News Kannada
Saturday, September 23 2023
ಮಡಿಕೇರಿ

ಮಡಿಕೇರಿ: ಕೆಇಆರ್‌ಸಿ ನಿಯಮ ಉಲ್ಲಂಘನೆ- ಹಣ ಮರಳಿಸಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು

Madikeri: Consumer Disputes Redressal Commission orders refund of money for violation of KERC rules
Photo Credit : By Author

ಮಡಿಕೇರಿ, ಆ.4: ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭ ಕೆಇಆರ್‌ಸಿ ನಿಯಮ ಉಲ್ಲಂಘಿಸಿ ಗ್ರಾಹಕರಿಂದ ಅಧಿಕ ಹಣ ಪಡೆದ ಚೆಸ್ಕಾಂ ಸಂಬಂಧಿಸಿದ ನಾಲ್ವರು ಗ್ರಾಹಕರಿಗೆ ಹಣ ಮರಳಿಸಬೇಕೆಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.

ಲೇಔಟ್ ಗಳನ್ನು ಹೊರತು ಪಡಿಸಿ ಉಳಿದ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭ ಕೆಇಆರ್‌ಸಿ ನಿಯಮದನ್ವಯ ಅಭಿವೃದ್ಧಿ ಶುಲ್ಕ ಪಡೆಯಲು ಅವಕಾಶವಿಲ್ಲ. ಆದರೆ ಮಡಿಕೇರಿಯ ನಗರದ ಎಂ.ಕೆ.ಅರುಣ್ ಕುಮಾರ್, ಎಫ್.ಜೋಸೆಫ್, ಎಸ್. ಈ. ಹೇಮನಾಥ್ ಹಾಗೂ ಜಿ.ಮಹೇಶ್ವರಿ ಎಂಬುವವರಿಂದ ಕೆಇಆರ್‌ಸಿ ನಿಯಮದಡಿ ಅಧಿಕ ಶುಲ್ಕ ವಿಧಿಸಿದ ಆರೋಪವನ್ನು ಚೆಸ್ಕಾಂ ಎದುರಿಸುತ್ತಿತ್ತು.

ಕೊಡಗು ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ ಗ್ರಾಹಕರ ಹಿತದೃಷ್ಟಿಯಿಂದ ಚೆಸ್ಕಾಂ ಅಧಿಕಾರಿಗಳ ಈ ಕ್ರಮವನ್ನು ವಿರೋಧಿಸಿತ್ತು. ಆದರೆ ಅಧಿಕಾರಿಗಳು ಕೆಇಆರ್‌ಸಿ ನಿಯಮವನ್ನು ಸಮರ್ಥಿಸಿಕೊಂಡ ಹಿನ್ನೆಲೆ ಸಂಬಂಧಿಸಿದ ನಾಲ್ವರು ಗ್ರಾಹಕರು ನ್ಯಾಯಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಆಯೋಗ ಚೆಸ್ಕಾಂ ಕೆಇಆರ್‌ಸಿ ನಿಯಮ ಉಲ್ಲಂಘಿಸಿರುವುದನ್ನು ಪ್ರತಿಪಾದಿಸಿ ಗ್ರಾಹಕರ ಹಣವನ್ನು ಮರಳಿಸುವಂತೆ ತೀರ್ಪು ನೀಡಿದೆ.

ಎಂ.ಕೆ.ಅರುಣ್ ಕುಮಾರ್ ಅವರ ಪ್ರಕರಣ ಸಿಸಿ ಸಂಖ್ಯೆ:68/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.12 ಸಾವಿರವನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ.6 ರ ಬಡ್ಡಿ ದರದಂತೆ ಆದೇಶದ ದಿನಾಂಕದಿಂದ 45 ದಿನದ ಒಳಗೆ ಪಾವತಿಸಬೇಕು.

ಎಫ್.ಜೋಸೆಫ್ ಅವರ ಪ್ರಕರಣ ಸಿ.ಸಿ. ಸಂಖ್ಯೆ: 69/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.16,650 ಗಳನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದಿಂದ 45 ದಿನದ ಒಳಗೆ ಪಾವತಿಸಬೇಕು.
ಎಸ್.ಈ.ಹೇಮನಾಥ್ ಅವರ ಪ್ರಕರಣ ಸಿಸಿ ಸಂಖ್ಯೆ 70/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.24 ಸಾವಿರವನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದ 45 ದಿನದ ಒಳಗೆ ಪಾವತಿಸಬೇಕು.

ಜಿ.ಮಹೇಶ್ವರಿ ಅವರ ಪ್ರಕರಣ ಸಿ.ಸಿ ಸಂಖ್ಯೆ:71/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.15,350 ಗಳನ್ನು ಹಿಂತಿರುಗಿಸತಕ್ಕದ್ದು, ತಪ್ಪಿದ್ದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದ 45 ದಿನದ ಒಳಗೆ ಪಾವತಿಸಬೇಕು.

ಫರ‍್ಯಾದುದಾರರುಗಳಿಗೆ ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಪ್ರತಿ ಪ್ರಕರಣಗಳಿಗೆ ರೂ.10 ಸಾವಿರವನ್ನು ಪರಿಹಾರವಾಗಿ ನೀಡತಕ್ಕದ್ದು, ತಪ್ಪಿದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದಿಂದ 45 ದಿನದ ಒಳಗೆ ಪಾವತಿಸಬೇಕು.
ಫರ‍್ಯಾದುದಾರರುಗಳ ನಾಲ್ಕು ಪ್ರಕರಣಗಳಲ್ಲಿ ಖರ್ಚು ವೆಚ್ಚಗಳಿಗೆ ಪ್ರತಿ ಪ್ರಕರಣಗಳಲ್ಲಿಯೂ ರೂ.5 ಸಾವಿರವನ್ನು ಪಾವತಿಸಲು ಎದುರುದಾರರು ಬಾದ್ಯರಾಗಿರುತ್ತಾರೆ. ಫರ‍್ಯಾದುದಾರರಿಗೆ ಉಂಟು ಮಾಡಿರುವ ಮಾನಸಿಕ ವೇದನೆಗೆ ರೂ.5 ಸಾವಿರವನ್ನು ಪಾವತಿಸಲು ಎದುರುದಾರರು ಬಾದ್ಯರಾಗಿರುತ್ತಾರೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.

See also  ಪುತ್ತೂರು: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನಃಸ್ಥಿತಿ ಬೆಳೆಸಿಕೊಳ್ಳಬೇಕು -ಸುಬ್ರಹ್ಮಣ್ಯ ನಟ್ಟೋಜ

ನಾಲ್ವರು ಗ್ರಾಹಕರ ಪರವಾಗಿ ವಕೀಲ ಯಾಲದಾಳು ಮನೋಜ್ ಬೋಪಯ್ಯ ವಾದ ಮಂಡಿಸಿದರು. ಈ ತೀರ್ಪನ್ನು ಸ್ವಾಗತಿಸಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ್ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಪಿ.ಎನ್.ರವಿಚಂದ್ರ ಹಾಗೂ ಖಜಾಂಚಿ ಮಹಮ್ಮದ್ ಷರೀಫ್ ಚೆಸ್ಕಾಂ ಅಧಿಕಾರಿಗಳು ನಿಯಮ ಉಲ್ಲಂಘಿಸುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸಬಾರದು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು