News Kannada
Thursday, August 11 2022

ಮಡಿಕೇರಿ

ಭಾಗಮಂಡಲ:  ಭಾಗಮಂಡಲದಲ್ಲಿ ಸಂಭ್ರಮದ ಪೊಲಿಂಕಾನ ಉತ್ಸವ - 1 min read

A festive Polinkana festival in Bhagamandala

ಭಾಗಮಂಡಲ:  ಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವ ವಿಶೇಷ ಪೂಜಾ ಕೈಂಕರ್ಯದೊಂದಿಗೆ ನೆರವೇರಿತು.

ದೇವಾಲಯದಲ್ಲಿ ಬಾಳೆ ದಿಂಡಿನಿಂದ ಮಾಡಲಾದ ಉತ್ಸವದ ಮಂಟಪಕ್ಕೆ ದೀಪ ಬೆಳಗಿಸಿ, ಕರಿಮಣಿ ಬಿಚ್ಚೋಲೆ, ಕಾವೇರಿ ಮಾತೆಗೆ ವಸ್ತ್ರಾಭರಣ, ಬೆಳ್ಳಿತಟ್ಟೆ, ಬೆಳ್ಳಿಯ ತೊಟ್ಟಿಲು, ಚಿನ್ನದ ಮಾಂಗಲ್ಯ ಸರವನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯಕ್ಕೆ ಪ್ರದಕ್ಷಿಣೆಹಾಕಿ ತ್ರಿವೇಣಿ ಸಂಗಮಕ್ಕೆ ಕೊಂಡೊಯ್ದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಕಾವೇರಿ ನದಿ ನೀರಿನಲ್ಲಿ ಬಾಳೆದಿಂಡಿನ ಮಂಟಪವನ್ನು ತೇಬಿಡಲಾಯಿತು.

ದೇವಾಲಯದ ಅರ್ಚಕರಾದ ರವಿ ಭಟ್ ಹಾಗೂ ಹರೀಶ್ ಭಟ್ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಗಳು ಜರುಗಿದ್ದು, ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ಪಾರುಪತ್ತೆಗಾರ ಪೊನ್ನಣ್ಣ, ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಸದಸ್ಯರಾದ ಶಿರಕಜ್ಜೆ ನಾಗೇಶ್, ದಂಡಿನ ಜಯಂತ್, ಸ್ಥಳೀಯ ದೇವಾಲಯದ ತಕ್ಕರಾದ ಹೊಸಗದ್ದೆ ಭಾಸ್ಕರ, ಕುದುಪಜೆ  ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ಹಿಂದೆ ಕಕ್ಕಡ ಆರಂಭದಲ್ಲಿಯೇ ವ್ಯಾಪಕ ಮಳೆಯಾಗುತ್ತಿತ್ತು. ಇದರಿಂದಾಗಿ ಯಾವುದೇ ಜೀವಕ್ಕೆ ಹಾನಿಯಾಗದಂತೆ ಕಾವೇರಿ ಮಾತೆಗೆ ಪ್ರಾರ್ಥಿಸಲು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇದೊಂದು ರೀತಿಯಲ್ಲಿ ಜೀವನದಿ ಕಾವೇರಿಯ ತ್ರಿವೇಣಿ ಸಂಗಮಕ್ಕೆ ಅರ್ಪಿಸುವ ಬಾಗಿನ ಎಂದರೂ ತಪ್ಪಾಗಲಾರದು.

See also  ವಿಜಯಪುರ: ಗುಜರಾತ್ನ ನಕಲಿ ಒಣದ್ರಾಕ್ಷಿ ವ್ಯಾಪಾರಿಗಳನ್ನು ಬಂಧಿಸಿದ ಪೊಲೀಸರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು