ಮಡಿಕೇರಿ : ಕೊಡಗು ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ತಾಲ್ಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಾಕತ್ತೂರು ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ನಡೆದ ಗ್ರಾಮೀಣ ಕ್ರೀಡಾಕೂಟ ಗ್ರಾಮಸ್ಥರ ಗಮನ ಸೆಳೆಯಿತು.
ತೊಂಭತ್ತುಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ತೀವ್ರ ಪೈಪೋಟಿ ನೀಡಿ ಬಹುಮಾನ ಗೆದ್ದರು.
ತೊಂಭತ್ತುಮನೆ ತ್ರೀನೇತ್ರ ಯುವಕ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಹಾಕತ್ತೂರು ಗ್ರಾ.ಪಂ.ಉಪಾಧ್ಯಕ್ಷ ಎಚ್.ಟಿ.ಕಿರಣ, ಸದಸ್ಯ ಶೈನಿ, ತೊಂಭತ್ತುಮನೆ ಶಾಲಾಭಿವೃದ್ಧಿ ಹಾಗೂ ಮೇಲ್ತುವಾರಿ ಸಮಿತಿ ಅಧ್ಯಕ್ಷ ಕೆ.ವೈ.ಜಲೀಲ್, ತೊಂಭತ್ತು ಮನೆ ತ್ರೀನೇತ್ರ ಯುವಕ ಸಂಘದ ಸಲಹಾಗಾರ ಎ.ಕೆ.ಕಾರ್ಯಪ್ಪ, ಕುಶಾಲನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರು, ಸದಸ್ಯ ಕಾರ್ಯದರ್ಶಿ ಎ.ಎನ್.ಪ್ರವೀಣ್, ಹಾಕತ್ತೂರು ಗ್ರಾಮ ಸಹಾಯಕ ಹಾಗೂ ಮಡಿಕೇರಿ ತಾಲೂಕು ತಳುವೆರ ಜನಪದ ಕೂಟದ ಸಂಚಾಲಕ ಬಿ.ಎನ್.ಪ್ರಸಾದ್, ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಇ.ದಿವಾಕರ್, ಕಾರ್ಯದರ್ಶಿ ಎಂ.ಎಂ.ಅಬೂಬಕರ್, ಸಹ ಕಾರ್ಯದರ್ಶಿ ರಂಜಿತ್, ಸಂಸ್ಕೃತಿಕ ಕಾರ್ಯದರ್ಶಿ ಎಂ.ಕೆ.ರಾಜ, ಸದಸ್ಯರಾದ ಸುನೀಲ್, ರಮೇಶ್, ಹರೀಶ್, ಮಂಜುನಾಥ್, ದೇವಿಪ್ರಸಾದ್, ಕಾಸಿಮ್, ನಾಗೇಶ್ ನಾಯ್ಡು, ತಿಮ್ಮಯ್ಯ, ರಂಜನ್, ಬಹುಮಾನ ದಾನಿಗಳಾದ ವಿಠಲ ಪಾಲ್ಗೊಂಡಿದ್ದರು.
ಸ್ಪರ್ಧಾ ವಿಜೇತರು:
ಪುರುಷರ ಹಗ್ಗಜಗ್ಗಾಟದಲ್ಲಿ ವಿನಾಯಕ ಎ ತಂಡ ಪ್ರಥಮ, ಎ.ವೈ.ಸಿ ತಂಡ ದ್ವಿತೀಯ, ಮಹಿಳೆಯರ ಹಗ್ಗಜಗ್ಗಟದಲ್ಲಿ ಚೂರಿಕಾಡು ಗರ್ಲ್ಸ್ ಪ್ರಥಮ, ತೊಂಭತ್ತುಮನೆ ವಿನಾಯಕ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಕಾಳು ಹೆಕ್ಕುವ ಬಾಲಕರ ವಿಭಾಗದಲ್ಲಿ ಮುರ್ಶಿದ್ ಪ್ರಥಮ, ಫಹೀಮ್ ದ್ವಿತೀಯ, ಸಾತ್ವಿಕ್ ತೃತೀಯ, ಬಾಲಕಿಯರ ವಿಭಾಗದಲ್ಲಿ ದಿಯಾ ಪ್ರಥಮ, ಆಮ್ನ ದ್ವಿತೀಯ, ಮಾನ್ವಿತ ತೃತೀಯ ಸ್ಥಾನ ಪಡೆದುಕೊಂಡರು.
100 ಮೀ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಆಶಿಕ್ ಪ್ರಥಮ, ಅಫ್ಸಲ್ ದ್ವಿತೀಯ, ನಿದೀಶ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಸಮ್ನ ಪ್ರಥಮ, ವೈಷ್ಣವಿ ದ್ವಿತೀಯ, ದಿಯಾ ತೃತೀಯ ಸ್ಥಾನ ಪಡೆದುಕೊಂಡರು.
6 ರಿಂದ 7ನೇ ತರಗತಿ ವಿದ್ಯಾರ್ಥಿಗಳ 200 ಮೀ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸಿನಾನ್ ಪ್ರಥಮ, ಅಫೀಸ್ ದ್ವಿತೀಯ, ಶೃಬಿನ್ ತೃತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಸಹಾನ ಪ್ರಥಮ, ಪಿ.ಆರ್.ಜಸ್ಮಿತಾ ದ್ವಿತೀಯ, ಫಾತಿಮಾ ತೃತೀಯ ಬಹುಮಾನ ಪಡೆದರು.
8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ 200 ಮೀ. ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಇರ್ಫಾನ್ ಪ್ರಥಮ, ನವಾಜ್ ದ್ವಿತೀಯ, ಸಚಿನ್ ತೃತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ರಕ್ಷಿತ ಪ್ರಥಮ, ಅಫ್ರಿನಾ ದ್ವಿತೀಯ, ಸ್ವಾತಿ ತೃತೀಯ ಸ್ಥಾನ ಪಡೆದುಕೊಂಡರು.
300 ಮೀ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ರಾಶಿದ್ ಪ್ರಥಮ, ಸಿರಾಜುದ್ದೀನ್ ದ್ವಿತೀಯ, ಸಿಯಾಬುದ್ದೀನ್ ತೃತೀಯ,
ಬಾಲಕಿಯರ ವಿಭಾಗದಲ್ಲಿ ತೃಪ್ತಿ ಪ್ರಥಮ, ರಕ್ಷಿತಾ ದ್ವಿತೀಯ ಹಾಗೂ ದೀಪ್ತಿ ತೃತೀಯ ಸ್ಥಾನ ಪಡೆದರು.
ಸಾರ್ವಜನಿಕರ ರಸ್ತೆ ಓಟದಲ್ಲಿ ಪುರುಷರ ವಿಭಾಗದಲ್ಲಿ ಎಂ.ಎ.ಅನ್ಸಾರ್ ಪ್ರಥಮ, ರಾಶಿದ್ ದ್ವಿತೀಯ, ಆಶಿಕ್ ತೃತೀಯ ಸ್ಥಾನ,
ಮಹಿಳೆಯರ ವಿಭಾಗದಲ್ಲಿ ರಕ್ಷಿತಾ ಪ್ರಥಮ, ಸ್ವಾತಿ ದ್ವಿತೀಯ, ಶಿಲ್ಪ ತೃತೀಯ ಬಹುಮಾನ ಪಡೆದುಕೊಂಡರು.
ಸಾರ್ವಜನಿಕ ಮಹಿಳೆಯರ ಸಂಗೀತಾ ಕುರ್ಚಿ ಸ್ಪರ್ಧೆಯಲ್ಲಿ ಕುಶ್ಮಿತಾ ಪ್ರಥಮ, ಸುಷ್ಮಾ ದ್ವಿತೀಯ, ರಮ್ಯಶ್ರೀ ತೃತೀಯ, ನಿಂಬೆ
ಚಮಚ ಸ್ಪರ್ಧೆಯಲ್ಲಿ ಸುಮ ಪ್ರಥಮ, ಪ್ರಮೀಳಾ ದ್ವಿತೀಯ, ಸರಸ್ವತಿ ತೃತೀಯ ಬಹುಮಾನ ಪಡೆದರು.
ಪುರುಷರ ಸಾರ್ವಜನಿಕ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಬಿ.ಬಿ.ರಮೇಶ ಪ್ರಥಮ, ಲಿತೀನ್ ದ್ವಿತೀಯ, ಅಲಿ ತೃತೀಯ, ಪುಟಾಣಿಗಳ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಮುರ್ಕಿದ್ ಪ್ರಥಮ, ತ್ರಿಸಾನ್ ದ್ವಿತೀಯ, ತನ್ಮಯ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಪಾಣತ್ತಲೆ ನಕ್ಷತ್ರ ಪ್ರಥಮ, ಸಿಝಾ ದ್ವಿತೀಯ, ಯುಕ್ತನಿಧಿ ತೃತೀಯ ಬಹುಮಾನ ಪಡೆದುಕೊಂಡರು.
ಸಾರ್ವಜನಿಕ ಸೂಜಿ ನೂಲಿನ ಓಟದಲ್ಲಿ ಮಹಿಳೆಯರ ವಿಭಾಗದಲ್ಲಿ ಪ್ರಥಮ ರಮ್ಯ, ದ್ವಿತೀಯ ಸವಿತಾ, ಸುಷ್ಮಾ ತೃತೀಯ. ಸಾರ್ವಜನಿಕರ ವಿಷದ ಚೆಂಡು ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಈರಪ್ಪ ಪ್ರಥಮ, ಹಕೀಂ ದ್ವಿತೀಯ, ಸ್ವಾಲಿಹ್ ತೃತೀಯ,
ಮಹಿಳೆಯರ ವಿಭಾಗದಲ್ಲಿ ಅಫ್ರೀನಾ ಪ್ರಥಮ, ರಮ್ಯ ದ್ವಿತೀಯ, ಜಸೀಲ ತೃತೀಯ ಸ್ಥಾನ ಪಡೆದರು.
ಸಾರ್ವಜನಿಕರ ಗೋಣಿ ಚೀಲ ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಶಿವ ಪ್ರಥಮ, ಸಿಯಾಬು ದ್ವಿತೀಯ, ಬಿ.ಬಿ.ಹರೀಶ್ ತೃತೀಯ, ಸಾರ್ವಜನಿಕ ಬಸ್ಸಾಟದಲ್ಲಿ ಪುರುಷರ ವಿಭಾಗದಲ್ಲಿ ಉಮೇರ ಪ್ರಥಮ, ಕೃಷ್ಣ ಕುಟ್ಟಿ ದ್ವಿತೀಯ, ರಂಜಿತ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಎಸ್.ಎಸ್.ಪ್ರಮೀಳ ಪ್ರಥಮ, ಸಿಂಚನ ದ್ವಿತೀಯ, ದೀಕ್ಷ ತೃತೀಯ ಬಹುಮಾನ ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.