News Kannada
Monday, March 27 2023

ಮಡಿಕೇರಿ

ಮಡಿಕೇರಿ: ದಸರಾ ಅನುದಾನವನ್ನು ಇತರ ಕಾಮಗಾರಿಗಳಿಗೆ ಬಳಸಬೇಡಿ- ಡಾ.ಮಂತರ್ ಗೌಡ

Madikeri: Dasara grant should not be used for other works: Dr. Mantar Gowda
Photo Credit : By Author

ಮಡಿಕೇರಿ, ಸೆ.9: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ರಾಜ್ಯ ಸರ್ಕಾರ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಪ್ರಮುಖ ಡಾ.ಮಂತರ್ ಗೌಡ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೊರೆಯ ನಡುವೆ ಹಬ್ಬಗಳನ್ನು ಆಚರಿಸಬೇಕಾದ ದುಸ್ಥಿತಿ ಬಂದೊದಗಿದ್ದು, ಪ್ರಸ್ತುತ ಬಿಡುಗಡೆ ಮಾಡಿರುವ ರೂ.1 ಕೋಟಿ ಅತ್ಯಂತ ಅಲ್ಪ ಮೊತ್ತವಾಗಿದೆ ಎಂದು ಟೀಕಿಸಿದ್ದಾರೆ.

ಪ್ರವಾಸೋದ್ಯಮದ ಮೂಲಕ ಗಮನ ಸೆಳೆದು ಅನೇಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವ ಮಡಿಕೇರಿ ನಗರಕ್ಕೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಐತಿಹಾಸಿಕ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮತ್ತಷ್ಟು ಅನುದಾನದ ಅಗತ್ಯವಿದೆ. ಆರ್ಥಿಕ ಹೊಡೆತದಿಂದ ಜನರು ಕೂಡ ಕಷ್ಟದಲ್ಲಿರುವುದರಿಂದ ದಸರಾ ಸಮಿತಿಗಳು ಸಾರ್ವಜನಿಕವಾಗಿ ಹಣ ಸಂಗ್ರಹಿಸಿ ದಸರಾ ಹಬ್ಬ ಆಚರಿಸಲು ಅಸಾಧ್ಯವಾಗಿದ್ದು, ಸರ್ಕಾರವೇ ದಸರಾ ಸಮಿತಿಗಳಿಗೆ ಹಣ ನೀಡಬೇಕಾಗಿದೆ.

ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ ಮತ್ತು ಕೋವಿಡ್ ಕಾರಣದಿಂದ ಮಡಿಕೇರಿ ದಸರಾವನ್ನು ಸೀಮಿತ ವೆಚ್ಚದಲ್ಲಿ ನಡೆಸಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಸುಧಾರಿಸಿದ್ದು, ಜನ ಅದ್ಧೂರಿ ದಸರಾ ಆಚರಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಶಾಸಕರು ಈ ಬಗ್ಗೆ ಕಾಳಜಿ ವಹಿಸಿ ಹೆಚ್ಚುವರಿ ಒಂದು ಕೋಟಿ ರೂ. ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಿ ಒಟ್ಟು 2 ಕೋಟಿ ದೊರೆಯುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದಸರಾ ಆಚರಣೆಗಾಗಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾವನ್ನು ದಸರಾಕ್ಕಷ್ಟೇ ಖರ್ಚು ಮಾಡಬೇಕು ಹೊರತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಾರದು. ರಸ್ತೆ, ಚರಂಡಿ, ತಡೆಗೋಡೆ, ಕಾಂಕ್ರೀಟ್ ಗ್ಯಾಲರಿ ನಿರ್ಮಾಣಕ್ಕೆ ನಗರಸಭೆಯಲ್ಲಿ ಪ್ರತ್ಯೇಕ ಅನುದಾನ ಇರುವುದರಿಂದ ದಸರಾ ಅನುದಾನವನ್ನು ಬಳಸುವುದು ಸರಿಯಲ್ಲ. ಹಾಗೊಂದು ವೇಳೆ ಬಳಸಿದರೆ ಅದು ದಸರಾ ಸಮಿತಿಗಳಿಗೆ ಮಾಡುವ ಅನ್ಯಾಯವಾಗಲಿದೆ. ಬೆಲೆ ಏರಿಕೆಯ ಹಿನ್ನೆಲೆ ದಶಮಂಟಪಗಳು ಮತ್ತು ಕರಗಗಳಿಗೆ ಅಧಿಕ ಹಣದ ಅಗತ್ಯತೆ ಇರುತ್ತದೆ. ಸತತ ಹತ್ತು ದಿನಗಳ ಕಾಲ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ದೊಡ್ಡ ಮೊತ್ತದ ಆರ್ಥಿಕ ಶಕ್ತಿ ಬೇಕಾಗುತ್ತದೆ.

ಆದ್ದರಿಂದ ಜಿಲ್ಲೆಯ ಶಾಸಕರುಗಳು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿವರ್ಷ ಬಜೆಟ್ ನಲ್ಲಿ 2 ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಡಾ.ಮಂತರ್ ಗೌಡ ಆಗ್ರಹಿಸಿದ್ದಾರೆ.

ಕೊಡಗಿನಲ್ಲಿ ಉದ್ಭವಿಸುವ ಕಾವೇರಿ ನದಿಯಿಂದ ರಾಜ್ಯದ ಆರ್ಥಿಕ ಬಲ ಹೆಚ್ಚುತ್ತಿದೆ. ನದಿ ಪ್ರವಾಹದಿಂದ ಅನೇಕ ಕಷ್ಟ, ನಷ್ಟಗಳ ನಡುವೆ ಜಿಲ್ಲೆಯ ಜನ ಜೀವನ ಸಾಗಿಸುತ್ತಿದ್ದಾರೆ. ವರ್ಷಕ್ಕೊಂದು ದಸರಾ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲು ಮಡಿಕೇರಿಗೆ ಹೆಚ್ಚಿನ ಅನುದಾನ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗುವುದಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

See also  ಲಂಚ: ಕಾರ್ಯಪಾಲಕ ಎಂಜಿನಿಯರ್‌ ಸೇರಿ ಐವರು ಎಸಿಬಿ ಬಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು