News Kannada
Wednesday, October 05 2022

ಮಡಿಕೇರಿ

ಮಂಜಿನ ನಗರಿಯಲ್ಲಿ ಲೈಂಗಿಕ ಸೇವೆಯ ಹೆಸರಿನಲ್ಲಿ ಆನ್‌ ಲೈನ್‌ ವಂಚನೆ - 1 min read

Photo Credit : By Author

ಮಡಿಕೇರಿ, ಜೂ. 13: ದೇಶದ ಸರ್ವೋಚ್ಚ ನ್ಯಾಯಾಲಯವು ವೇಶ್ಯಾ ವೃತ್ತಿಯನ್ನು ಕಾನೂನುಬದ್ದಗೊಳಿಸಿದ ಬೆನ್ನಲ್ಲೇ ಲೈಂಗಿಕ ಸೇವೆ ಒದಗಿಸುವ ಹೆಸರಿನಲ್ಲಿ ಆನ್‌ಲೈನ್‌ ವಂಚನೆ ತಲೆ ಎತ್ತಿದೆ.

ಕಳೆದ ವಾರ ಲೈಂಗಿಕ ಸೇವೆ ಪಡೆಯಲು ಹೋಗಿದ್ದ ಸ್ಥಳೀಯ ಯುವಕನೊಬ್ಬನಿಗೆ 1500 ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಮಡಿಕೇರಿ ನಗರದಲ್ಲೇ ನಡೆದಿದೆ. ಖ್ಯಾತ ಜಾಗತಿಕ ಡೇಟಿಂಗ್‌ ವೆಬ್‌ ಸೈಟ್‌ ಆಗಿರುವ www.locanto.com ಮೂಲಕ ಅಲ್ಲಿ ನೀಡಲಾಗಿದ್ದ ಸಂಖ್ಯೆಗೆ ಕರೆ ಮಾಡಿದ ಯುವಕನ ಮೊಬೈಲ್‌ ಗೆ 8-10 ಸುಂದರ ಯುವತಿಯರ ಫೋಟೋ ಕಳಿಸಿದ್ದಾರೆ. ನಂತರ ಆಯ್ಕೆ ಮಾಡಲು ಹೇಳುತ್ತಾರೆ. ಸುಂದರ ಯುವತಿಯ ಫೋಟೋ ನೋಡಿ ಮರುಳಾದ ಯುವಕನಿಗೆ ಅಪರಿಚಿತ ವ್ಯಕ್ತಿಯು ಅರ್ಧ ಘಂಟೆ ಸೇವೆಗೆ ಮೊದಲಿಗೆ ಬುಕಿಂಗ್‌ ಮಾಡಲು 500 ರೂಪಾಯಿಗಳನ್ನು xxxxxxx169 ನಂಬರಿಗೆ ಗೂಗಲ್‌ ಪೇ ಮಾಡಲು ತಿಳಿಸಿದ್ದಾನೆ.

ಗೂಗಲ್‌ ಪೇ ಮಾಡಿದ ನಂತರ ಆತ ಇನ್ನೊಂದು ಸಂಖ್ಯೆಯಿಂದ ಮಾತನಾಡಿ ಮೇಡಂ ಮಾತಾಡುತ್ತಾರೆ ಮತ್ತು ನಿಮಗೆ ಸೇವೆ
ಕುರಿತು ಮಾತಾಡುತ್ತಾರೆ ಎಂದು ಹೇಳಿದ್ದಾನೆ. ಅಪರಿಚಿತ ಮಹಿಳೆಯ ಸಂಖ್ಯೆಗೆ ಕರೆ ಮಾಡಿದಾಗ ಬುಕಿಂಗ್‌ ಆಗಿದೆ , ಸೇವೆ ನೀಡಬೇಕಾದರೆ ಮೊದಲು 1000 ರೂಪಾಯಿಗಳನ್ನು xxxxxxx146 ನಂಬರಿಗೆ ಗೂಗಲ್‌ ಪೇ ಮಾಡುವಂತೆ ತಿಳಿಸಿದ್ದಾಳೆ. ಅದರಂತೆ ಯುವಕ ಅದೇ ನಂಬರ್‌ ಗೆ ಗೂಗಲ್‌ ಪೇ ಮಾಡಿದಾಗ ಲೊಕೇಷನ್‌ ಕಳಿಸಿ ಅಲ್ಲಿಗೆ ಬರಲು ಹೇಳಿದ್ದಾರೆ.

ಯುವಕನು ಲೊಕೇಷನ್‌ ಹುಡುಕಿಕೊಂಡು ಹೋದಾಗ ಅದು ಸ್ಟುವರ್ಟ್‌ ಹಿಲ್‌ಗೆ ಕರೆದೊಯ್ದಿದ್ದು ಸಮೀಪದಲ್ಲೇ ಹೋಂ ಸ್ಟೇ ಒಂದು ಇತ್ತು. ಯುವಕನು ಪುನಃ ಕರೆ ಮಾಡಿದಾಗ ಹುಡುಗಿಯರು ಹಣ ಕೇಳುತಿದ್ದಾರೆ , ಅವರಿಗೆ ನೀಡಲು 2000 ರೂಪಾಯಿ ಗೂಗಲ್‌ ಪೇ ಮಾಡಿ ಅಂದಿದ್ದಾಳೆ. ಇದು ಮೋಸ ಎಂದು ಅರಿತ ಯುವಕ ವಾಪಾಸ್‌ ಬಂದಿದ್ದಾನೆ. ಪುನಃ ಅದೇ ನಂಬರ್‌ ಗೆ ಕರೆ ಮಾಡಿದಾಗ ಇಲ್ಲದ ಸಬೂಬು ಹೇಳಿ ಕಾಲ ಕಳೆಯುತಿದ್ದಾರೆ .

ಕನ್ನಡದಲ್ಲೇ ಮಾತಾಡಿರುವುದರಿಂದ ಇದು ಹೊರ ಜಿಲ್ಲೆಯ ಖದೀಮರ ಗ್ಯಾಂಗ್‌ ಆಗಿದ್ದು ಇವರ ಬಳಿ ಯುವತಿಯರು ಇರೋದೆ ಇಲ್ಲ. ಆದರೆ ತಮ್ಮ ವಾಟ್ಸ್‌ ಅಪ್‌ ನಲ್ಲಿ ಸುಂದರ ಯುವತಿಯ ಫೋಟೋ ಹಾಕಿಕೊಂಡಿರುತ್ತಾರೆ. ಬರೀ ಫೋಟೋ ತೋರಿಸಿ ಕಾಮನೆ ಕೆರಳಿಸಿ ಹಣ ಮಾಡುವಲ್ಲಿ ತೊಡಗಿದ್ದಾರೆ. ಬಹುತೇಕ ಈ ಲೊಕ್ಯಾಂಟೋ ಸೈಟ್‌ ನಲ್ಲಿ ಮಾತಾಡುವವರೆಲ್ಲ ಹಿಂದಿ ಭಾಷಿಕರಾಗಿದ್ದು ಇವರು ಉತ್ತರ ಭಾರತದ ಊರುಗಳಲ್ಲಿರುತ್ತಾರೆ. ಆದರೆ ಎಲ್ಲಾ ನಗರಗಳಲ್ಲಿಯೂ ಸೇವೆ ಇದೆ ಎಂದು ಹಾಕಿಕೊಂಡಿರುವುದರಿಂದ ಬಹಳಷ್ಟು ಜನರು ಮೋಸ ಹೋಗುತಿದ್ದಾರೆ.

ಇವರು ಅರ್ಧ ಘಂಟೆ ಸೇವೆಗೆ 2 -3 ಸಾವಿರ ರೂಪಾಯಿ ದರ ಹಾಕಿಕೊಂಡಿದ್ದು ರಾತ್ರಿಗೆ 5 ರಿಂದ 10 ಸಾವಿರ ದರ ಹಾಕಿಕೊಂಡಿರುತ್ತಾರೆ. ಕಳಕೊಳ್ಳುವುದು ಸಣ್ಣ ಮೊತ್ತವಾದ ಕಾರಣ ಮತ್ತು ದೂರು ನೀಡಲು ಗೌರವ ಅಡ್ಡಿ ಆಗುವುದರಿಂದ ಯಾರೂ ಇಂತಹ ಪ್ರಕರಣಗಳಿಗೆ ಪೋಲೀಸ್‌ ದೂರು ನೀಡಲು ಹೋಗುವುದಿಲ್ಲ. 5 ದಿನಗಳ ಹಿಂದಷ್ಟೇ ಇದೇ ರೀತಿಯ ಸೇವೆ ಒದಗಿಸುವುದಾಗಿ ವೆಬ್‌ಸೈಟ್‌ ನಲ್ಲಿ ಜಾಹೀರಾತು ನೀಡಿ ಸೇವೆಯ ಅರ್ಧದಷ್ಟನ್ನು ಮುಂಗಡ ಪಡೆದುಕೊಂಡು 80 ರಿಂದ 100 ಜನರ ಬಳಿ ಬರೋಬ್ಬರಿ 8 ಲಕ್ಷ ರೂಪಾಯಿಗಳನ್ನು ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

See also  ತಾವೂರಿನಲ್ಲಿ ಶ್ರದ್ಧಾಭಕ್ತಿಯ ನಾಗ ಪ್ರತಿಷ್ಠಾಪನೆ

ಲೊಕ್ಯಾಂಟೋ ವೆಬ್‌ ಸೈಟ್‌ ನಲ್ಲಿ ಮೊದಲಿನಿಂದಲೂ ಲೈಂಗಿಕ ಸೇವೆಯು ನಡೆಯುತಿತ್ತು. ಈಗ ಸುಪ್ರೀಂ ಕೋರ್ಟಿನ ತೀರ್ಪಿನಿಂದ ವೇಶ್ಯಾ ವೃತ್ತಿಗೆ ಕಾನೂನು ಮಾನ್ಯತೆಯೂ ಸಿಕ್ಕಿರುವುದರಿಂದ ವಂಚನೆ ಪ್ರಕರಣಗಳು ಮತ್ತಚ್ಟು ಹೆಚ್ಚಾಗಲಿವೆ. ತೀರ್ಪಿನ ಪ್ರಕಾರ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯನ್ನು ಮತ್ತು ಗಿರಾಕಿಗಳನ್ನು ಪೋಲೀಸರು ಬಂಧಿಸುವಂತಿಲ್ಲ, ಮೊಕದ್ದಮೆ ದಾಖಲು ಮಾಡುವಂತಿಲ್ಲ. ಆದರೆ ಪೋಲೀಸರು ದಾಳಿ ನಡೆಸಿದಾಗ ಹೋಟೆಲ್‌ , ಲಾಡ್ಜ್‌ , ಹೋಂ ಸ್ಟೇ ಗಳಲ್ಲಿ ಲೈಂಗಿಕ ಸೇವೆ ಪತ್ತೆ ಆದಲ್ಲಿ ಅದರ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಬಹುದಾಗಿದೆ.

ಮಹಿಳೆ ತನ್ನ ಗೃಹದಲ್ಲೇ ಲೈಂಗಿಕ ವೃತ್ತಿ ನಡೆಸುತಿದ್ದರೆ ಕೂಡ ಬಂಧಿಸುವಂತಿಲ್ಲ ಮೊಕದ್ದಮೆ ದಾಖಲಿಸುವಂತಿಲ್ಲ. ಆದರೆ ಹೆಚ್ಚಿನ ಹೆಣ್ಣು ಮಕ್ಕಳನ್ನು ಸೇರಿಸಿಕೊಂಡು ವೃತ್ತಿ ನಡೆಸುತಿದ್ದರೆ ಅವರ ವಿರುದ್ದ ಮೊಕದ್ದಮೆ ದಾಖಲಿಸಬಹುದಾಗಿದೆ.  ಸಂವಿಧಾನದ ಪರಿಚ್ಚೇದ 21 ರ ಪ್ರಕಾರ ಮಹಿಳೆಯು ಗೌರವಯುತ ಜೀವನ ನಡೆಸುವ ಹಕ್ಕನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟು ಹೆಣ್ಣು ಮಕ್ಕಳ ಶೋಷಣೆ ತಪ್ಪಿಸಲೆಂದೇ ವೇಶ್ಯಾ ವೃತ್ತಿಯನ್ನು ಕಾನೂನುಬದ್ದಗೊಳಿಸಿದೆ. ಆದರೆ ಬ್ಯಾಂಕ್‌ ಮ್ಯಾನೇಜರ್‌ ರಂತೆ ಫೋನ್‌ ಮಾಡಿ ಎಟಿಎಮ್‌ ಪಿನ್‌ ನಂಬರ್‌ ಪಡೆಯುವ, ಎಎಲ್‌ಎಕ್ಸ್‌ ನಲ್ಲಿ ಆರ್ಮಿ ಅಧಿಕಾರಿಯ ಫೋಟೋ ಹಾಕಿಕೊಂಡು ಕಾರು ಬೈಕುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುವ ನೆಪದಲ್ಲಿ ವಂಚಿಸುವ , ಸ್ನಾಪ್‌ ಡೀಲ್‌ , ಅಮೆಜಾನ್‌ ನಲ್ಲಿ ನಿಮಗೆ ಟಿವಿ, ಮೊಬೈಲ್‌ ಬಹುಮಾನ ಬಂದಿದೆ ಎಂದು ಮನೆ ವಿಳಾಸಕ್ಕೆ ಅರ್ಜಿ ಕಳಿಸಿ ವಂಚಿಸುವ ಖದೀಮರ ಗ್ಯಾಂಗ್‌ ಇದೀಗ ಸುಂದರ ಹುಡುಗಿಯರ ಫೋಟೋ ತೋರಿಸಿ ವಂಚಿಸಲು ಮುಂದಾಗಿದ್ದು ಯುವ ಜನಾಂಗ ಇಂತಹ ಖದೀಮರ ಬಲೆಗೆ ಬೀಳದಂತೆ ಜಾಗ್ರತೆ ವಹಿಸಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1620
Coovercolly Indresh

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು