ಕೊಡಗು: ಕರಡಿಗೋಡುವಿನ ಭುವನಹಳ್ಳಿಯ ಕಾಫಿ ತೋಟದಲ್ಲಿ ಸಲಗ ಪತ್ತೆಯಾಗಿದ್ದು, ಸಿಬ್ಬಂದಿ ಅರಿವಳಿಕೆ ನೀಡುವ ಮೂಲಕ ಆನೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಆನೆಗೆ ಸುಮಾರು 22 ವರ್ಷ ವಯಸ್ಸಾಗಿದೆ.
ಕಾಡು ಪ್ರಾಣಿಗಳನ್ನು ಸೆರೆಹಿಡಿಯಲು ಸರ್ಕಾರ ಅನುಮತಿ ನೀಡಿತು. ದುಬಾರೆ ಆನೆ ಶಿಬಿರದ ೫ ಸಾಕು ಆನೆಗಳೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಲಾಯಿತು.
ಕಾಡು ಆನೆಯ ಸೆರೆಯಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಸೆರೆಹಿಡಿದ ಆನೆಯನ್ನು ಶಿಬಿರಕ್ಕೆ ಸಾಗಿಸಲು ಸಿದ್ಧತೆ ನಡೆಯುತ್ತಿದೆ. ಕಾಫಿ ತೋಟದಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಹತ್ತಕ್ಕೂ ಹೆಚ್ಚು ಕಾಡು ಆನೆಗಳು ಕಾಣಿಸಿಕೊಂಡಿದ್ದವು.