News Kannada
Thursday, September 29 2022

ಮಂಡ್ಯ

ಮಂಡ್ಯ: ಮಳೆಹಾನಿಗೆ ಪರಿಹಾರ ಕ್ರಮ ಕೈಗೊಳ್ಳಲು ಜನರ ಆಗ್ರಹ - 1 min read

Mandya: People demand remedial measures for rain damage
Photo Credit : By Author

ಮಂಡ್ಯ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕೆ.ಆರ್.ಪೇಟೆ ತಾಲೂಕಿನ ಕೆಲವು ಕೆರೆ ಕಟ್ಟೆಗಳು ಒಡೆದು ಭಾರೀ ಪ್ರಮಾಣದ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ ಎಂಬ ಆರೋಪವನ್ನು ಜನ ಮಾಡುತ್ತಿದ್ದಾರೆ.

ಜುಲೈ ತಿಂಗಳ ಅಂತ್ಯದಿಂದ ಆಗಸ್ಟ್ ತಿಂಗಳ ಆರಂಭದವರೆಗೆ ಸುರಿದ ಭಾರೀ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿ, ಮಾವಿನಕಟ್ಟೆ ಕೊಪ್ಪಲು, ಮಾಳಗೂರು ಕೆರೆಗಳು ಒಡೆದು ಕೆರೆ ಬಯಲಿನ ಕೃಷಿ ಭೂಮಿ, ರೈತರ ತೋಟಗಳು ಮತ್ತು ಭಿತ್ತನೆ ಮಾಡಿದ್ದ ಕೃಷಿ ಭೂಮಿಗಳು ಕೊಚ್ಚಿ ಹೋಗಿದ್ದವು.

ಸಂತೇಬಾಚಹಳ್ಳಿ, ಅಘಲಯ, ಕಿಕ್ಕೇರಿಯ ಅಮಾನಿ ಕೆರೆ ಸೇರಿದಂತೆ ಕೆಲವು ಕಡೆ ಸಂಪರ್ಕ ಸೇತುವೆಗಳು ಹಾನಿಗೀಡಾಗಿದ್ದು ರೈತರ ಸಂಚಾರಕ್ಕೆ ಅಡಚಣೆಯಾಗಿದೆ. ಕುಸಿದ ಮನೆಗಳಿಗೆ ತಾಲೂಕು ಆಡಳಿತ ಒಂದಷ್ಟು ಪರಿಹಾರ ನೀಡಿರುವುದು ಬಿಟ್ಟರೆ ಮಳೆ ಹಾನಿಯ ಯಾವುದೇ ಶಾಶ್ವತ ಕಾಮಗಾರಿಗಳು ಇದುವರೆಗೆ ಆರಂಭವಾಗಿಲ್ಲ. ಹಾನಿಗೀಡಾದ ಸೇತುವೆ ಮತ್ತು ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಇದುವರೆಗೆ ಚಾಲನೆ ಸಿಕ್ಕಿಲ್ಲ.

ಹಾಳಾಗಿರುವ ರಸ್ತೆಗಳಲ್ಲಿ ರೈತರು ತಾವು ಬೆಳೆದ ಕಬ್ಬು ಮತ್ತಿತರ ಕೃಷಿ ಉತ್ಪನ್ನಗಳನ್ನು ಕಾರ್ಖಾನೆಗಳಿಗೆ ಮತ್ತು ಮಾರುಕಟ್ಟೆಗಳಿಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಒಡೆದು ಹೋಗಿರುವ ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಕೆಲವು ಕೆರೆ ಬಯಲಿನ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಸಾಕಷ್ಟು ಮಳೆಯಾಗಿದ್ದರೂ ಕೆರೆಗಳು ಖಾಲಿಯಾಗಿರುವುದರಿಂದ ರೈತರಿಗೆ ಮುಂದಿನ ಚಿಂತೆ ಕಾಡುತ್ತಿದೆ. ತೋಟಗಾರಿಕೆ ಇಲಾಖೆಯ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರ ತೆಂಗು, ಅಡಿಕೆ, ಬಾಳೆ ಮುಂತಾದ ತೋಟಗಾರಿಕಾ ಬೆಳೆಗಳು ಹಾಳಾಗಿವೆ. ತೋಟಗಾರಿಕೆ ಇಲಾಖೆ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಇದುವೆರೆಗೆ ರೈತರಿಗೆ ಯಾವುದೇ ಪರಿಹಾರ ದೊರಕಿಲ್ಲ. ಇದೇ ರೀತಿ ಕೆರೆ ಬಯಲಿನಲ್ಲಿ ಭತ್ತ, ರಾಗಿ ಸೇರಿದಂತೆ ಸುಮಾರು 40.24 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು ರೈತರಿಗೆ 10,06,000 ರೂಗಳಷ್ಟು ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ರಾಜ್ಯ ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಿದೆ.

ನೀರಾವರಿ ಇಲಾಖೆ ಮಳೆ ಹಾನಿಯಿಂದ ತಾಲೂಕಿನಲ್ಲಿ ೨೪ ಕೋಟಿಯಷ್ಟು ಹಾನಿಯಾಗಿದ್ದು ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಇದುವರೆಗೂ ರಾಜ್ಯ ಸರ್ಕಾರದಿಂದ ಹಾಳಾಗಿರುವ ರಸ್ತೆಗಳು, ಸೇತುವೆಗಳು ಮತ್ತು ನಾಲಾ ರಸ್ತೆಗಳ ಸುಧಾರಣೆಗೆ ಹಣ ಬಿಡುಗಡೆಯಾಗಿಲ್ಲ.

ಅತಿವೃಷ್ಠಿಯಿಂದ ತಾಲೂಕಿನಲ್ಲಿ ಅಪಾರ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿಲ್ಲ. ಕಿಕ್ಕೇರಿ ಕೆರೆ ಕೋಡಿ ಸೇತುವೆ ಹಾಳಾಗಿರುವುದರಿಂದ ಕಿಕ್ಕೇರಿ ಮತ್ತು ಸೊಳ್ಳೇಪುರ ನಡುವಿನ ಸಂಚಾರಕ್ಕೆ ಅಡಚಣೆಯಾಗಿದೆ. ಅಘಲಯ – ದೊಡ್ಡ ಸೋಮನಹಳ್ಳಿ ನಡುವಿನ ಹಳ್ಳದ ಸೇತುವೆ ಹಾಳಾಗಿರುವುದ ರಿಂದ ಅಘಲಯ ಮಾರ್ಗದ ಜನ ಸುತ್ತಿ ಬಳಸಿ ಕೆ.ಆರ್.ಪೇಟೆ ಪಟ್ಟಣಕ್ಕೆ ಬರಬೇಕಾಗಿದೆ. ಗ್ರಾಮೀಣ ರಸ್ತೆಗಳು ಹಾಳಾಗಿರುವುದರಿಂದ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸುತ್ತಿದ್ದಾರೆ.

See also  ಬೆಂಗಳೂರು: ಮುಖ್ಯ ಆಯುಕ್ತರಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು