ನಾಗಮಂಗಲ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗೆ ಯಾವುದೇ ಕಟ್ಟುಪಾಡು ಇರದೇ ಪ್ರತಿಯೊಬ್ಬರಿಗೂ ಯೋಜನೆ ತಲುಪುವ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ತಾಲೂಕಿನ ವಿಜಯ ಸಂಕಲ್ಪ ಯಾತ್ರೆಗೆ ನಗರದ ಸೌಮ್ಯ ಕೇಶವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ನಮಗೆ ನಾಲ್ಕು ಸ್ಥಾನಗಳು ಗೆಲುವು ನೀಡುವ ಮೂಲಕ ರಾಜ್ಯ ಬಿಜೆಪಿಗೆ ಹೆಚ್ಚು ಬಲಬಂದಂತೆ ನಾಗಮಂಗಲ ತಾಲೂಕಿನಲ್ಲಿ ಮಲ್ಲಿಕಾರ್ಜುನ್ ಫೈಟರ್ ರವಿ ಗೆಲುವು ನಿಶ್ಚಿತ ಎಂದು ತಿಳಿಸಿದರು.
ಸ್ವಾಭಿಮಾನಿ ಸಮೃದ್ಧ ಭಾರತ ನಿರ್ಮಾಣ ಮಾಡಲು ತಾವುಗಳು ಬಿಜೆಪಿಯ ಬಲಪಡಿಸುವ ಮುಖಾಂತರ ನಮ್ಮ ಮುಂದಿರುವ ಅನೇಕ ಸವಾಲುಗಳನ್ನು ಶಕ್ತಿಶಾಲಿಯಾಗಿ ಎದುರಿಸಲು ಭವಿಷ್ಯ ಭಾರತದ ನಿರ್ಮಾಣ ಮಾಡಲು ತಾವುಗಳು ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು. ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆಯಲ್ಲಿ ಫೈಟರ್ ರವಿ, ಮೀನುಗಾರಿಕಾ ಸಚಿವ ಅಂಗಾರ, ಮಾರುತಿ ಪವರ್ ಜಿಲ್ಲಾಧ್ಯಕ್ಷ ಉಮೇಶ್ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.
ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ತಾಲೂಕಿನಲ್ಲೇ ಕೇಸರಿಮಯ ವಾತಾವರಣ ಯಾತ್ರೆಯಲ್ಲಿ ಪಾಲ್ಗೊಂಡ ನಾಯಕರ ಮತಯಾಚನೆಗೆ ಫೈಟರ್ ರವಿ ಅಭಿಮಾನಿಗಳಿಂದ ಬೃಹತ್ ಗಾತ್ರದ ಸೇಬಿನ ಹಣ್ಣಿನ ಹಾರವನ್ನು ಹಾಕಲಾಯಿತು. ಬಿಜೆಪಿ ಸಂಕಲ್ಪ ಯಾತ್ರೆಗೆ ಸಾವಿರಾರು ಮಹಿಳೆಯರು ಕಾರ್ಯಕರ್ತರು ಭಾಗವಹಿಸಿದ್ದು, ಬಿಜೆಪಿಯ ಬೆಳವಣಿಗೆ ರಾಜಕೀಯ ಪರ್ವ ಆರಂಭವಾಗಿರುವುದು ವಿಶೇಷವಾಗಿತ್ತು.