ಮಡಿಕೇರಿ, ಆ.14: ಕರ್ನಾಟಕ ರಾಜ್ಯ ವುಶು ಅಸೋಸಿಯೇಷನ್ ವತಿಯಿಂದ ಶಿವಮೊಗ್ಗದಲ್ಲ್ಲಿ ನಡೆದ 21 ನೇ ರಾಜ್ಯ ಮಟ್ಟದ ವುಶು ಚಾಂಪಿಯನ್ ಶಿಪ್‌ನಲ್ಲಿ ಬೆಟ್ಟಗೇರಿ ವುಶು ಸಂಸ್ಥೆಯ ವಿದ್ಯಾರ್ಥಿಗಳು 3 ಕಂಚಿನ ಪದಕ ಗೆದ್ದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಎ.ಎಸ್.ಪವನ್, ಪಿ.ಎನ್.ಜೀವ ಹಾಗೂ ಟಿ.ಎಸ್.ವಿಶಾಲ್ ಕಂಚು ಪಡೆದುಕೊಂಡಿದ್ದಾರೆ. ಇವರುಗಳು ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಸಂತ ಅಲೋಸಿಸ್ ಶಾಲೆಯ ವಿದ್ಯಾರ್ಥಿಗಳು.
ಕೊಡಗು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ಹಾಗೂ ತರಬೇತುದಾರ ಬಿ.ಎ.ಆನಂದ ಪೂಜಾರಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.