News Kannada
Tuesday, February 07 2023

ಮಡಿಕೇರಿ

ಮಡಿಕೇರಿ: ಕೆ.ವಿ.ಪುಟ್ಟಪ್ಪ ಕನ್ನಡದ ಅಸ್ಮಿತೆ- ಡಾ. ಕಾವೇರಿ ಪ್ರಕಾಶ್

Madikeri: Dr. K.V. Puttappa said that Kuvempu is the identity of Kannada. Kaveri Prakash
Photo Credit : By Author

ಮಡಿಕೇರಿ, ಡಿ.29: ಇಪ್ಪತ್ತನೇ ಶತಮಾನದ ದೈತ್ಯ ಪ್ರತಿಭೆ , ರಸ ಋಷಿ, ವಿಶ್ವಮಾನವ, ಎಂದೆಲ್ಲ ಪ್ರಸಿದ್ಧರಾಗಿದ್ದ ಕೆ.ವಿ.ಪುಟ್ಟಪ್ಪ ಕುವೆಂಪು ಕನ್ನಡದ ಅಸ್ಮಿತೆ ಎಂದು ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ. ಕಾವೇರಿ ಪ್ರಕಾಶ್ ನುಡಿದರು.

ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಕುವೆಂಪು ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಮುಂದುವರೆದ ಅವರು ಕುವೆಂಪು ಆಂಗ್ಲ ಪ್ರಾಧ್ಯಾಪಕರಾಗಿದ್ದು ಮೊದಲಿಗೆ ಆಂಗ್ಲ ಭಾಷೆಯಲ್ಲಿಯೇ ಕವನ, ಪ್ರಬಂಧಗಳನ್ನು ರಚಿಸಿ ಪ್ರಕಟಿಸಿದ್ದರು ಅವರು ಆಂಗ್ಲ ವ್ಯಾಮೋಹದಿಂದ ಅಲ್ಲಿಯೇ ಉಳಿದಿದ್ದರೆ ಕನ್ನಡ ಸಾಹಿತ್ಯ ಲೋಕ ಎಷ್ಟು ವಿಧ್ಯಮಿಸುತ್ತಿರಲಿಲ್ಲ ಅವರು ಆಂಗ್ಲ ಭಾಷೆ ಎಂದು ಬಿಟ್ಟು ಮಾತ್ರ ಭಾಷೆ ಕನ್ನಡ ಫಿದಾ ಕೃತಿಗಳನ್ನು ರಚಿಸಲು ತೊಡಗಿದ್ದು ಕನ್ನಡ ಸಾಹಿತ್ಯ ಲೋಕದ ಭಾಗ್ಯ ಎಂದರೆ ತಪ್ಪಾಗಲಿಕ್ಕಿಲ್ಲ ಆಡುಗುಟ್ಟದ ಸೊಪ್ಪಿಲ್ಲ ಕುವೆಂಪು ರಚಿಸಿದ ಸಾಹಿತ್ಯ ಪ್ರಕಾರಗಳಿಂದ ಶಿಶು ಸಾಹಿತ್ಯ ಎಂದು ಹಿಡಿದು ವೈಚಾರಿಕತೆಯ ವರೆಗೂ ಸಾಹಿತ್ಯದ ಹಾಳಾಗಲವನ್ನು ವಿವರವಾಗಿ ಪ್ರಸ್ತುತಪಡಿಸಿದ್ದಾರೆ

ಪ್ರಾಸ್ತಾವಿಕವಾಗಿ ಮಾತನಾಡಿದ ಎರಡೂ ಸಂಸ್ಥೆಗಳ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕುವೆಂಪು ಕವನಗಳು, ವಿಚಾರಧಾರೆ ಇಂದಿಗೂ ಪ್ರಸ್ತುತ ಅವರು ಪ್ರಸ್ತುತಪಡಿಸಿದ ವಿಶ್ವ ಮಾನವ ಸೂತ್ರ ಸರಿಯಾಗಿ ಅಳವಡಿಸಿಕೊಂಡರೆ ಜೀವನ ದೇಶ ಎರಡು ಧನ್ಯ ಎಂದರು.

ಕುವೆಂಪು ಬದುಕು ಬರಹ ಕುರಿತು ಮಾತನಾಡಿದ ಸೋಮವಾರಪೇಟೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ತಿಲೋತ್ತಮೆ ನಂದ ಕುಮಾರ್ ರವರು ಪ್ರತಿಯೊಬ್ಬ ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟುತ್ತಾನೆ. ಆದರೆ ಪ್ರಾಪಂಚಿಕ ಸಾಮಾಜಿಕ ಪ್ರಪಂಚಕ್ಕೆ ಬಂದಾಗ ಅವನು ಅಲ್ಪಮಾನಾಗುತ್ತಾನೆ. ಅವನನ್ನು ಪುನಹ ವಿಶ್ವಮಾನವನ್ನಾಗಿ ಮಾಡುವ ಶಿಕ್ಷಣವನ್ನು ನಾವು ಇಂದು ನೀಡಬೇಕಾಗಿದೆ. ಮನುಜ ಮತ ವಿಶ್ವಪಥವಾಗಬೇಕು ಎಂದರು

ಕುವೆಂಪುರವರು ಸ್ವಾಮಿ ವಿವೇಕಾನಂದರ ಹಲವಾರು ಕೃತಿಗಳನ್ನು ಕನ್ನಡೀಕರಿಸಿದ್ದಾರೆ. ತಮ್ಮ ಗ್ರಂಥಗಳಲ್ಲಿ ಯಾವುದೇ ಒಂದು ಪಾತ್ರವನ್ನು ಅರ್ಥವತ್ತಾಗಿ ಮನಮುಟ್ಟುವಂತೆ ಮಾಡುವಾವರ ಶೈಲಿ ಎಂದೆಂದಿಗೂ ಪ್ರಸ್ತುತ ಎಂದರು. ಮಾನವನ ಬುದ್ಧಿ ವಿಚಾರವಂತವಾಗಿರಬೇಕು ಪ್ರತಿಭೆ ಭಾವನಾತ್ಮಕವಾಗಿರಬೇಕು. ಆಗ ಮಾತ್ರ ಬುದ್ದಿ ಮತ್ತು ಪ್ರತಿಭೆಯ ಪ್ರಯೋಜನ ಜಗತ್ತಿಗೆ ಆಗುತ್ತದೆ ಎಂದರು.

ವೈಚಾರಿಕ ನಿಲುವಿನಲ್ಲಿ ಕುವೆಂಪು ಈ ವಿಚಾರದ ಬಗ್ಗೆ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಮದೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ. ಆರ್. ಜೋಯಪ್ಪ ರವರು ಸುಂದರ ಜಗ ಶಿವಮಂದಿರವಾಗಿದೆ ಅವನಿಗೊಂದು ದೇಗುಲ ವೇತಕೆ ಎನ್ನುತ್ತಾ ಪ್ರಪಂಚವೇ ಒಂದು ದೇವಾಲಯ ಎಂದರು. ತಮ್ಮ ಹಲವಾರು ಕವನ ಲೇಖನಗಳಲ್ಲಿ ಅವರು ವೈಚಾರಿಕತೆಯನ್ನು ಪ್ರಸ್ತುತ ಪಡಿಸಿದ್ದಾರೆ ಎಂದರು.

ಕುವೆಂಪು ರಚಿತ ಗಾಯನವನ್ನು ಜಿಲ್ಲೆಯ ಉದ್ಯೋನ್ಮುಖ ಗಾಯಕರಾದ ಶ್ರೀಮತಿ ಸೆಲೋಮಿ ಶೀಲಾ, ಶ್ರೀಮತಿ ಪಾಂಡಿ ಕೀರ್ತಿ ಗಿರೀಶ್, ಕು.ರಕ್ಷಾ ಪ್ರಭಾಕರ್, ಕು. ಅಮೃತ್ ರಾಜ್, ಕು. ಅನಿತ್ ರಾಜ್, ಶ್ರೀಮತಿ ಚೊಕ್ಕಾಡಿ ಪ್ರೇಮ ರಾಘವಯ್ಯ ಸುಶ್ರಾವ್ಯವಾಗಿ ಹಾಡಿದರು.

See also  ಕಾರವಾರ: ಅಪರೂಪದ ಕಾಯಿಲೆಗೆ ತುತ್ತಾದ ಬಾಲಕ, ಮುಖವನ್ನೇ ಆವರಿಸಿದ ಚಿಕ್ಕ ಗುಳ್ಳೆ

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರು ಬಳಗದ ಉಪಾಧ್ಯಕ್ಷ ರೇವತಿ ರಮೇಶ್ ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ಎಸ್.ಐ ಮುನಿರ್ ಅಹ್ಮದ್ ಸ್ವಾಗತಿಸಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ ಎಸ್ ಮೂರ್ತಿ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು