ಭಾರತೀನಗರ: ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಇನ್ಸ್‌ಸ್ಪೈರ್ ಅವಾರ್ಡ್ ವಸ್ತು ಪ್ರದರ್ಶನದಲ್ಲಿ ಮಾನಕ್ ಪ್ರಶಸ್ತಿಯ ರಾಷ್ಟ್ರ ಹಂತದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯಲ್ಲಿ ಅನಿಕೇತನ ಶಾಲೆಯ ವಿದ್ಯಾರ್ಥಿನಿ ಎಚ್.ಎಂ.ಹೃತಿಕಾ ಆಯ್ಕೆಯಾಗಿದ್ದಾರೆ.
ಹುಲಿಗೆರೆ ಪುರ ಗೇಟ್‌ನಲ್ಲಿರುವ ಅನಿಕೇತನ ಎಜುಕೇಷನ್ ಟ್ರಸ್ಟ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 7ನೇ ತರಗತಿ ವಿದ್ಯಾರ್ಥಿನಿ ಎಚ್.ಎಂ.ಹೃತಿಕಾ ನ್ಯಾಷನಲ್ ಇನ್ನೋವೇಷನ್ ಪೌಂಡೇಷನ್ (ಕೇಂದ್ರ ಯುವ ವಿಜ್ಞಾನ ಸಂಶೋಧನಾ ಸಂಸ್ಥೆ)ಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಹೀಗಾಗಿ ಅವರು,ಈ ಹಿನ್ನೆಲೆಯಲ್ಲಿ ಸೆ.14 ರಿಂದ 16 ರವರೆಗೆ ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಇನ್ಸ್‌ಸ್ಪೈರ್ ಅವಾರ್ಡ್ ವಸ್ತು ಪ್ರದರ್ಶನದಲ್ಲಿ ಮಾನಕ್ ಪ್ರಶಸ್ತಿಯ ರಾಷ್ಟ್ರ ಹಂತದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಲು ನವದೆಹಲಿಗೆ ತೆರಳುತ್ತಿದ್ದಾರೆ.
ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಹೃತಿಕಾಗ ಸಂಸದೆ ಸುಮಲತಾಅಂಬರೀಶ್, ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ, ಕ್ಷೇತ್ರದ ಶಿಕ್ಷಣಾಧಿಕಾರಿ ಕಾಳೀರಯ್ಯ, ಅನಿಕೇತನ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಶುಭಹಾರೈಸಿದ್ದಾರೆ.