News Kannada
Monday, December 05 2022

ಮಂಡ್ಯ

ಕೆ.ಆರ್.ಪೇಟೆ: ಮಹಾ ಕುಂಭಮೇಳದ ಅಂಗವಾಗಿ ಜಾನಪದ ಕಲಾ ತಂಡಗಳ ಉತ್ಸವ

K.R. Pet: Folk art troupes festival
Photo Credit : By Author

ಕೆ.ಆರ್.ಪೇಟೆ: ಮಹಾಕುಂಭಮೇಳದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಶ್ರೀ ಮಲೈ ಮಹದೇಶ್ವರರ ಜ್ಯೋತಿ ಉತ್ಸವ ಹಾಗೂ ಮಂಡ್ಯ ಜಿಲ್ಲಾ ಉತ್ಸವದ ಮೆರವಣಿಗೆಯು ಹೊಸ ಇತಿಹಾಸವನ್ನು ನಿರ್ಮಿಸಿತು. ಮೂರು ಕಿ.ಮೀ. ಉದ್ಧ ಸಾಗಿದ ವಿವಿಧ ಜಾನಪದ ಕಲಾತಂಡಗಳ ಪ್ರಕಾರಗಳು ನೋಡುಗರ ಮನಸೆಳೆಯಿತು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕ್ಷೇತ್ರದ ಶಾಸಕರು ಹಾಗೂ ಕುಂಭಮೇಳದ ರೂವಾರಿಗಳಾದ ಸಚಿವ ನಾರಾಯಣಗೌಡ ಡೋಲು ಬಾರಿಸುವ ಮೂಲಕ ಮಂಡ್ಯ ಜಿಲ್ಲಾ ಜಾನಪದ ಉತ್ಸವಕ್ಕೆ ಚಾಲನೆ ನೀಡಿದರು.

ಪಟ್ಟಣದ ನಾಗಮಂಗಲ ರಸ್ತೆಯ ಎಸ್.ಎಂ.ಲಿಂಗಪ್ಪ ಸಮುದಾಯ ಭವನದ ಆವರಣದಿಂದ ಆರಂಭವಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ನುಡಿಸಿರಿ ಕಲಾತಂಡಗಳ ಮೂರು ಸಾವಿರಕ್ಕೂ ಹೆಚ್ಚು ಕಲಾವಿಧರು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಐದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳನ್ನು ತೊಟ್ಟು ವೈಭವಯುತವಾಗಿ ಮೆರವಣಿಗೆ ನಡೆಸಿ ಮಹದೇಶ್ವರರ ಜ್ಯೋತಿ ಉತ್ಸವ ಹಾಗೂ ಮಹಾಕುಂಭಮೇಳಕ್ಕೆ ಶಕ್ತಿ ತುಂಬುವ ಮೂಲಕ ಶ್ರೀಸಾಮಾನ್ಯರಲ್ಲಿ ಕುಂಭಮೇಳದ ಬಗ್ಗೆ ಜಾಗೃತಿ ಮೂಡಿಸಿದರು.

ಮಹಾಕುಂಭಮೇಳದ ಅಂಗವಾಗಿ ನಡೆದ ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಸಡಗರ ಸಂಭ್ರಮದಿಂದ ಭಾಗವಹಿಸಿದ್ದರು. ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಯ ಒಂದು ಭಾಗದಲ್ಲಿ ರಸ್ತೆಯುದ್ಧಕ್ಕೂ ವಿವಿಧ ಬಗೆಯ ನೂರಾರು ರಂಗೋಲಿಗಳನ್ನು ಬಿಡಿಸಿ ಮಲೈಮಹದೇಶ್ವರ ಜ್ಯೋತಿರಥ ಯಾತ್ರೆಗೆ ಭವ್ಯ ಸ್ವಾಗತ ನೀಡಿದರು.

ಮಹಾಕುಂಭ ಮೇಳದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೈಸೂರು ದಸರಾ ಮಾದರಿಯಲ್ಲಿ ವಿವಿಧ ಬಣ್ಣಗಳ ವಿದ್ಯುತ್‌ದೀಪಗಳಿಂದ ಪಟ್ಟಣವನ್ನು ಸಿಂಗರಿಸಿ ಗಿಡಮರಗಳಿಗೆ ಹಸಿರು ಬೆಳಕಿನ ದೀಪಗಳಿಂದ ಸಿಂಗರಿಸಲಾಗಿತ್ತು.

ಕದೊನಿ, ಆಂಜನೇಯ, ದಾಸಯ್ಯ, ಘಟೋತ್ಕಜ, ಹುಲಿ. ಏಲಿಯನ್ಸ್, ವಿಚಿತ್ರಮಾನವ, ಕಪ್ಪುಹುಲಿ, ಕಿಂಗ್ ಕೋಂಗ್, ಗೂಳಿ, ನಂದೀದ್ವಜ, ಕಹಳೆ, ಕೊಂಬು, ಊರಿನಚಂಡೆ, ನಾದಸ್ವರತಂಡ, ತಟ್ಟೆರಾಯ, ಶಿವತಾಂಡವ, ಶಿಲ್ಪಾಗೊಂಬೆಬಳಗ, ಸ್ನೇಹಗೊಂಬೆ, ಶೆಟ್ಟಿಬೊಂಬೆಬಳಗ, ಗೊರವರಕುಣಿತ, ಕೊಂಚಾಡಿ, ಪೂಜಾಕುಣಿತ, ಸೋಮನಕುಣಿತ, ವೀರಭದ್ರನಕುಣಿತ, ಮರಗಾಲು, ಸಿಂಹರಾಜ, ಚಿತ್ರದುರ್ಗಬ್ಯಾಂಡ್, ಅರ್ಧನಾರೀಶ್ವರ, ಬೆಂಡರಕುಣಿತ, ಕಥಕ್ಕಳಿವೇಷ, ಕುಂದಾಪುರಡೋಲು, ಗುಮ್ಟೆ, ಹಗಲುವೇಷ, ಪುರುಷರ ನಗಾರಿ, ಮಹಿಳೆಯರ ನಗಾರಿ, ಚಿಟ್ಟೆಮೇಳ, ಜಗ್ಗಳಿಕೆಮೇಳ, ಕೋಳಿಗಳು, ಮೀನುಗಳು, ಡ್ರಾಗನ್, ಊಸರವಳ್ಳಿ, ನಾಸಿಕ್ ಬ್ಯಾಂಡ್, ಡೊಳ್ಳುಕುಣಿತ, ಪಂಚವಾದ್ಯ, ಕಂಸಾಳೆ, ಕರಡಿಮಜಲು, ವೀರಗಾಸೆ, ಕೇರಳದ ದೇವರ ವೇಷ, ಪಟದ ಕುಣಿತ, ಬೆಂಗಳೂರು ಡ್ರೆಸ್, ಕಾರ್ಟೂನ್, ಪ್ರಾಣಿಪಕ್ಷಿಗಳು ಮೈಸೂರು ಪೇಟಧಾರಿಗಳು, ಇಳಖಲ್ ಸೀರೆ ನಾರಿಯರು, ಗುಜರಾತ್ ನಾಗರೀಕರು, ಲಾವಣಿ, ಮರಾಠ ಸೈನಿಕರು, ಸಾಮಾನ್ಯ ಸೈನಿಕರು, ಬ್ರಿಟಿಷ್ ಸೈನಿಕರು, ಬಾಹುಬಲಿ, ಜೋಕರ‍್ಸ್, ರಾಜರಾಣಿಮಂತ್ರಿ,, ಪತಾಕೆ ಲಾಂಛನ, ಗಾಂಧೀಜಿ, ವಿವೇಕಾನಂದ, ಸುಭಾಷ್ ಚಂದ್ರಬೋಸ್, ಭಗತ್‌ಸಿಂಗ್, ಬಾಳಗಂಗಾಧರ ತಿಲಕ್, ರಾಣಿಅಬ್ಬಕ್ಕ, ಶಿವಾಜಿ, ಒನಕೆಓಬವ್ವ, ಸಂಗೊಳ್ಳಿರಾಯಣ್ಣ, ಝಾನ್ಸಿರಾಣಿ, ಮದಕರಿ ನಾಐಕ, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಬ್ಯಾಂಡ್‌ಸೆಟ್ ಮುಂತಾದುವುಗಳು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿ ಪುರಸಭಾ ಕಛೇರಿಯ ಪಕ್ಕದಲ್ಲಿನ ಆವರಣಕ್ಕೆ ಸಾಗಿದವು. ಸಾವಿರಾರು ಮಂದಿ ಜಾನಪದ ಕಲಾತಂಡಗಳ ವಿವಿಧ ಪ್ರಕಾರಗಳನ್ನು ಕಣ್ತುಂಬಿಕೊಂಡರು.

See also  ಮಂಗಳೂರು: ಶ್ರಮ ಯೋಗಿ ಮಾನ್-ಧನ್ ಯೋಜನೆ- ದ.ಕ ಟಾಪ್ 12ನೇ ಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು