News Kannada
Thursday, June 01 2023
ಮಡಿಕೇರಿ

ಮಡಿಕೇರಿ: ವ್ಯಾಪಾರಿಕರಣ ಮನೋಭಾವದೊಂದಿಗೆ  ದೇವಸ್ಥಾನ ಆಡಳಿತ ಮಂಡಳಿಯ ದಂಧೆ

The temple management's racket with a commercialised spirit
Photo Credit : By Author

ಮಡಿಕೇರಿ: ಮನಃಶಾಂತಿ ಗಾಗಿ ದೇವಸ್ಥಾನಕ್ಕೆ ಪ್ರವೇಶಿಸುವ ಭಕ್ತಾದಿಗಳಿಗೆ ಇಲ್ಲಿ ನೆಮ್ಮದಿ ಸಿಗುವುದು ಅಷ್ಟಕಷ್ಟೇ. ಇಲ್ಲದ ನಿಯಮಗಳನ್ನು ಬಲವಂತವಾಗಿ ಭಕ್ತಾದಿಗಳ ಮೇಲೆ ಹೇರುವ ಮೂಲಕ ದೇವರು ಮತ್ತು ಭಕ್ತಾದಿಗಳ ನಡುವಿನ ಸುಧೀರ್ಘ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಶ್ರೀ ಉಮಾಮಾಹೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ  ರೂಪಿಸಿದೆ.

ಭಕ್ತಾದಿಗಳ ಆರಾಧನೆಗೆ ತಕ್ಕ ವ್ಯವಸ್ಥೆಯನ್ನು ಮಾಡದೆ ಪೂಜೆಯ ಹೆಸರಿನಲ್ಲಿ ವ್ಯಾಪಾರಿಕರಣ ಮನೋಭಾವವನ್ನು ಹೊಂದಲಾಗಿದೆ. ವಿನಾಕಾರಣ ಕೆಲವು ಸರಳ ಪೂಜೆಗಳಿಗೆ ಅಧಿಕ ಹಣ ಪಡೆದುಕೊಳ್ಳುತ್ತಿರುವುದು ಸಹ ಈ ದೇವಸ್ಥಾನ ಆಡಳಿತ ಮಂಡಳಿಯ ಪೌರುಷ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ನೋಡಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳನ್ನು ದೇವಸ್ಥಾನದ ಒಳಗೆ ಪ್ರವೇಶಿಸಲು ನಿರಾಕರಣೆಯೊಂದಿಗೆ ಪ್ರತಿದಿನ ಬೆಳಗ್ಗೆ ದೇವಸ್ಥಾನ ಪ್ರವೇಶಕ್ಕೆ ಮಾಲೆ ತೊಟ್ಟ ಸ್ವಾಮಿಗಳನ್ನು ಸತಾಯಿಸಲಾಗುತ್ತಿದೆ ಎಂದು ಅಯ್ಯಪ್ಪ ಭಕ್ತಾದಿಗಳು ಗೋಣಿಕೊಪ್ಪ ಪ್ರತಿಷ್ಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿತದ ವಿರುದ್ಧ ಕಿಡಿಕಾರಿದಾರೆ.

ಈ ಬಗ್ಗೆ ಮಾತನಾಡಿದ ಗುರುಸ್ವಾಮಿ ಮಣಿಕಂಠ ಅವರು ಪ್ರತಿವರ್ಷವೂ ಈ ದೇವಸ್ಥಾನದಲ್ಲಿ ಇದೇ ಧೋರಣೆ ತಳಲಾಗುತ್ತಿದೆ.ಅಯ್ಯಪ್ಪ ಭಕ್ತಾದಿಗಳಿಗೆ ಅನಾನುಕೂಲ ಸೃಷ್ಟಿಸಲಾಗುತ್ತಿದೆ. ದೇವಸ್ಥಾನದ ಒಳಗೆ ಪ್ರವೇಶಿಸಲು ಅನುಮತಿ ಪಡೆಯಬೇಕಾದ ನಿಯಮ ಹೇರಿ ವ್ಯಾಪರಿಕಾರಣದ ಮನೋಭಾವ ಆಡಳಿತ ಮಂಡಳಿ ಹೋಂದಲಾಗಿದೆ ಎಂದು ಗಂಭೀರವಾಗಿ ಅರೋಪಿಸಿದಾರೆ.

ದೇವರ ಪ್ರಾರ್ಥನೆಯೊಂದಿಗೆ ಮನಸಿನ ನೆಮ್ಮದಿ ಕಂಡುಕೊಳ್ಳಲು ದೇವಸ್ಥಾನಗಳಿಗೆ ಭಕ್ತಾದಿಗಳು ಆಗಮಿಸುತ್ತಾರೆ. ಆದರೆ, ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನಕ್ಕೆ ಭಕ್ತಾದಿಗಳು ಪ್ರವೇಶಿಸುತ್ತಿದ್ದಂತೆ ವ್ಯಾಪಾರ ಉದ್ಯಮಕ್ಕೆ ಬಂದಂತೆ ಅನುಭವವಾಗುತ್ತದೆ.

ದೊಡ್ಡಪೂಜೆ ಮಾಡಿಸುವವರನ್ನು ಒಂದು ರೀತಿ,ಸಣ್ಣ ಹಣ್ಣು ಕಾಯಿ, ಮಂಗಳಾರತಿ ಮಾಡಿಸುವವರನ್ನು ಮತ್ತೊಂದು ರೀತಿಯ ತಾರತಮ್ಯ ದೃಷ್ಟಿಯಲ್ಲಿ ನೋಡುವ ನೋಟ ಪ್ರಚಲಿತದಲ್ಲಿದೆ.

ಇನ್ನು ದೇವರಿಗೆ ಪೂಜಿಸುವ ಅರ್ಚಕರು ಅನುಭವಿಗಳಾಗದೆ ಇರುವುದರೊಂದಿಗೆ ಸುಬ್ರಮಣ್ಯ ದೇವರ ಮಂತ್ರವನ್ನು ಗಣಪತಿಯಲ್ಲಿ, ಗಣಪತಿ ದೇವರ ಮಂತ್ರವನ್ನು ಈಶ್ವರದೇವರಲ್ಲಿ ಹೇಳುತ್ತಾ ಭಕ್ತಾದಿಗಳನ್ನ ವಂಚಿಸುವ ನಿತ್ಯ ಪರಿಪಾಠವು ನಡೆಯುತ್ತಿದೆ.

ಹಿಂದುತ್ವದ ಪ್ರತ್ಯೇಕವಾಗಬೇಕಾದ ಈ ದೇವಾಲಯದಲ್ಲಿ ಹಿಂದೂ, ಹಿಂದೂ ಧರ್ಮ, ಆಚರಣೆ ,ಸಂಸ್ಕೃತಿಗಳಿಗೆ ಹೆಚ್ಚಿನ ಒತ್ತು ನಿಡಿದಂತಿಲ್ಲ. ಭಕ್ತಾದಿಗಳ ಅನುಕೂಲಕರವಾದ ಯಾವುದೇ ವ್ಯವಸ್ಥೆಗಳು ಈ ದೇವಸ್ಥಾನದಲ್ಲಿ ಇಲ್ಲ. ಆಡಳಿತ ಮಂಡಳಿ ಭಕ್ತಾದಿಗಳಿಗೆ ಸೂಕ್ತ ಸೌಲಭ್ಯ ಎಂಬ ನೆಪದಲ್ಲಿ ಹಲವು ಅಭಿವೃದ್ಧಿಗಳನ್ನು ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದರು ಇದು ಯಾವುದೂ ಭಕ್ತಾದಿಗಳಿಗೆ ಮುಟ್ಟುತ್ತಿಲ್ಲ.

ಮೊನ್ನೆ ನಡೆದ ಸುಬ್ರಹ್ಮಣ್ಯ ಸ್ವಾಮಿ ಸೃಷ್ಟಿ ಉತ್ಸವದಲ್ಲಿ ಅನ್ನದಾನದ ಸಂದರ್ಭದಲ್ಲಿ ಭಕ್ತಾದಿಗಳನ್ನ ಆಡಳಿತ ಮಂಡಳಿಯ ಸದಸ್ಯರು ನಿಂದಿಸಿರುವುದು ಕೂಡ ಕೇಳಿ ಬಂದಿದೆ. ನೀವೇನು ಅನ್ನ ಕಾಣದವರೇ, ಬೇರೆಯವರು ಅನ್ನ ತಿನ್ನಬೇಕು ಬೇಗ ಬೇಗ ತಿಂದು ಹೋಗಿ ಎಂದು ದರ್ಪದ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅನ್ನ ಸಂತರ್ಪಣೆಗೆ ತಯಾರಿಸಿದ ಸಾಂಬಾರು, ಪಲ್ಯ ,ಪಾಯಸ, ಉಪ್ಪಿನಕಾಯಿಗಳು ರುಚಿ ಇಲ್ಲದೆ ಕರಟಿ ಹೋಗಿರುವುದು ಅತಿ ಹೆಚ್ಚು ಕಾರದಿಂದ ತಿನ್ನಲಾಗದೆ ಮಕ್ಕಳು ,ವಯಸ್ಕರು ಪ್ರಸಾದವನ್ನು ಹಾಗೆ ಬಿಟ್ಟು ಬಂದಿದ್ದಾರೆ.

See also  ಮಂಗಳೂರು: ಅ.9 ರಂದು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

ಈ ದೇವಸ್ಥಾನದ ಆಡಳಿತ ಮಂಡಳಿಯವರಲ್ಲಿ ವ್ಯಾಪಾರದ ದೃಷ್ಟಿಕೋನ ಇದೆಯೇ ಹೊರತು ಭಕ್ತಿ ಮತ್ತು ಹಿಂದೂ ಸಂಸ್ಕೃತಿಯ ಬಗ್ಗೆ ಅಭಿಮಾನವಾಗಲಿ, ಕಾಳಜಿಯಾಗಲಿ ಇಲ್ಲ.  ಹಲವು ವರ್ಷಗಳಿಂದ ಈ ದೇವಸ್ಥಾನದ ಆಡಳಿತ ಮಂಡಳಿ ಬದಲಾಗದೆ ವಂಶ ಪಾರಂಪರ್ಯ ಎಂಬಂತೆ ತಂದೆಯಿಂದ ಮಕ್ಕಳಿಗೆ ಬಂದ ಬಳವಳಿಯಂತೆ ಆಡಳಿತ ಸದಸ್ಯರು ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ಬಗ್ಗೆ ಭಕ್ತಾದಿಗಳಿಗೆ ಮಾಹಿತಿ ಇರುವುದಿಲ್ಲ ಮತ್ತು ದೇವಸ್ಥಾನದ ಭಂಡಾರ ಎಣಿಕೆಯಲ್ಲಿಯೂ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ.
ಕೆಲವು ತಿಂಗಳ ಹಿಂದೆ ಆಡಳಿತ ಮಂಡಳಿ ಸಮಿತಿಯ ಸದಸ್ಯರೊಬ್ಬರು ಭಂಡಾರದ ಹಣವನ್ನ ಜೇಬಿಗೆ ತುಂಬುತ್ತಿದ್ದ ವ್ಯವಸ್ಥೆಯೊಂದು ಬಹಿರಂಗವಾಗಿದೆ.

ಒಟ್ಟಾರೆ ಇಲ್ಲಿ ಭಕ್ತಿಯ ಹೆಸರಿನಲ್ಲಿ ಭಕ್ತಾದಿಗಳನ್ನ ಸುಲಿಗೆ ಮಾಡುವುದರೊಂದಿಗೆ ದಂದೆ ನಡೆಸಲಾಗುತ್ತಿದೆ ಎಂದು ಈ ದೇವಸ್ಥಾನದ ಭಕ್ತಾದಿಗಳು ತಮ್ಮ ಒಳಗಿನ ಅಸಮಾಧಾನವನ್ನು ಹೊರಹಾಕಿದ್ದಾರೆ. ಮುಂದಿನ ದಿನದಲ್ಲಿ ಆಡಳಿತ ಮಂಡಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ಕೂಡ ಸಂಘಟನಾತ್ಮಕವಾಗಿ ಬಲಪಡಿಸಲು ಚಿಂತನೆ ಹರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು