News Kannada
Monday, March 27 2023

ಮಡಿಕೇರಿ

ಮಡಿಕೇರಿ: ನೂತನ ತಾಲ್ಲೂಕು ಕುಶಾಲನಗರದಲ್ಲಿ ವಿಜೃಂಭಿಸಿದ ಸಾಹಿತ್ಯ ಸಮ್ಮೇಳನ

Madikeri: A literary meet was held at Kushalnagar in madikeri taluk.
Photo Credit : News Kannada

ಮಡಿಕೇರಿ: ಕೊಡಗಿನ ಗಡಿ ಕುಶಾಲನಗರದಲ್ಲಿ ನಿನ್ನೆ ದಿನ ಅದ್ಭುತವಾಗಿ ನಡೆದ ಕನ್ನಡದ ಜಾತ್ರೆಯನ್ನು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮುಖಾಂತರ ಕಾರ್ಯಕ್ರಮ ಶುರು ಮಾಡಲಾಯಿತು. ನಂತರ ದಿವಂಗತರ ಹೆಸರಿನಲ್ಲಿ ಐದು ದ್ವಾರಗಳ ಉದ್ಘಾಟನೆ, ಗುಂಡುರಾವ್ ಸಭಾಂಗಣ ಉದ್ಘಾಟನೆ ಮತ್ತು ಕೊಡಗಿನ ಗೌರಮ್ಮ ವೇದಿಕೆ ಉದ್ಘಾಟನೆಯನ್ನು ಹಲವಾರು ಗಣ್ಯರು ನೆರವೇರಿಸಿದರು.

ನಂತರ ಕುಶಾಲನಗರದ ಗಡಿ ಕಾವೇರಿ ಪ್ರತಿಮೆ ಬಳಿ ಮೆರವಣಿಗೆಯನ್ನು ಬಾಚರಣಿಯಂಡ ಪಿ. ಅಪ್ಪಣ್ಣನವರು ಉದ್ಘಾಟಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕೊಪ್ಪ ಗಡಿಯಿಂದ ವಿವಿಧ ಕಲಾತಂಡಗಳು, ಭಜನಾ ಮಂಡಳಿ ಹಾಗೂ ಮಂಗಳವಾದ್ಯದೊಂದಿಗೆ ಮುಖ್ಯ ರಸ್ತೆಯಲ್ಲಿ ಸಮ್ಮೇಳನ ಅಧ್ಯಕ್ಷರಾದ ಶ್ರೀ ಬಿ.ಆರ್. ನಾರಾಯಣ ಸಾಹಿತಿಗಳು, ಶಾಸಕರಾದ ಅಪ್ಪಚ್ಚು ರಂಜನ್, ಕಸಾಪ ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್, ಕುಶಾಲನಗರ ತಾಲೂಕು ಅಧ್ಯಕ್ಷರಾದ ಮೂರ್ತಿ ಮತ್ತು ಪುರಸಭೆ ಅಧ್ಯಕ್ಷರಾದ ಜಯವರ್ಧನ್ ರವರನ್ನು ಅಲಂಕರಿಸಿದ ವಾಹನದ ಮುಖಾಂತರ ಸಾಗಿದ ಮೆರವಣಿಗೆ ನೋಡುಗರ ಕಣ್ ಮನ ಸೆಳೆದಿತ್ತು ಕೊನೆಗೆ ಕಾರ್ಯಕ್ರಮ ನಡೆಯುವ ರೈತ ಸಹಕಾರ ಭವನದವರೆಗೆ ಬಂದ ನಂತರ ವಿವಿಧ ಮಳಿಗೆಗಳು, ಚಿತ್ರಕಲಾ ಮಳಿಗೆಗಳು ಗಣ್ಯರಿಂದ ಉದ್ಘಾಟಿಸಲಾಯಿತು.

ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮವು ನಾಡಗೀತೆ, ರೈತ ಗೀತೆ, ಮತ್ತು ಉದ್ಘಾಟನಾ ಗೀತೆಯ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ಬಸವರಾಜ್ ಹೊರಟ್ಟಿಯವರು ಉದ್ಘಾಟಿಸಿ ನಂತರ ಅವರ ಭಾಷಣದಲ್ಲಿ ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಕಲಿಯಿರಿ, ಕನ್ನಡವನ್ನು ಉಳಿಸಿ ಬೆಳೆಸಿ, ನಮ್ಮ ರಾಜ್ಯವನ್ನು ಬಲಿಷ್ಠ ರಾಜ್ಯವಾಗಿಸಿ ಎಂದು ನಡೆದ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ರವರು ಮಾತನಾಡಿ ಕುಶಾಲನಗರ ತಾಲ್ಲೂಕು ಆದ ಬಗ್ಗೆ ಮತ್ತು ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ ದರ್ಜೆಗೇರಿಸಿದ ಬಗ್ಗೆ ಕುಶಾಲನಗರದ ಜನರಿಗೆ ಡಬಲ್ ಧಮಾಕ ಎಂದು ಹೇಳಿದರು, ತದನಂತರ ವೇದಿಕೆಯಲ್ಲಿದ್ದ ಹಲವಾರು ಗಣ್ಯರು ಮಾತನಾಡಿದರು.

ಉದ್ಘಾಟನಾ ಸಮಾರಂಭ ನಡೆದ ನಂತರ ವೇದಿಕೆಯಲ್ಲಿ ಗೀತ ಗಾಯನ, ವಿಚಾರಗೋಷ್ಠಿ, ಕವಿಗೋಷ್ಠಿ, ಬಹಿರಂಗ ಅಧಿವೇಶನ, ಸನ್ಮಾನ ಕಾರ್ಯಕ್ರಮ, ಸಮರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಕಾರ್ಯಕ್ರಮಗಳನ್ನು ಮುಗಿಸಲಾಯಿತು. ನೆರೆದಿದ್ದ ಸರ್ವರಿಗೂ ಬೆಳಿಗ್ಗೆ ತಿಂಡಿಯ ವ್ಯವಸ್ಥೆ, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ಲಘು ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಸದಸ್ಯರಾದ ಸುಜಾ ಕುಶಾಲಪ್ಪ, ಕಸಾಪ ಕೊಡಗು ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್, ಪುರಸಭೆ ಅಧ್ಯಕ್ಷರಾದ ಜಯವರ್ಧನ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷರಾದ ಮೂರ್ತಿ, ಹೈಕೋರ್ಟ್ ವಕೀಲರಾದ ಚಂದ್ರಮೌಳಿ, ಟಿ ಪಿ ರಮೇಶ್, ಭಾರದ್ವಾಜ್ ಕೆ ಆನಂದ ತೀರ್ಥ, ನಾಗೇಂದ್ರ ಪ್ರಸಾದ್, ಜಿ.ಎಲ್. ನಾಗರಾಜ್, ಚಂದ್ರಕಲಾ, ವಿ. ಪಿ. ಶಶಿಧರ್, ಮಂತರ್ ಗೌಡ, ಆರ್. ಕೆ. ನಾಗೇಂದ್ರ ಬಾಬು, ವೆಂಕಟೇಶ್ ಪೂಜಾರಿ, ಲೋಕೇಶ್ ಸಾಗರ್, ಎಂ.ಡಿ. ರಂಗಸ್ವಾಮಿ, ಎಂ.ಕೆ ದಿನೇಶ್, ಸುರೇಶ್, ಸಬಲಂ ಭೋಜಣ್ಣ ರೆಡ್ಡಿ, ಮೊಹಿದ್ದಿನ್, ಪ್ರೇಮ್ ಕುಮಾರ್, ಉ.ರಾ. ನಾಗೇಶ್, ಶಾಂತಿ, ಉತ್ತಪ್ಪ, ನಾಗೇಗೌಡ, ದೀಪಕ್, ರವಿ ರೈ, ಪ್ರಮೋದ್, ಮಂಜು, ಎಸ್.ಕೆ. ಸತೀಶ್, ನಾಗೇಂದ್ರ ಪ್ರಸಾದ್, ಆನಂದ್, ಕೆ.ಜಿ.ಮನು, ಹೆಚ್.ಎಂ.ರಘು, ಪ್ರಸನ್ನ, ವರದ, ಖಲಿಮುಲ್ಲಾ, ದೇವರಾಜ್, ಚಂದ್ರು, ಸರವಣ, ಫ್ಯಾನ್ಸಿ ಮುತ್ತಣ್ಣ, ಗೀತಾ ಲಿಂಗಪ್ಪ, ಎಂ.ಡಿ.ಕೃಷ್ಣಪ್ಪ, ಭಾರತಿ, ಪುಷ್ಪ, ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

See also  ಗ್ಲೋಬಲ್ ಕೊಡವ ತಕ್ಕ್ ಆಫ್-2021 ಸ್ಪರ್ಧೆ : ಕೊಡಗು ತಂಡ ಅಧಿಕ ಅಂಕ ಗಳಿಸಿ ಚಾಂಪಿಯನ್

ಬಹಳ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದ ಬಗ್ಗೆ ನೆರೆದಿದ್ದ ಸಾರ್ವಜನಿಕರಿಂದ ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು