News Kannada
Saturday, January 28 2023

ಮಡಿಕೇರಿ

ಮಡಿಕೇರಿ: ಕೊಡಗು ತುಳುವೆರ ಸಮಿತಿ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್‍

: Kodagu Tuluvera Samiti has organised premier league cricket
Photo Credit : By Author

ಮಡಿಕೇರಿ: ಕೊಡಗು ತುಳುವೆರ ಸಮಿತಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೊಡಗು ತುಳುವೆರ ಪ್ರೀಮಿಯರ್ ಲೀಗ್ ಕ್ರಿಕೆಟ್‍ನಲ್ಲಿ ಹಿಂದೂ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಪರಹೊಮ್ಮಿದ್ದು, ಟೀಂ ಲೂಸರ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ಪಡೆದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಟಾಸ್‍ಗೆದ್ದ ಹಿಂದೂ ಕ್ರಿಕೆಟ್ ಕ್ಲಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಲೂಸರ್ಸ್ ತಂಡ 6 ಓವರ್ ಗೆ 7 ವಿಕೆಟ್ ಕಳೆದುಕೊಂಡು 47 ರನ್ ಬಾರಿಸಿತು. ಹಿಂದೂ ಕ್ರಿಕೆಟ್ ಕ್ಲಬ್ ತಂಡ 2 ವಿಕೆಟ್ ಕಳೆದುಕೊಂಡು 3.1 ಓವರ್‍ನಲ್ಲಿ 49 ರನ್ ಗಳಿಸಿ ವಿಜಯಮಾಲೆಯನ್ನು ಧರಿಸಿತು. ಅಂತಿಮ ಪಂದ್ಯದಲ್ಲಿ ಹಿಂದೂ ಕ್ರಿಕೆಟ್ ಕ್ಲಬ್‍ನ ಆಟಗಾರ ವಿಜಯ್ ಹ್ಯಾಟ್ರಿಕ್ ವಿಕೆಟ್ ಗಳಿಸುವುದರ ಜೊತೆಗೆ ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ಗಮನ ಸೆಳೆದರು.

ಮೊದಲ ಬಹುಮಾನ ಪಡೆದ ತಂಡಕ್ಕೆ ರೂ.1,22,333 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ರೂ.55,777 ರೂ.ನಗದು ಹಾಗೂ ಟ್ರೋಫಿ ನೀಡಲಾಯಿತು. ಟೀಂ ಭಗವತಿ ತಂಡ ತೃತೀಯ ಸ್ಥಾನ ಪಡೆಯಿತು.

See also  ಮಂಗಳೂರು: ಡಿ. ದೇವರಾಜ ಅರಸರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು