NewsKarnataka
Wednesday, January 26 2022

ಮಂಡ್ಯ

ಮಂಡ್ಯದಲ್ಲಿ ಭೂಮಿ ಕಂಪಿಸಿದ ಅನುಭವ: ಬೆಚ್ಚಿಬಿದ್ದ ಜನತೆ

ಮಂಡ್ಯ : ಮಂಡ್ಯ ನಗರ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಕೇಳಿಬಂದ ಭಾರೀ ಶಬ್ಧಕ್ಕೆ ಮಂಡ್ಯ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಸುಮಾರು 10 ರಿಂದ 15 ನಿಮಿಷದ ಅವಧಿಯಲ್ಲಿ ಎರಡು ಬಾರಿ ಜೋರಾದ ಶಬ್ಧ ಉಂಟಾಗಿದ್ದು, ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.

ಬೆಳಗ್ಗೆ 11.50ರ ಸುಮಾರಿಗೆ ಕೇಳಿಬಂದ ಶಬ್ಧದಿಂದ ಜನರು ಆತಂಕಗೊಂಡಿದ್ದರು. ಮತ್ತೆ 12.09ರ ಸಮಯಕ್ಕೆ ಮತ್ತೊಮ್ಮೆ ಭಾರೀ ಶಬ್ಧ ಕೇಳಿಬಂದಾಗ ಭಯಭೀತರಾದರು. ಎರಡು ಬಾರಿ ಕೇಳಿಬಂದ ಶಬ್ಧಕ್ಕೆ ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ಅಲುಗಾಡಿದವು. ಭೂಕಂಪನದ ಅನುಭವವಾದ್ದರಿಂದ ಹಲವೆಡೆ ಜನರು ಮನೆಗಳಿಂದ ಹೊರಗೆ ಓಡಿಬಂದರು.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭೂಕಂಪನದ ಅನುಭವವಾದ ಮಾದರಿಯಲ್ಲೇ ಮಂಡ್ಯದಲ್ಲೂ ಅನುಭವವಾಗಿದೆ. ಆದರೆ, ಎಲ್ಲಿಯೂ ಭೂಕಂಪನವಾಗಿರುವುದು ದಾಖಲಾಗಿಲ್ಲ. ನಿಗೂಢ ಶಬ್ಧಕ್ಕೆ ಕಾರಣವೇನು ಎನ್ನುವುದೂ ಈವರೆಗೆ ತಿಳಿದುಬಂದಿಲ್ಲ.

ನಿಗೂಢ ಶಬ್ಧ ಮಂಡ್ಯಕ್ಕೆ ಹೊಸದೇನಲ್ಲ. ಹಿಂದಿಯೂ ಹಲವು ಬಾರಿ ಇದೇ ರೀತಿಯ ಶಬ್ಧ ಕೇಳಿಬಂದಿವೆ. ಇದುವರೆಗೂ ಅದರ ಹಿಂದಿನ ಸತ್ಯವನ್ನು ಬೇಧಿಸಿ ಜನರ ಆತಂಕ ದೂರ ಮಾಡುವ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆರೋಪವಾಗಿದೆ.

2018 ಸೆ.25ರಂದು ಇದೇ ಮಾದರಿಯಲ್ಲಿ ಎರಡು ಬಾರಿ ಭಾರೀ ಶಬ್ಧ ಕೇಳಿಬಂದಿತ್ತು. ಆಗಲೂ ರಾಜ್ಯದ ಯಾವುದೇ ಭಾಗದಲ್ಲಿ ಭೂಕಂಪ ಸಂಭವಿಸಿರಲಿಲ್ಲ. ಆದರೆ, ಕೆಆರ್‌ಎಸ್ ಬಳಿ ಇರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಎರಡು ಗಣಿ ಸ್ಪೋಟ ಸಂಭವಿಸಿದ್ದು ದಾಖಲಾಗಿತ್ತು.

ಸುಮಾರು ಬೆಳಗ್ಗೆ 11.50ರ ಸಮಯದಲ್ಲಿ ಒಮ್ಮೆ ಭಾರೀ ಶಬ್ಧ ಕೇಳಿಬಂದರೆ, ಬಳಿಕ 12.09ರ ಸಮಯದಲ್ಲಿ ಮತ್ತೊಮ್ಮೆ ಜೋರು ಶಬ್ದ ಕೇಳಿಬಂತು. ಶಬ್ಧ ಸಂಭವಿಸಿದ ಸಮಯದಲ್ಲೇ ಭೂಮಿ ಕಂಪಿಸಿದಂತಾಯಿತು. ಮನೆಯೊಳಗಿದ್ದ ವಸ್ತುಗಳು, ಪಾತ್ರೆಗಳು, ಕಿಟಕಿ ಗಾಜುಗಳು ನಡುಗಿದ ಅನುಭವವಾಯಿತು. ಆ ಶಬ್ದದಿಂದ ಎದೆ ಝಲ್ಲೆಂದಿತ್ತು. ಎಲ್ಲೋ ಏನೋ ಆಗಿರಬಹುದೆಂದು ಭಾವಿಸಿದ್ದೆವು. ನಂತರ ಎಲ್ಲಿಯೂ ಅನಾಹುತ ಸಂಭವಿಸಿರಲಿಲ್ಲ. ನಾವು ಮಂಡ್ಯದಲ್ಲಿ ಮಾತ್ರ ಭಾರೀ ಶಬ್ಧ ಹಾಗೂ ಭೂಕಂಪನದ ಅನುಭವವಾಗಿರಬಹುದು ಎಂದುಕೊಂಡಿದ್ದೆವು. ಆದರೆ, ಬೆಂಗಳೂರು ಸೇರಿ ಇತರೆ ಕಡೆಗಳಲ್ಲೂ ಕೇಳಿಬಂದಿರುವುದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಗೊತ್ತಾಯಿತು ಎಂದು ಸಾರ್ವಜನಿಕರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.