ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಚೆಟ್ಟಳ್ಳಿ ಸಮೀಪದ ಕೂಡ್ಲೂರು ಚೆಟ್ಟಳ್ಳಿಯಲ್ಲಿ ಬುಧವಾರ ನಡೆದಿದೆ.
ಚೆಟ್ಟಳ್ಳಿ ಸಮೀಪದ ಕುಡ್ಲೂರ ಚೆಟ್ಟಳ್ಳಿ (ಮಲಕೋಡು) ನಿವಾಸಿ ಮೊಹಮ್ಮದ್ ಮೃತಪಟ್ಟವರು. ಬೆಳಗ್ಗೆ ಕೆಲಸಕ್ಕೆಂದು ತೆರಳುವಾಗ ಕಂಡಕರೆ ಸಮೀಪದಲ್ಲಿ ಆನೆಯಿಂದ ತುಳಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸುತ್ತಿರುವಾಗ ದಾರಿ ಮಧ್ಯೆ ಅವರು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.