ಸೋಮವಾರಪೇಟೆ: ಹೈ ವೋಲ್ಟೇಜ್’ ವಿದ್ಯುತ್ ಪ್ರವಹಿಸಿದ ಪರಿಣಾಮ ಹಲವು ಮನೆಗಳ ಎಲೆಕ್ಟ್ರಾನಿಕ್ ವಸ್ತುಗಳು ನಷ್ಟವಾದ ಘಟನೆ ಸಮೀಪದ ಹಾನಗಲ್ಲು ಬಾಣೆಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನದ ವೇಳೆಗೆ ವಿದ್ಯುತ್ ತಂತಿಗೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಹೈ ವೋಲ್ಟೇಜ್ ಹರಿದು ಹಾನಗಲ್ಲು ಬಾಣೆ ಗ್ರಾಮದಲ್ಲಿ ಹಲವು ಮನೆಗಳ ಎಲೆಕ್ಟ್ರಾನಿಕ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳು ನಾಶವಾಗಿವೆ.
ಹಾನಗಲ್ಲು ಬಾಣೆ ಗ್ರಾಮದ ವಸಂತಿ ರಾಮು, ಗಗನ್ ರಾಜು, ರವೀಂದ್ರ, ವೆಂಕಟೇಶ್ , ಸ್ವಾಮಿ ಸೇರಿದಂತೆ ಹತ್ತಾರು ಮನೆಗಳ ಟಿ.ವಿ., ಫ್ಯಾನ್, ಐರನ್ ಬಾಕ್ಸ್, ಬಲ್ಬ್ ಗಳು, ವಯರಿಂಗ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಪರಿಕರಗಳು ಸುಟ್ಟು ಕರಕಲಾಗಿವೆ.
ಕಷ್ಟಪಟ್ಟು ಸಂಪಾದಿಸಿದ ವಸ್ತುಗಳು ಸುಟ್ಟು ಕರಕಲಾಗಿವೆ. ನಮಗೆ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಮನೆ ಮಾಲೀಕರು ಮನವಿ ಮಾಡಿದ್ದಾರೆ.