ಮಂಡ್ಯ: ಎಲ್ಲಿಯವರೆಗೂ ಜನ ಜಾಗೃತರಾಗುವುದಿಲ್ಲವೋ ಅಲ್ಲಿಯವರೆವಿಗೂ ಸಮಾಜವೂ ಜಾಗೃತವಾಗುವುದಿಲ್ಲ . ಅದನ್ನು ಎಚ್ಚರಿಸುವ ಕೆಲಸವನ್ನು ಹಿಂದೂಪರ ಸಂಘಟನೆಗಳು ನಿರಂತರವಾಗಿ ಮಾಡುತ್ತಿವೆ ಎಂದು ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ. ಮಂಜುನಾಥ್ ತಿಳಿಸಿದರು.
ನಗರದ ಭಜರಂಗಸೇನೆ ಕಚೇರಿಯಲ್ಲಿ ನಡೆದ ಸೇನೆಯ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾರತಮಾತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಹಿಂದೂ ಸಮಾಜಕ್ಕೆ ತನ್ನದೇ ಆದ ಸಂಸ್ಕೃತಿ, ಪರಂಪರೆ, ಇತಿಹಾಸ ಎಲ್ಲವೂ ಇದೆ. ಆದರೆ, ಹಿಂದೂ ಸಮಾಜ ಯಾವುದರ ಪರಿವೇ ಇಲ್ಲದೆ ತನ್ನ ಪಾಡಿಗೆ ಇದೆ. ಇದರಿಂದಾಗಿ ಹಿಂದೂಗಳ ವಿನಾಶಕ್ಕೆ ಎಲ್ಲ ಶಕ್ತಿಗಳೂ ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲ ಹಿಂದೂ ಪರ ಸಂಘಟನೆಗಳು ಮಾಡುತ್ತಿವೆ. ಇದರೊಂದಿಗೆ ಭಜರಂಗ ಸೇನೆಯೂ ಹಿಂದೆ ಬಿದ್ದಿಲ್ಲಘಿ. ಜಾಗೃತ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ ಎಂದು ವಿವರಿಸಿದರು.
ಸಾವಿರ ವರ್ಷಗಳ ಇತಿಹಾಸವಿರುವ ಭಾರತ ಹಿಂದೊಮ್ಮೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿತ್ತುಘಿ. ವಿಜ್ಞಾನ, ಶ್ರೇಷ್ಠ ವಿಚಾರ, ಆಚಾರ, ಧರ್ಮ, ಸಂಸ್ಕೃತಿಯಲ್ಲಿ ತನ್ನದೇ ಛಾಪನ್ನು ಮೂಡಿಸಿತ್ತುಘಿ. ಆದರೆ ಇಂದು ಹಿಂದೂ ಪರಿಕಲ್ಪನೆ ಮರೆತುಹೋಗಿದೆ. ಈ ನಿಟ್ಟಿನಲ್ಲಿ ಸಮಾಜವನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಬೇಕಿದೆ ಎಂದರು.