ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಥೆಗಾರ್ತಿ ಗೌರಮ್ಮ ಅವರ ಹೆಸರಿನಲ್ಲಿ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿದೆ. ಗೌರಮ್ಮ ದತ್ತಿ ಕಾರ್ಯಕ್ರಮವಾಗಿ ಈ ಸ್ಪರ್ಧೆ ನಡೆಯಲಿದೆ.
ಸಣ್ಣ ಕತೆಗಳ ಗೌರಮ್ಮ ದತ್ತಿ ಸ್ಪರ್ಧೆ ಯು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಬೆಳವಣಿಗೆ ಉಂಟಾಗಲು ಮತ್ತು ಆಸಕ್ತಿ ಮೂಡಲು ಇದು ಉತ್ತಮ ಕಾರ್ಯಕ್ರಮವಾಗಿದೆಯಲ್ಲದೆ, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರೌಡಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಸ್ಥಳದಲ್ಲೆ ಕತೆ ರಚಿಸತಕ್ಕದ್ದು, ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ಕತೆ ರಚಿಸತಕ್ಕದ್ದು, ಕತೆ ಬರೆಯಲು ಹಾಳೆಯನ್ನು ಸ್ಥಳದಲ್ಲಿ ನೀಡಲಾಗುವುದು. ಕತೆಯ ವಿಷಯದ ಆಯ್ಕೆಯ ಸ್ವಾತಂತ್ರ್ಯವಿದ್ಯಾರ್ಥಿಗೆ ಇರುತ್ತದೆ. ಒಂದು ಶಾಲೆಯಿಂದ ಎರಡು ಅಥವಾ ಮೂರು ವಿದ್ಯಾರ್ಥಿಗಳು ಸ್ಪರ್ಧಿಸಬಹುದು.ಸ್ಪರ್ಧಿಸುವ ವಿದ್ಯಾರ್ಥಿಯು ಶಾಲಾ ಮುಖ್ಯೋಪಾದ್ಯಾಯರಿಂದ ಸ್ಪರ್ಧಿಸುವ ಕುರಿತು ಪತ್ರ ತರತಕ್ಕದ್ದು. ಪ್ರತಿ ತಾಲೂಕಿನ ಕೇಂದ್ರ ಸ್ಥಾನದ ಶಾಲೆಯಲ್ಲಿ ಈ ಸ್ಪರ್ಧೆ ನಡೆಯಲಿದ್ದು ದಿನಾಂಕ ನಿಗದಿಗೊಳಿಸಿ ತಿಳಿಸಲಾಗುವುದು ಈ ಕುರಿತು ಅರ್ಜಿ ಸಲ್ಲಿಸಲು ಜುಲೈ 8 ಕೊನೆಯ ದಿನವಾಗಿದೆ.
ಅರ್ಜಿಯನ್ನು ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್.ಜಿ.ಆರ್.ವೈ ಕಟ್ಟಡ, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ, ಕೊಡಗು-571201 ಎಂ.ಪಿ.ಕೇಶವ ಕಾಮತ್, ಅಧ್ಯಕ್ಷರು. 9448346276, ಎಸ್.ಐ. ಮುನೀರ್ ಅಹಮದ್, ಗೌ.ಕಾರ್ಯದರ್ಶಿ. 9886181613, ರೇವತಿ ರಮೇಶ್, ಗೌ. ಕಾರ್ಯದರ್ಶಿ. 9663254829 ನ್ನು ಸಂಪರ್ಕಿಸಬಹುದಾಗಿದೆ.