ಮಡಿಕೇರಿ: ಗ್ರೀನ್ ಸಿಟಿ ಫೋರಂ, ಇಳೆ ಸಂಸ್ಥೆ, ಮಡಿಕೇರಿ ಹೊರವಲಯದಇಬ್ನಿರೆಸಾರ್ಟ್ ವತಿಯಿಂದ ಹೆದ್ದಾರಿ ಬದಿ ಸ್ವಚ್ಛತೆಕಾರ್ಯಕ್ರಮಇತ್ತೀಚೆಗೆ ನಡೆಯಿತು.
ಮಡಿಕೇರಿಯ ಸಂಪಿಗೆಕಟ್ಟೆ ಬಳಿಯಿಂದ ಸಿಂಕೋನವರೆಗೆ ಹೆದ್ದಾರಿ ಬದಿ ಕಸ ಹೆಕ್ಕಿ ಸ್ವಚ್ಛ ಮಾಡಲಾಯಿತು. ಮದ್ಯ ಬಾಟಲಿ, ಪ್ಲಾಸ್ಟಿಕ್, ಅಂಗಡಿ ಮಳಿಗೆಗಳಿಂದ ತಂದುಎಸೆಯಲಾಗಿದ್ದತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಒಂದು ಪಿಕಪ್ ವಾಹನದಷ್ಟುತ್ಯಾಜ್ಯ ಸಂಗ್ರಹವಾಯಿತು. ಸ್ವಚ್ಛತಾಕಾರ್ಯದಲ್ಲಿಇಬ್ನಿರೆಸಾರ್ಟ್ ಸಿಬ್ಬಂದಿ, ಇಳೆ ಸಂಸ್ಥೆ ಸ್ವಯಂಸೇವಕರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಇಬ್ನಿ ರೆಸಾರ್ಟ್ ಆಡಳಿತಾಧಿಕಾರಿ ಪ್ರಿಯಾಂಕ, ಕೊಡಗು ಸುಂದರವಾದ ಪ್ರದೇಶ. ಇಲ್ಲಿನ ಪರಿಸರ ಆಸ್ವಾದಿಸುವುದಕ್ಕೆ ವಿವಿಧೆಡೆಯಿಂದ ಜನರು ಬರುತ್ತಾರೆ. ಕೊಡಗಿಗೆ ಪ್ರವಾಸ ಬಂದಾಗ ಇಲ್ಲಿನ ಪರಿಸರದ ಸ್ವಚ್ಛತೆ ಬಗ್ಗೆ ಪ್ರವಾಸಿಗರು ಹೆಚ್ಚಿನ ಕಾಳಜಿ ವಹಿಸಬೇಕು. ಸಂಸ್ಥೆ ವತಿಯಿಂದ ವರ್ಷಕ್ಕೆಎರಡು ಬಾರಿ ಸ್ವಚ್ಛತಾ ಕಾರ್ಯ ಮಾಡುತ್ತೇವೆ. ಪ್ರತಿ ಬಾರಿ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತದೆ ಎಂದು ವಿಷಾಧಿಸಿದರು.
ಇಳೆ ಸಂಸ್ಥೆಯ ರಂಜಿತ್ ಮಾತನಾಡಿ, ಜಿಲ್ಲೆಯಲ್ಲಿರುವ ಹೋಂ ಸ್ಟೇ, ರೆಸಾರ್ಟ್ನವರು ತಮ್ಮಲ್ಲಿಗೆ ಬರುವ ಅತಿಥಿಗಳಿಗೆ ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಕಂಡಕಂಡಲ್ಲಿ ಕಸ ಎಸೆಯದಂತೆ ಜಾಗೃತಿ ಫಲಕಗಳನ್ನು ಅಳವಡಿಸಿ ಎಚ್ಚರಿಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.
ಗ್ರೀನ್ ಸಿಟಿ ಫೋರಂ ಸದಸ್ಯ ಮಾದೇಟಿರ ತಿಮ್ಮಯ್ಯ, ಇಬ್ನಿ ರೆಸಾರ್ಟ್ ಹಾಗೂ ಇಳೆ ಸಂಸ್ಥೆ ಪ್ರಮುಖರು ಈ ಸಂದರ್ಭ ಇದ್ದರು.