ಟಾ ದರ ಏರಿಕೆಯ ಕಾರಣದಿಂದ ಜಿಲ್ಲೆಯ ಶೇಕಡಾ 75 ಕ್ಕೂ ಅಧಿಕ ಕಾಫಿ
ಬೆಳೆಗಾರರಿಗೆ ಅನುಕೂಲ ಆಗಿದೆ.

See also  ಹಿಜಾಬ್ ತೀರ್ಪಿನ ಬಗ್ಗೆ ಅವಾಚ್ಯ ಕಮೆಂಟ್ ಮಾಡಿದ ಯುವಕ ಪೊಲೀಸರ ವಶ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12352
C Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು