ಮಡಿಕೇರಿ: ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ರವರು ಸರ್ಕಾರದ ನಡೆಯನ್ನು ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.
ಸಾಹಿತ್ಯ ಸಮ್ಮೇಳನ ಆಗುತ್ತಿದೆ ಎಂಬ ಸಂಶಯ ಕನ್ನಡಿಗರಿಗೆ ಮೂಡುತಿದೆ. ಈ ತಾರತಮ್ಯಗಳು ಕನ್ನಡಿಗರ ಮೇಲೆ ದೊಡ್ಡ ಬರೇ ಎಳೆದಂತಾಗಿದೆ. ಕರ್ನಾಟಕ ಸರ್ಕಾರ 20 ಕೋಟಿ ಹಣ ಈ ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆ ಮಾಡಿದೆ ಇದು ಜನರ ತೆರಿಗೆ ಹಣ. ಹಣ ನೀಡಿ ಸುಮ್ಮನೆ ಕುಳಿತುಕೊಂಡಿದೆ. ಮಾರ್ಗಸೂಚಿ ಇಲ್ಲ ಪೂರ್ವಭಾವಿ ಸಭೆ ಇಲ್ಲ ಒಟ್ಟಿನಲ್ಲಿ ಸರ್ಕಾರ ಏನೇನು ಮಾಡಲು ಹೊರಟಿದೆ ಎಂದು ಹೆಚ್ ವಿಶ್ವನಾಥ್ ಅವರು ನೇರವಾಗಿ ಸರ್ಕಾರವನ್ನು ದೂಷಣೆ ಮಾಡಿದರು.
75 ಜನ ಸಾಧಕರಿಗೆ ಸನ್ಮಾನವಿದೆ, ಆದರೆ ಒಬ್ಬರೇ ಒಬ್ಬರು ಮುಸಲ್ಮಾನ ನಿಗೆ ಸನ್ಮಾನವಿಲ್ಲ ಯಾಕೆ? ಎಂದು ಅವರು ಪ್ರಶ್ನಿಸಿದರು, ಇದು ಸಾಂಸ್ಕೃತಿಕ ಹಬ್ಬವಾಗಬೇಕು, ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರನ್ನೊಳಗೊಂಡ ಹಬ್ಬವಾಗಬೇಕೆನಃ ಪ್ರತ್ಯೇಕತೆಯ ಹಬ್ಬವಾಗಬಾರದು ಎಂದರು.
ಘೋಷ್ಠಿಯಲ್ಲಿ ಸರ್ಕಾರದ ವಿವಿಧ ನಡೆಗಳ ವಿರುದ್ಧವೇ ಮಾತನಾಡಿದ ಹೆಚ್ ವಿಶ್ವನಾಥ್ ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೇರೆ ಪಕ್ಷದೊಂದಿಗೆ ಕೈಜೋಡಿಸುವ ಎಲ್ಲಾ ಸಾಧ್ಯತೆಗಳು ಇರಬಹುದಾಗಿದೆ ಎಂದರು.