News Kannada
Thursday, February 02 2023

ಮಡಿಕೇರಿ

ವಿರಾಜಪೇಟೆ: ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ ವಕೀಲ ರತ್ನಾಕರ್ ಶೆಟ್ಟಿ ಅವಿರೋಧ ಆಯ್ಕೆ

Virajpet: Advocate Ratnakar Shetty elected unopposed as President of Kodagu District Bunts
Photo Credit : News Kannada

ವಿರಾಜಪೇಟೆ: ಭಾನುವಾರ ವಿರಾಜಪೇಟೆ ಸಮೀಪದ ಮಗ್ಗುಲದ ಅಗ್ನೋನಿಮಾ ರೆಸಾರ್ಟ್ ನಲ್ಲಿನ ಜಿಲ್ಲಾ ಬಂಟರ ಸಂಘದ ಮಹಾಸಭೆಯಲ್ಲಿ ವಿರಾಜಪೇಟೆಯ ಹಿರಿಯ ವಕೀಲರು, ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ.ಆರ್ ರತ್ನಾಕರ ಶೆಟ್ಟಿ ಅವರನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ರೈ, ಹಾಗೂ ನಾರಾಯಣ್ ರೈ ಯವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ವಿರಾಜಪೇಟೆಯ ಶಬರೀಶ್ ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಗಿದೆ. ಸಭೆಯಲ್ಲಿ ನೂತನ ಆಡಳಿತ ಮಂಡಳಿ ಹಾಗೂ 5 ತಾಲೂಕುಗಳ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.

ವಿರಾಜಪೇಟೆ ಹಾಗೂ ಕೊಡಗು ಜಿಲ್ಲೆಯ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ವ್ಯಾಜ್ಯಗಳಿಗೆ ವಕಾಲತು ವಹಿಸಿಕೊಂಡಿರುವ ವಕೀಲ ಎಂಬ ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಭಾಜನರಾದ ಶ್ರೀ ಬಿ ರತ್ನಾಕರ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿ ವಿರಾಜಪೇಟೆ ತಾಲೂಕು ತುಳುವೆರನ ಜನಪದ ಕೂಟದ ವತಿಯಿಂದ ಸರಳವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಬಿ. ಎಂ. ಗಣೇಶ್,  ದಿವ್ಯ, ಭರತ್ ರೈ , ವಿನೋದ್ ಪೂಜಾರಿ, ಬಿ .ಜಿ .ಅನಿತಾ, ಶರತ್ ರೈ, ಗಣೇಶ್ ಪೆರಂಬಾಡಿ, ತಾಲೂಕು ಅಧ್ಯಕ್ಷರಾದ ಕೆ ಸಿ ಶಬರೀಶ್ ಶೆಟ್ಟಿ, ಉಪಸ್ಥಿತರಿದ್ದರು.

See also  ಮಡಿಕೇರಿ: ವಿರಾಜಪೇಟೆ ಜೆಡಿಎಸ್ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ- ಪಿ.ಎ ಮಂಜುನಾಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು