ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಅಶ್ವಿನಿ ಆಸ್ಪತ್ರೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಯೋಗ್ ಆಸ್ಪತ್ರೆ, ವಾಕ್ ಮತ್ತು ಶ್ರವಣ ಇನ್ ಪ್ಲಾಂಟ್ ಕ್ಲಿನಿಕ್ ಹಾಗೂ ಜಸ್ಟೀಸ್ ಕೆ.ಎಸ್. ಹೆಗಡೆ ಸ್ಮಾರಕ ದಂತ ವಿಭಾಗದ ಸಹಯೋಗದಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ಶನಿವಾರ (ಫೆ.4) ಆರೋಗ್ಯ ತಪಾಸಣಾ ಉಚಿತ ಶಿಬಿರ ಏರ್ಪಡಿಸಿದ್ದು, ಸಭಾ ಕಾರ್ಯಕ್ರಮ ಅಂದು ಬೆಳಗ್ಗೆ 11.30ಕ್ಕೆ ಆಸ್ಪತೆ ಆವರಣದಲ್ಲಿ ನಡೆಯಲಿದೆ.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ.ರಾಜೇಂದ್ರ ಮತ್ತು ಭಾರತೀಯ ವಿದ್ಯಾಭವನ, ಕೊಡಗು ಕೇಂದ್ರದ ಅಧ್ಯಕ್ಷ, ಅಶ್ವಿನಿ ಆಸ್ಪತ್ರೆ ಸಲಹಾ ಸಮಿತಿ ಸದಸ್ಯ ಕೆ.ಎಸ್. ದೇವಯ್ಯ ಉದ್ಘಾಟಿಸುವರು.
ಮಡಿಕೇರಿ ಅಶ್ವಿನಿ ಆಸ್ಪತ್ರೆ ವಿಶ್ವಸ್ಥ ಎಂ.ಸಿ. ಗೋಖಲೆ, ಕಾರ್ಯದರ್ಶಿ ಕುಪ್ಪಂಡ ರಾಜಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಿತಿ ಆರೋಗ್ಯ ಸಮಿತಿ ಸಂಚಾಲಕ ಎಂ.ಅಬ್ದುಲ್ಲಾ, ಮಡಿಕೇರಿ ವಾಕ್ ಮತ್ತು ಶ್ರವಣ ಇನ್ ಪ್ಲಾಂಟ್ ಕ್ಲಿನಿಕ್ ಸಮನ್ವಯಕಾರ ಜೇರುಸ್ ಥಾಮಸ್ ಅಲೆಗ್ಸಾಂಡರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.