ಮಡಿಕೇರಿ: ಸೋಮವಾರಪೇಟೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ನೆಡೆಯುತ್ತಿದು. ಬಹುತೇಕ ಕೆಲವು ವಾರ್ಡಗಳಲ್ಲಿ ಕಳಪೆ ಕಾಮಗಾರಿಯಾಗಿದ್ದು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯೇ ವಿರೋದ ವ್ಯಕ್ತಪಡಿಸಿದ್ದಾರೆ.
ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯಿತಿಗೆ ರೂ. 2 ಕೋಟಿ 26 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ವಿವಿಧ ರಸ್ತೆಗಳ ಕಾಂಕ್ರಿಟೀಕರಣ, ಡಾಂಬರೀಕರಣ, ಚರಂಡಿ, ಮೋರಿ ನಿರ್ಮಾಣ ನೆಡೆಯುತ್ತಿದೆ. ಪ್ರಮುಖವಾಗಿ ಚರಂಡಿ ನಿರ್ಮಾಣದಲ್ಲಿ ಹೇಳಲಾರದಷ್ಟು ಕಳಪೆ ಕಾಮಗಾರಿ ಕಂಡುಬಂದದಿದೆ. ಹಾಸನದ ಮುಖ್ಯ ಗುತ್ತಿಗೆದಾರನ ಕೈಯಿಂದ ಕೈಗೆ ಬದಲಾಗಿ ಸೋಮವಾರಪೇಟೆಯ ಸಂದೀಪ್ ಎಂಬಾತ ನಡೆಸುತ್ತಿರುವ ಕಾಮಗಾರಿಗಳು ಕಳಪೆ ಯಾಗಿದ್ದು ಗುತ್ತಿಗೆದಾರನಿಗೆ ಇಷ್ಟ ಬಂದಂತ್ತೆ ನೆಡೆಯುತ್ತಿದೆ.
ಈ ಕಾಮಗಾರಿಗಳು ಸಿದ್ದವಾದ ಕೆಲವೇ ತಿಂಗಳಿನಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಶಾಸಕರು ಗುದ್ದಲಿ ಪೂಜೆ ನಡೆಸಿ ಎರೆಡು ತಿಂಗಳಾದರೂ ಆಗೊಮ್ಮೆ ಈಗೊಮ್ಮೆ ಕೆಲಸ ಮಾಡಲು ಬರುವ ಈ ಗುತ್ತಿಗೆದಾರ ಇಲ್ಲಿನ ವಲ್ಲಬಾಯಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯಲ್ಲಿ ಎರೆಡು ಅಡಿಆಳದ ಚರಂಡಿ ನಿರ್ಮಾಣಕ್ಕೆ ಈತ ನೆಲ ಆಗೆದಿರುವುದು ಒಂದೂವರೆ ಅಡಿಯಷ್ಟು, ಮೊದಲು 4 ಇಂಚು ಬೆಡ್ಡಿಂಗ ಹಾಕುವಲ್ಲಿ ಕೇವಲ ಒಂದೂವರೆ ಇಂಚಿನಷ್ಟು , 7 ಇಂಚಿಗೇ ಬದಲಾಗಿ 10 ಒಂಚಿಗೆ ಒಂದು ರಾಡು ಹಾಕುವ ಮೂಲಕ ಕಳಪೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ.
ಕಾಮಗಾರಿಗಳನ್ನು ಪರಿಶೀಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಪಿ ಕೆ ಚಂದ್ರು,ಸದಸ್ಯರುಗಳಾದ ಎಸ್ ಮಹೇಶ್. ಮೋಹಿನಿ. ಇವರುಗಳು ಹದಗೆಟ್ಟ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಾಗಿದೆ. ಈ ಬಗ್ಗೆ ಗುತ್ತಿಗೆದಾರನಿಗೆ ಸರಿಯಾಗಿ ಕಾಮಗಾರಿ ಮಾಡುವಂತ್ತೆ ತಿಳಿಸಿದರು ಎಚ್ಚೆತ್ತುಕೊಳ್ಳುತ್ತಿಲ್ಲ. ಎಷ್ಟು ಕರೆ ಮಾಡಿದರು ಸ್ವೀಕರಿಸುವುದಿಲ್ಲ. ಒಬ್ಬ ಬೇಜವಾಬ್ದಾರಿ ಗುತ್ತಿಗೆದಾರನಾಗಿದ್ದಾನೆ ಎನ್ನುತಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಕ್ವಾಲಿಟಿ ಇಂಜಿನಿಯರ್ ಸಂಬ್ರಮ್ ಕಾಮಗಾರಿಯನ್ನು ಪರಿಶೀಲಿಸಿ. ಉತ್ತಮ ಗುಣಮಟ್ಟ ಕಂಡುಬಂದಿಲ್ಲ ಆದ್ದರಿಂದ ನಿಲ್ಲಿಸಿ, ಸರಿಯಾದ ರೀತಿಯಲ್ಲಿ ಕಾಮಗಾರಿ ನೆಡೆಸುವಂತ್ತೆ ಗುತ್ತಿಗೆ ದಾರನಿಗೆ ತಿಳಿಸಿ ಹೊಸದಾಗಿ ಹಾಗೂ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಸೂಚಿಸಿದರು ಕೇರೆ ಎನ್ನದ ಗುತ್ತಿಗೆದಾರ ರಾತ್ರೋ,ರಾತ್ರಿ ಕಾಂಕ್ರೀಟ್ ಹಾಕಿ ಪಟ್ಟಣ ಪಂಚಾಯ್ತಿಗೆ ಸಡ್ಡು ಹೊಡೆದಿದ್ದಾರೆ.
ರೇಂಜರ್ ಬ್ಲಾಕಿನಲ್ಲೂ ಕಾಂಕ್ರೀಟ್ ಹಾಕಿದ ಮಾರನೇ ದಿನವೇ ಸೇಂಟ್ರಿಂಗ್ ಬಿಚ್ಚಿದ್ದು ಚರಂಡಿ ಈಗಲೇ ಬಿರುಕು ಬಿಟ್ಟಿದೆ.
ನಗರೋತ್ಥಾನ ಯೋಜನೆ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯ್ತಿ ಅಸಹಾಯಕರಾಗಿದ್ದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.