ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವ -2022 ರ ಸಾಂಸ್ಕೖತಿಕ ಸಮಿತಿ ವತಿಯಿಂದ 9 ದಿನಗಳ ವೈವಿಧ್ಯಮ ಸಾಂಸ್ಕೖತಿಕ ಕಾಯ೯ಕ್ರಮಗಳಿಗಾಗಿ ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದೆ ಎಂದು ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್ ತಿಳಿಸಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ಸೆ.26 ರಿಂದ 9 ದಿನಗಳ ಕಾಲ ನಡೆಯುವ ಸಾಂಸ್ಕೖತಿಕ ಕಾಯ೯ಕ್ರಮಗಳಿಗಾಗಿ ನಾಡಿನ ಕಲಾತಂಡ, ಕಲಾವಿದರಿಂದ ವೈವಿಧ್ಯಮಯ ಕಾಯ೯ಕ್ರಮಗಳಿಗಾಗಿ ಅಜಿ೯ ಆಹ್ವಾನಿಸಲಾಗಿದೆ.
ಕಲಾತಂಡ, ಕಲಾವಿದರು ತಾವು ಪ್ರದಶ೯ನ ನೀಡಲಿರುವ ಕಲಾಪ್ರಕಾರ, ಅಗತ್ಯವಿರುವ ಅವಧಿಯ ಮಾಹಿತಿಯೊಂದಿಗೆ ತಮ್ಮ ಪೂಣ೯ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಅಜಿ೯ಗಳನ್ನು ಸೆಪ್ಟಂಬರ್ 15 ರೊಳಗಾಗಿ ಅಧ್ಯಕ್ಷರು, ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ, ನಗರಸಭಾ ಕಛೇರಿ, ಮಡಿಕೇರಿ-571201 ಇಲ್ಲಿಗೆ ಕಳುಹಿಸಬೇಕು. ಅರ್ಜಿಯನ್ನು [email protected] ಮೇಲ್ ಮೂಲಕ ಕೂಡ ಕಳುಹಿಸಬಹುದು. ಅನಂತರ ಬಂದ ಅಜಿ೯ಗಳನ್ನು ಪರಿಗಣಿಸಲಾಗುವುದಿಲ್ಲ.
ಒಂದು ಕಲಾತಂಡಕ್ಕೆ , ಕಲಾವಿದರಿಗೆ ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ 9 ದಿನಗಳ ಪೈಕಿ ಒಂದು ಬಾರಿ ಮಾತ್ರ ಪ್ರದಶ೯ನ ನೀಡಲು ಅವಕಾಶ ಇದೆ. ಸೋಲೋ ಹಾಡು ಅಥವಾ ನೃತ್ಯಕ್ಕೆ ಅವಕಾಶ ಇಲ್ಲ. ಒಂದು ತಂಡದಲ್ಲಿ ಕನಿಷ್ಟ 4 ಮಂದಿ ಇರಬೇಕು.
ಕಲಾತಂಡಗಳ ಆಯ್ಕೆಯಲ್ಲಿ ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಆಯ್ಕೆಯೇ ಅಂತಿಮವಾಗಿದೆ ಎಂದೂ ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.