ಕೊಡಗು: ಕೊಡಗು ಜಿಲ್ಲಾನೇಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಎಸೋ ಸಿಯೇಷನ್ ನ ಸರ್ವ ಸದಸ್ಯರ ಸಭೆಯು ಇದೇ ಜನವರಿ ೮ರಂದು ಮಡಿಕೇರಿಯಲ್ಲಿನಡೆದು ಅಧ್ಯಕ್ಷರಾಗಿ ಡಾ ಎ. ಆರ್. ರಾಜಾರಾಮ್, ಕಾರ್ಯದರ್ಶಿಯಾಗಿ ಡಾ ಶ್ಯಾಮ್ ಪ್ರಸಾದ್ ಮತ್ತು ಕೋಶಾಧಿಕಾರಿಯಾಗಿ ಡಾ ಪದ್ಮನಾಭ ಅವಿರೋ ಧವಾಗಿ ಆಯ್ಕೆಯಾದರು.
ಹೊ ಸ ಕಾರ್ಯಕಾರಿ ಮಂಡಳಿಯ ಪೋಷಕರಾಗಿ ಡಾ ಸಿ ಆರ್ ಉದಯಕುಮಾರ್ ಮತ್ತುಡಾ ಬಿ ವಿ ಶೆಣೈ; ಉಪಾಧ್ಯಕ್ಷರಾಗಿ ಡಾ ಉದಯ ಕುಮಾರ್, ಡಾ ಅರುಣಾ ಭಟ್ ಮತ್ತುಡಾ ವಿವೇಕ್ ರಾವ್; ಜತೆ ಕಾರ್ಯದರ್ಶಿಗಳಾಗಿ ಡಾ ಮುರಳಿ ಮತ್ತುಡಾ ಸುದೇಶ್ ಹೆಗ್ಡೆ, ತಾಲೂಕು ಪ್ರತಿನಿಧಿಗಳಾಗಿ ಡಾ ರೋ ಷನ್ (ವಿರಾಜಪೇಟೆ), ಡಾ ಪುರುಷೋ ತ್ತಮ್ (ಮಡಿಕೇರಿ), ಡಾ ಮಹೇಶ್ (ಸೋ ಮವಾರಪೇಟೆ), ಡಾ ರಾಜಾರಾಮ್ ಶೆಟ್ಟಿ (ಕುಶಾಲನಗರ) ಮತ್ತು ಡಾ ಸುಬ್ರಮಣ್ಯ ರಾವ್ (ಪೊನ್ನಂ ಪೇಟೆ); ಮಹಿಳಾ ಪ್ರತಿನಿಧಿಯಾಗಿ ಡಾ ಶೈಲಜಾ ರಾಜೇಂದ್ರ ಆಯ್ಕೆಯಾದರು. ರಾಜ್ಯ ಕಾರ್ಯಕಾರಿ ಮಂಡಳಿಗೆ ಡಾ ಪಿ. ಎನ್. ಕುಲಕರ್ಣಿ ಮತ್ತುಡಾ ಎನ್ ಕೆ ರಾಜೇಂದ್ರ ಜಿಲ್ಲಾಪ್ರತಿನಿಧಿಗಳಾದರು.
ವಿವಿಧ ಯೋಜನೆಗಳ ಸಂಚಾಲಕರಾಗಿ ಈ ಕೆಳಗಿನ ವೈದ್ಯರು ನೇಮಕಗೊಂಡರು: ಆರೋ ಗ್ಯ ತಪಾಸಣಾ ಕಾರ್ಯಕ್ರಮ ಗಳಿಗೆ ಡಾ ಸಂತೋ ಷ್ ಮತ್ತುಡಾ ಧನ್ಯಾ; ರಕ್ತದಾನ ಶಿಬಿರಗಳಿಗೆ ಡಾ ಸಾವಿತ್ರಿ ಮತ್ತುಡಾ ಜ್ಯೋತಿ, ವನಸ್ಪತಿ ಉದ್ಯಾನ ಯೋಜನೆಗೆ ಡಾ ಶ್ವೇತಾ ಮತ್ತುಡಾ ಮಮತಾ, ಕಾರ್ಯಕ್ರಮ ರೂಪುರೇಷೆ ಗಳಿಗೆ ಡಾ ಸೌಮ್ಯ ಗಣರಾಜ್ , ಡಾ ಹೀನಾ ಕೌಸರ್, ಡಾ ಅದಿತಿ ಭಟ್ ಮತ್ತುಡಾ ನಿಧಿ; ನಿರಂತರ ವೈದ್ಯ ಶಿಕ್ಷಣ ಕ್ಕೆ ಡಾ ಲಕ್ಷ್ಮೀಶ್ ಮತ್ತುಡಾ ಈಶ್ವರಿ. ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಡಾ. ಉದಯ ಶಂಕರ್. ಆಯ್ಕೆ ಆದರು.
ಕಾಯಿಲೆಗಳ ಚಿಕಿತ್ಸಾ ವಿಧಾನದ ತರಬೇತಿ
ಪುತ್ತೂರಿನ ಸುಶ್ರುತ ಆಸ್ಪತ್ರೆಯ ಜನಪ್ರಿಯ ಸರ್ಜನ್ ಡಾ ರವಿಶಂಕರ್ ಪೆರ್ವಾಜೆಯವರು ನಿರಂತರ ವೈದ್ಯ ಶಿಕ್ಷಣದ ಅಂಗವಾಗಿ ಮೂಲ ವ್ಯಾಧಿ, ಫಿಸ್ಟುಲ ಮೊದಲಾದ ಗುದ ಮಾರ್ಗದ ರೋಗಗಳ ಚಿಕಿತ್ಸಾ ವಿಧಾನಗಳನ್ನು ವಿವರಿಸಿ ರೋಗ ಪತ್ತೆಗೆ ಸೂಕ್ತಆಧುನಿಕ ಸಲಕರಣೆಗಳನ್ನು ಉಪಯೋಗಿಸುವಂತೆ ಕಿವಿಮಾತು ಹೇಳಿದರು.
ಬಳಿಕ ನಡೆದ ಸಂವಾದದಲ್ಲಿಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು .ಝಂಡು ಸಂಸ್ಥೆಯ ಡಾ ಸದಾನಂದ ಪತ್ರಿ ತಮ್ಮ ಕಂಪೆನಿಯ ಹೊ ಸ ಉತ್ಪನ್ನಗಳನ್ನು ಪರಿಚಯಿಸಿದರು.
ಡಾ ಸೌಮ್ಯ ಗಣರಾಜ್, ಡಾ ಅದಿತಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ ಶೈಲಜಾ ರಾಜೇಂದ್ರ ಸ್ವಾಗತಿಸಿ, ಡಾ ಮುರಳಿ ವಂದಿಸಿದರು.