News Kannada
Wednesday, February 08 2023

ಮಡಿಕೇರಿ

ಕೊಡಗು: ಹೊಸ ವರ್ಷ ಆಚರಣೆ, ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿಯಮ ಜಾರಿ

Kodagu: New Year celebrations, district police department issues rules
Photo Credit : IANS

ಕೊಡಗು: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಅನೇಕ ಅನಾಹುತಗಳೇ ನಡೆದು ಹೋಗುತ್ತವೆ ಎಂದು ಲೆಕ್ಕ ಹಾಕಿರುವ ಕೊಡಗು ಪೊಲೀಸ್ ಜನರಿಗೆ ಹಾಗೂ ಪ್ರವಾಸಿಗರಿಗೆ ಕೆಲವು ನಿಯಮವನ್ನು ಜಾರಿಗೆ ತಂದಿದ್ದಾರೆ.

ಕೊಡಗು ಎಸ್‌.ಪಿ ಎಂ.ಎ ಅಯ್ಯಪ್ಪ ಪ್ರವಾಸಿಗರಿಗೆ ಹಾಗೂ ಜನರಿಗೆ ಕೆಲವು ಸೂಚನೆಯನ್ನು ನೀಡಿದ್ದಾರೆ. ರಾತ್ರಿ ಕುಡಿದು ವಾಹನ ಚಾಲನೆ ಮಾಡಿದರೆ ಅರೆಸ್ಟ್ ಮಾಡಲಾಗುವುದು ಎಂದೇ ಹೇಳಿದ್ದಾರೆ. ಜನರು ಬೀದಿ ಬೀದಿಗಳಲ್ಲಿ ಮದ್ಯಪಾನ ಮಾಡುವುದು ಕಂಡರೆ ಮುಲಾಜಿಲ್ಲದೆ ಬಂಧನ ಮಾಡಲು ಎಸ್.ಪಿ ಆದೇಶ ನೀಡಿದ್ದಾರೆ.

ಕೊಡಗಿನಲ್ಲಿ ಎಸ್ಪಿ ಸೇರಿದಂತೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ರಾತ್ರಿ ಹೊತ್ತು ಗಸ್ತು ಹಾಕಲಿದ್ದು ಪೊಲೀಸ್ ಠಾಣೆಗಳಲ್ಲಿ ಕೇವಲ ಒಬ್ಬ ಸಿಬ್ಬಂದಿ ಮಾತ್ರವೇ ಹಾಜರು ಇರಲಿದ್ದಾರೆ. ಉಳಿದ ಎಲ್ಲಾ ಸಿಬ್ಬಂದಿಗಳು ರಾತ್ರಿ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರವಾಸಿಗರ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರುವ ಎಸ್.ಪಿ, ಎಂ.ಎ ಅಯ್ಯಪ್ಪ ಎಲ್ಲಿಯೂ ಜೀವಹಾನಿಗೆ ಅವಕಾಶ ಆಗಬಾರದು ಎಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಈ ಬಗ್ಗೆ ರೆಸಾರ್ಟ್, ಹೋಂ ಸ್ಟೇ ಮಾಲಿಕರಿಗೆ ಕೂಡ ಸೂಚನೆ ನೀಡಲಾಗಿದೆ. ಅದಲ್ಲದೇ ಪ್ರವಾಸಿತಾಣಗಳಿಗೆ ಜನರು ರಾತ್ರಿ ಹೋಗುವ ಹಾಗಿಲ್ಲ ಎಂದು ಕೂಡ ಖಡಕ್ ಆಗಿ ಹೇಳಲಾಗಿದೆ.

ಕೊಡಗು: ಕೇರಳ ಗಡಿಭಾಗದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದ್ದು ಡ್ರಗ್ಸ್ ಸಾಗಾಟ ಸಾಧ್ಯತೆ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ ರೇವ್ ಪಾರ್ಟಿ ಮಾಡಿದರೆ ತಕ್ಷಣ ಕ್ರಮ ಕೈಗೊಂಡು ಸಂಬಂಧಪಟ್ಟವರ ಬಂಧನ ಮಾಡಲಾಗುವುದು ಎನ್ನಲಾಗುತ್ತಿದೆ.

ಪಾರ್ಟಿ ಹೆಸರಿನಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಸೌಂಡ್ಸ್ ಹಾಕುವ ಹಾಗಿಲ್ಲ. ಅಕ್ಕಪಕ್ಕದವರು ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಎಸ್‌ಪಿ ಹೇಳಿದ್ದಾರೆ.

See also  ಮಡಿಕೇರಿ: ದಫ್ ಕಲಾ ಒಕ್ಕೂಟದಿಂದ ಹಾಡು ಸ್ಪರ್ಧೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು