News Kannada
Monday, February 06 2023

ಮಡಿಕೇರಿ

ಮಡಿಕೇರಿ: ಜ.6, 7, 8 ರಂದು ಹಾವೇರಿಯಲ್ಲಿ ನಡೆಯಲಿದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

The 86th Akhila Bharatha Kannada Sahitya Sammelana will be held at Haveri on January 6, 7 and 8.
Photo Credit : By Author

ಮಡಿಕೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2023ರ ಜನವರಿ 6, 7, 8 ರಂದು ಹಾವೇರಿಯಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಸಾಧಕರನ್ನು ಸನ್ಮಾನಿಸುವ, ಸಾಹಿತಿಗಳಿಗೆ ಕವನ ವಾಚನ ಮತ್ತು ವಿಷಯ ಮಂಡನೆಗೆ ಅವಕಾಶ ನೀಡಲಾಗಿದೆ.

ದಿನಾಂಕ 6/1/2023 ರ ಶುಕ್ರವಾರ ಸಂಜೆ 6.00 ಗಂಟೆಗೆ ನಡೆಯಲಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರರಾದ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರಿಯಪ್ಪ ಅವರಿಗೆ ರಕ್ಷಣಾ ಕ್ಷೇತ್ರದಲ್ಲಿ ದೇಶ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸನ್ಮಾನ ನಡೆಯಲಿದೆ.

ಇದು ಕೊಡಗು ಜಿಲ್ಲೆಗೆ ಮತ್ತು ಕೊಡಗಿನ ರಕ್ಷಣಾ ಕ್ಷೇತ್ರದ ಸೇವೆಗೆ ನೀಡಿದ ಗೌರವವಾಗಿದೆ. ದಿನಾಂಕ 08.01.2023ರ ಭಾನುವಾರ ಮಧ್ಯಾಹ್ನ 3:00ಗೆ ನಡೆಯಲಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಸಾಹಿತ್ಯ ಸಂಘಟಕ ಟಿ.ಪಿ ರಮೇಶ್ ರವರನ್ನು ಸನ್ಮಾನಿಸಲಾಗುವುದು.

ದಿನಾಂಕ 06.01. 2023ರ ಭಾನುವಾರ 4 ಗಂಟೆಗೆ ಜರಗುವ ಕವಿಗೋಷ್ಠಿಯಲ್ಲಿ ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ ಜಯಪ್ರಕಾಶ್ ರವರು ಕವನ ವಾಚನ ಮಾಡಲಿದ್ದಾರೆ.

ದಿನಾಂಕ : 07.01.2023 ರ ಶನಿವಾರ ಮದ್ಯಾಹ್ನ 3.00 ಗಂಟೆಗೆ ನಡೆಯುವ “ಶಿಕ್ಷಣದಲ್ಲಿ ಕನ್ನಡ ಅಸ್ಮಿತೆ” ಎಂಬ ವಿಚಾರ ಗೋಷ್ಠಿಯಲ್ಲಿ ಕೊಡಗಿನವರಾದ, ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ ಮಾಧವ ಪೆರಾಜೆ ( ಇವರು ದಿ. ಕೇಶವ ಪೆರಾಜೆ ಅವರ ಸಹೋದರರು) ಅವರು ಆಶಯ ಭಾಷಣ ಮಾಡಲಿದ್ದಾರೆ.

ದಿನಾಂಕ 07.01.2023ರ ಶನಿವಾರ ಕರ್ನಾಟಕ ಭಾಷಾ ವೈವಿಧ್ಯ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಕೊಡವ ಭಾಷಾ ವೈವಿಧ್ಯ ಕುರಿತು ಮಡಿಕೇರಿಯ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ. ಕಾವೇರಿ ಎನ್ ಎ ಉಪನ್ಯಾಸ ನೀಡಲಿದ್ದಾರೆ. ಅದೇ ವೇದಿಕೆಯಲ್ಲಿ ಅರೆ ಭಾಷೆ ವೈವಿಧ್ಯತೆಯ ಕುರಿತು ಜಿಲ್ಲೆಯ ಸಾಹಿತಿ ಶ್ರೀಮತಿ ಸ್ಮಿತಾ ಅಮೃತರಾಜ್ ರವರು ಉಪನ್ಯಾಸ ನೀಡಲಿದ್ದಾರೆ.

ದಿನಾಂಕ. 08.01.2023 ಭಾನುವಾರ ವರ್ತಮಾನದಲ್ಲಿ ಮಹಿಳೆ ಗೋಷ್ಠಿಯಲ್ಲಿ ಔದ್ಯೋಗಿಕ ಮಹಿಳೆಯರ ಸಾಧನೆಗಳು ಎಂಬ ವಿಚಾರದ ಕುರಿತು ಜಿಲ್ಲೆಯ ಉದ್ಯಮಿ ಜೇನು ಕೃಷಿ ಮತ್ತು ಮಾರುಕಟ್ಟೆಯಲ್ಲಿ ಅಪ್ರತಿಮ ಸಾಧನೆ ಸಾಧಿಸಿದ ಶ್ರೀಮತಿ ಛಾಯಾ ನಂಜಪ್ಪ ರವರು ವಿಷಯ ಮಂಡನೆ ಮಾಡಲಿದ್ದಾರೆ.

ಈ ಬಾರಿ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಏಳು ಜನರಿಗೆ ಅವಕಾಶ ದೊರೆತಿದ್ದು ಇದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂದ ಗೌರವವಾಗಿದೆ. ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಕಾರ್ಯಕ್ರಮದಲ್ಲಿ ಸ್ವಾಗತ ಜವಾಬ್ದಾರಿ ನಿರ್ವಹಿಸಲಿದ್ದು ವಿರಾಜಪೇಟೆ ತಾಲೂಕು ಅಧ್ಯಕ್ಷ ಡಿ ರಾಜೇಶ್ ಪದ್ಮನಾಭ ರವರು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

See also  ಚಿತ್ರದುರ್ಗ: ಲೈಂಗಿಕ ಹಗರಣ, ಆಡಳಿತಾಧಿಕಾರಿಗಳ ನೇಮಕ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಮತ್ತು ಕನ್ನಡ ಅಭಿಮಾನಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು