News Kannada
Monday, December 11 2023
ಮಂಡ್ಯ

ಐಟಿಐ ಕಾಲೇಜು​ ಪ್ರಾಂಶುಪಾಲರಿಗೆ ಕಪಾಳ ಮೋಕ್ಷ ಮಾಡಿದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್

mandya
Photo Credit :

ಮಂಡ್ಯ: ಐಟಿಐ ಕಾಲೇಜು​ ಪ್ರಾಂಶುಪಾಲರಿಗೆ ಸಹೋದ್ಯೋಗಿಗಳ ಸಮ್ಮುಖದಲ್ಲೇ ಮಂಡ್ಯ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರು ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

ಮಂಡ್ಯದ ಐಟಿಐ ಕಾಲೇಜಿನಲ್ಲಿ ಸೋಮವಾರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿಗೆ ಶಾಸಕ ಎಂ.ಶ್ರೀನಿವಾಸ್ ಆಗಮಿಸಿದ್ದರು. ಈ ವೇಳೆ, ಕಾಲೇಜಿನ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಪ್ರಿನ್ಸಿಪಾಲ್ ನಾಗನಂದ್‌ ವಿರುದ್ಧ ಗರಂ ಆದ ಶಾಸಕರು ಎಲ್ಲರ ಎದುರೇ ಐದಾರು ಬಾರಿ ಕಪಾಳಕ್ಕೆ ಬಾರಿಸಲು ಯತ್ನಿಸಿದಲ್ಲದೇ, 2 ಬಾರಿ ಹೊಡೆದಿದ್ದಾರೆ.

ಶಾಸಕರ ವರ್ತನೆಗೆ ಹೆದರಿದ ಪ್ರಾಂಶುಪಾಲರು ‘ಇರ್ಲಿ.. ಇರ್ಲಿ.. ಸರ್..’ ಎನ್ನುತ್ತಾ ಸುಮ್ಮನೆ ನಿಲ್ಲುತ್ತಾರೆ. ಈ ದೃಶ್ಯವೀಗ ವೈರಲ್ ಆಗಿದೆ.

See also  ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಲು ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು