News Kannada
Sunday, October 02 2022

ಮಡಿಕೇರಿ

ಮಡಿಕೇರಿ: ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ಮೂರ್ನಾಡು ಬಂದ್ ಗೆ ಕರೆ - 1 min read

Madikeri: Moornadu bandh called if road is not repaired
Photo Credit : By Author

ಮಡಿಕೇರಿ, ಸೆ.6: ಕುಂಬಳದಾಳು, ಹೊದ್ದೂರು, ಮೂರ್ನಾಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತಪ್ಪಿದಲ್ಲಿ ಮೂರ್ನಾಡು ಬಂದ್ ಗೆ ಕರೆ ನೀಡುವುದಾಗಿ ಈ ಭಾಗದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿ.ಪಂ ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದ ರಸ್ತೆ ಅವ್ಯವಸ್ಥೆ ಬಗ್ಗೆ ವಿವರಿಸಿದರು. ಮೂರ್ನಾಡು, ಕುಂಬಳದಾಳು ಪ್ರವೇಶಿಸುವ ರಸ್ತೆಯನ್ನು ಅಗೆದು ಹಾಕಿ ವರ್ಷಗಳೇ ಕಳೆದಿದ್ದರು ಇಲ್ಲಿಯವರೆಗೆ ಡಾಂಬರೀಕರಣ ಮಾಡಿಲ್ಲ. ಮೂರ್ನಾಡು ಪಟ್ಟಣದಲ್ಲಿ ಚರಂಡಿಯನ್ನು ಕಿತ್ತು ಹಾಕಲಾಗಿದೆ. ಇದರಿಂದ ಪಾದಚಾರಿಗಳು ಮತ್ತು ಶಾಲಾ ಮಕ್ಕಳು ಚರಂಡಿಯಲ್ಲಿ ಬಿದ್ದು ಗಾಯಗಳಾಗಿರುವ ಘಟನೆಯು ನಡೆದಿದೆ. ಆದ್ದರಿಂದ ತಕ್ಷಣ ರಸ್ತೆ ಡಾಮಬೃಇಕರಣ ಮತ್ತು ಚರಂಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕುಂಬಳದಾಳು ರಸ್ತೆಯಿಂದ ಕೊಡವ ಸಮಾಜದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೊಡವ ಸಮಾಜದಲ್ಲಿ ಸಮಾರಂಭ ನಡೆಯುವ ಸಂದರ್ಭ ರಸ್ತೆಯಲ್ಲಿ ಏಕಮುಖ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಮುಖ್ಯ ದ್ವಾರದ ಬಳಿ ಬಸ್ಸು ಮತ್ತು ಲಾರಿ ಸಂಚಾರಕ್ಕೆ ಅಡಚಣೆಯಾಗಿರುವ ವಿದ್ಯುತ್ ಕಂಬವನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಕುಂಬಳದಾಳು ಜ್ಞಾನ ಜ್ಯೋತಿ ಶಾಲೆಯ ಬಳಿ ರಸ್ತೆ ಬದಿಯಲ್ಲಿ ನಿಂತಿರುವ ಹಳೆಯ ವಾಹನಗಳಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮೂರ್ನಾಡು, ಹೊದ್ದೂರು ನಾಪೋಕ್ಲು ರಸ್ತೆ ಕಳೆದ ಏಳು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸ್ಥಳ ಪರೀಶಿಲಿಸಿ ತಕ್ಷಣ ಡಾಂಬರೀಕರಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಬೇಡಿಕೆಗಳಿಗೆ ಮುಂದಿನ ಒಂದು ತಿಂಗಳೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮೂರ್ನಾಡು ಬಂದ್ ಮಾಡಿ ಮೌನ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ಪ್ರಮುಖರಾದ ತೆಕ್ಕಡೆ ಸುಗು ಗಣಪತಿ, ಕೂಡಂಡ ಪೃಥ್ವಿ, ತೆಕ್ಕಡೆ ಸುನಂದ, ದಂಬೆಕೋಡಿ ಈಶ್ವರ, ತೆಕ್ಕಡೆ ಪೂರ್ಣೇಶ್, ಚೆಟ್ಟಿಮಾಡ ಪ್ರಶಾಂತ್ ಹಾಗೂ ದೇವಜನ ವಿಖ್ಯಾತ್ ಮನವಿ ನೀಡುವ ಸಂದರ್ಭ ಹಾಜರಿದ್ದರು.

See also  ಮಂಗಳೂರು: ಜು.16 ರಿಂದ ಜು.22ವರೆಗೆ “ತುಳು ನಾಟಕ ಪರ್ಬ 2022”
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1620
Coovercolly Indresh

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು