News Kannada
Thursday, July 07 2022

ಮಡಿಕೇರಿ

“ಕೂರ್ಗ್ ಚಾಂಪಿಯನ್‍ಶಿಪ್ ಕಪ್” ಟೇಬಲ್ ಟೆನ್ನಿಸ್ : ಜೂ.23 ರಿಂದ ಆರಂಭ - 1 min read

Photo Credit :

ಮಡಿಕೇರಿ : ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಜೂ.23 ರಿಂದ 26ರ ವರೆಗೆ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ “ಕೂರ್ಗ್ ಚಾಂಪಿಯನ್‍ಶಿಪ್ ಕಪ್” ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಷನ್‍ನ ಕಾರ್ಯದರ್ಶಿ ಮಲ್ಲೇಂಗಡ ರಚನ್ ಪೊನ್ನಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜೂ.23, 24, 25 ಮತ್ತು 26 ರಂದು ನಾಲ್ಕು ದಿನಗಳ ಕಾಲ ಸಬ್ ಜೂನಿಯರ್ (15 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗೆ) ಜೂನಿಯರ್ (25 ವರ್ಷದೊಳಗಿನ ಹುಡುಗರು ಮತ್ತು ಹುಡುಗಿಯರು), ಪುರುಷರು ಮತ್ತು ಮಹಿಳೆಯರು’ (30 ವರ್ಷ ಮೇಲ್ಪಟ್ಟವವರು) ಮಿಶ್ರ ಡಬಲ್ಸ್ ಮತ್ತು ವೆಟರನ್ಸ್ (55 ವರ್ಷ ಮೇಲ್ಪಟ್ಟವರಿಗೆ) 5 ವಿಭಾಗಗಳಾಗಿ ಪಂದ್ಯಾವಳಿ ನಡೆಸಲಾಗುವುದೆಂದರು.

ಪಂದ್ಯಾವಳಿಯ ವಿಜೇತರಿಗೆ ಪದಕದೊಂದಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದ ಅವರು, ಆಸಕ್ತರು ಪ್ರವೇಶ ಶುಲ್ಕ ಸಬ್ ಜೂನಿಯರ್, ಜೂನಿಯರ್ -ಉಚಿತ, ಪುರುಷರ ಸಿಂಗಲ್, ಮಹಿಳಾ ಸಿಂಗಲ್, ವೆಟರನ್ಸ್ ಸಿಂಗಲ್ ರೂ.300 ಹಾಗೂ ಪುರುಷರ ಡಬಲ್, ಮಹಿಳೆಯರ ಡಬಲ್, ಮಿಶ್ರ ಡಬಲ್ಸ್, ವೆಟರನ್ಸ್ ಡಬಲ್ ರೂ. 500 ಪಾವತಿಸಿ ಜೂ.20ರ ಒಳಗೆ 9845606784, 9110677030, 9483598761 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಕಳೆದ 20 ವರ್ಷಗಳಿಂದ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕೋವಿಡ್ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಲಿಲ್ಲ. ಇದೀಗ ನೂತನ ಸಮಿತಿಯನ್ನು ರಚಿಸಿಕೊಂಡು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಮೊಹಮ್ಮದ್ ಆಸಿಫ್, ಅಧ್ಯಕ್ಷ ಪ್ರವೀಣ್ ಶೇಟ್, ಖಜಾಂಚಿ ಕುಮರೇಶ್, ಸಹ ಕಾರ್ಯದರ್ಶಿ ಅಝದ್ ಹಾಗೂ ನಿರ್ದೇಶಕ ಜಿ.ವಿ.ರವಿ ಕುಮಾರ್ ಉಪಸ್ಥಿತರಿದ್ದರು.

See also  ಕೊಡಗಿಗೆ ಪ್ರವಾಸಕ್ಕೆ ಬಂದ ಮೂವರು ನೀರು ಪಾಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1620
Coovercolly Indresh

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು