ಮಡಿಕೇರಿ, ಸೆ.7: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 39ನೇ ಕರ್ನಾಟಕ ರಾಜ್ಯ ಸೀನಿಯರ್, ಜೂನಿಯರ್, ಕೆಡೆಟ್ ಹಾಗೂ ಸಬ್ ಜೂನಿಯರ್ ವಿಭಾಗದ ಟೆಕ್ವಾಂಡೊ ಪಂದ್ಯಾವಳಿಯಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೊ ಕ್ಲಬ್‍ನ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ಲಬ್‍ನ ವಿದ್ಯಾರ್ಥಿಗಳಾದ ಅಲಿಶಾ, ಮೊಹಮ್ಮದ್ ಜಿಶಾನ್ ಅಸ್ಲಾಮ್, ಚಾರ್ಲಿ ಸುಬ್ಬಯ್ಯ, ಉತ್ಕರ್ಷ, ಕೆ.ಎ.ಸಿಂಚನ, ವೈಭವಿ ದಿನೇಶ್, ರಿತೀಶ್ ಗೌಡ, ಆಯುಫ್, ಎಂ.ಆರ್.ಮೃದುಲ್, ಆಯಾನ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿರಾಟ್, ಎಂ.ಎ.ವಿಶಾಲ್, ಮನಸ್ವಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಎಂ.ಆರ್.ಲಿಪಿಕಾ, ಇಂಬ್ರಾನ್, ಮೋಹಿತ್, ಎನ್.ಕೆ.ಪ್ರಜ್ಞಾ , ಹರ್ಷ ಕರುಂಬಯ್ಯ, ಎ.ವಿ.ಡಾನಿ ದೇಚಮ್ಮ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ಕುಶಾಲನಗರದ ಡೆಕ್ಕನ್ ಟೆಕ್ವಾಂಡೊ ಅಕಾಡೆಮಿಯ ಮಾಸ್ಟರ್ ಮುತ್ತಪ್ಪ ಹಾಗೂ ಮರ್ಕರ ಕ್ಲಬ್‍ನ ತರಬೇತುದಾರ ಮಾಸ್ಟರ್ ಕುಶಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.