News Kannada
Tuesday, July 05 2022

ಮಡಿಕೇರಿ

ಕಾರ್ಯ ಆರಂಭಿಸದ ನೀರು ಶುದ್ಧೀಕರಣ ಯಂತ್ರ  - 1 min read

Photo Credit :

ಮಡಿಕೇರಿ: ಮಡಿಕೇರಿ ನಗರಸಭೆ ವ್ಯಾಪ್ತಿಗೆ ಒಳಪಡುವ ಕನ್ನಂಡಬಾಣೆ ಪಂಪ್‌ಹೌಸ್ ನಿಂದ ನಗರದ ಹಲವು ವಾರ್ಡ್‌ಗಳಿಗೆ  ಕಲುಷಿತ ನೀರು ಪೂರೈಕೆಯಾಗುತ್ತಿದೆ ಇದಕ್ಕೆ ಶುದ್ಧೀಕರಣ ಯಂತ್ರವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ವಾರ್ಡ್ ಸಂ.20 ರಲ್ಲಿರುವ ಕನ್ನಂಡಬಾಣೆಯ ಪಂಪ್‌ಹೌಸ್‌ನ ಬಾವಿಯಿಂದ ಕನ್ನಂಡಬಾಣೆ, ಪುಟಾಣಿನಗರ, ದೇಚೂರು, ಪೊಲೀಸ್ ವಸತಿಗೃಹ, ಆಸ್ಪತ್ರೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ನೀರು ಸರಬರಾಜಾಗುತ್ತದೆ. ಸುಮಾರು 20 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಶುದ್ಧೀಕರಿಸದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನಲಾಗಿದೆ.

ಇದಕ್ಕೆ ಪಂಪ್‌ಹೌಸ್ ಸುತ್ತಮುತ್ತ ಇರುವ ಕೆಲವು ಮನೆಗಳ ಕಲುಷಿತ ನೀರು ಜಲಮೂಲ ಸೇರುತ್ತಿದೆ. ಜಲ ಹರಿದು ಬರುವ ಪ್ರದೇಶ ಸಂಪೂರ್ಣ ಕಾಡುಗಳಿಂದ ತುಂಬಿದ್ದು, ಕೊಳಚೆ ನೀರು ಪಂಪ್‌ಹೌಸ್ ಬಾವಿಗೆ ಸೇರುತ್ತಿದೆ.

ಪಂಪ್ ಹೌಸ್‌ನ ಅಭಿವೃದ್ಧಿಗಾಗಿ ಇಲ್ಲ್ಲಿಯವರೆಗೆ ಕೋಟ್ಯಂತರ ರೂ. ಹಣವನ್ನು ಖರ್ಚು ಮಾಡಲಾಗಿದೆ. ಆದರೆ ಯಾವುದೇ  ನಿರ್ವಹಣೆ ಇಲ್ಲದೆ ಅಶುದ್ಧ ನೀರು ಜನರ ಪಾಲಾಗುತ್ತಿದೆ. ಕಲುಷಿತ ನೀರಿಗೆ ಅಲಮ್ ಹಾಗೂ ಬ್ಲೀಚಿಂಗ್ ಪೌಡರ್ ಹಾಕಿ ನೀರು ಸರಬರಾಜು ಮಾಡಲಾಗುತ್ತಿದೆ. ಈ ರೀತಿಯ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು, ಮಳೆಗಾಲದಲ್ಲಿ ನೀರಿನೊಂದಿಗೆ ತ್ಯಾಜ್ಯ ಬರುತ್ತಿದ್ದು, ನೀರಿನ ಬಣ್ಣವೇ ಬದಲಾಗುತ್ತಿದೆ. ಹಲವು ಬಾರಿ ನಗರಸಭೆಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸುಮಾರು 70 ವರ್ಷಗಳ ಹಿಂದೆ ತೆರೆಯಲ್ಪಟ್ಟ ಪಂಪ್‌ಹೌಸ್‌ನ ಬಾವಿಯ ಅಭಿವೃದ್ಧಿಗೆ 2006 ರಿಂದ 2008 ಎಸ್.ಎಸ್.ಸಿ ಮುಕ್ತ  ನಿಧಿ ಹಾಗೂ 2019-20ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ಒಟ್ಟು ರೂ.23 ಲಕ್ಷ ವೆಚ್ಚ ಮಾಡಲಾಗಿದೆ.

ಇನ್ನು ಶುದ್ಧ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಒಂದು ವರ್ಷದ ಹಿಂದೆ ನಗರಸಭೆ ವತಿಯಿಂದ ನೀರು ಶುದ್ಧೀಕರಣ ಯಂತ್ರವನ್ನು ಅಳವಡಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪೈಪ್ ಲೈನ್ ಅಳವಡಿಸಿಲ್ಲ, ನಗರಸಭೆಯ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ. ಬೆಲೆಯ ಯಂತ್ರ ನಿಷ್ಕ್ರಿಯವಾಗಿ ನಿಂತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

See also  ಮಾ.28 ಮತ್ತು 29 ರಂದು ರಾಷ್ಟ್ರ ವ್ಯಾಪಿ ಅಂಚೆ ನೌಕರರ ಮುಷ್ಕರಕ್ಕೆ ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು