ಮಡಿಕೇರಿ, ಜ.18: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ರಾಜ್ಯದ ಎಲ್ಲಾ ಆಹಾರ ವಸ್ತುಗಳ ತಯಾರಕರು, ರಿಲೇಬಲ್, ರಿಪ್ಯಾಕಿಂಗ್ ಆಮದುದಾರರು ಮತ್ತು ತಯಾರಕ-ರಪ್ತುದಾರರು ತಮ್ಮ ಘಟಕದ ಆಹಾರ ಪದಾರ್ಥ ವಹಿವಾಟಿನ 2020-21 ಮತ್ತು 2021-22 ಹಾಗೂ 2022-23ನೇ ಸಾಲಿನ ವಾರ್ಷಿಕ ವರಮಾನ ವಿವರಗಳನ್ನು ಪ್ರತಿ ಆರ್ಥಿಕ ವರ್ಷದ ಮೇ-31 ರ ಕಾಲಮಿತಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅಧಿಕೃತ ಅಂರ್ತಜಾಲ https://foscos.fssai.gov.in ರಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
ಈ ಬಗ್ಗೆ ಈಗಾಗಲೇ ಅಧಿಕೃತ ಅಂರ್ತಜಾಲ ತಾಣದಲ್ಲಿಯೂ ಮಾಹಿತಿ ನೀಡಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಆಹಾರ ಪರವಾನಗಿ ಪಡೆದಿರುವ ಎಲ್ಲಾ ಆಹಾರ ಪದಾರ್ಥ ತಯಾರಕರು ಮತ್ತು ಪ್ಯಾಕರ್ಸ್, ರಿಲೇಬಲ್ದಾರರು, ಆಮದುದಾರರು ಹಾಗೂ ತಯಾರಕ-ರಪ್ತುದಾರರು ತಮ್ಮ ವಾರ್ಷಿಕ ವರಮಾನ ವಿವರವನ್ನು ಮತ್ತು ತಾವು ತಯಾರಿಸುವ ಅಥವಾ ರಿಲೇಬಲ್, ರಿಪ್ಯಾಕಿಂಗ್ ಮಾಡುವ ಆಹಾರ ಪದಾರ್ಥಗಳನ್ನು ಪ್ರತಿ 6 ತಿಂಗಳಿಗೊಮ್ಮ ರಾಷ್ಟ್ರೀಯ ಪ್ರಯೋಗಾಲಯ ಮಾನ್ಯತಾ ಮಂಡಳಿಯಿಂದ (ಎನ್ಎಬಿಎಲ್) ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರಕ್ಕೆ ನೋಂದಾಯಿತ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ವರದಿಯನ್ನು ಅಧಿಕೃತ ಅಂರ್ತಜಾಲತಾಣದಲ್ಲಿ ತಮ್ಮ ತಮ್ಮ ಲಾಗಿನ್ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
ಇಲ್ಲದಿದಲ್ಲಿ ದಿನಕ್ಕೆ ರೂ. 100 ರಷ್ಟು ದಂಡ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ಅನಿಲ್ ಧವನ್ ಅವರು ತಿಳಿಸಿದ್ದಾರೆ.