ಮಂಡ್ಯ: ಕಾಂಗ್ರೆಸ್ ಪಕ್ಷ ಮೋದಿ ಸಮಾಧಿ ಮಾಡುವ ಕನಸು ಕಾಣುತ್ತಿದೆ. ಆದರೆ ನಾನು ಹೆದ್ದಾರಿ ಸೇರಿದಂತೆ ದೇಶದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ದೇಶದ ಕೋಟಿ ಕೋಟಿ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಡ್ಯದಲ್ಲಿ ಎಕ್ಸ್‌ಪ್ರೆಸ್ ವೇ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಅಭಿವೃದ್ಧಿಗೆ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಅವರ ಕೊಡುಗೆ ಮರೆಯಲಾಗದು. ಸಾಗರ್ ಮಾಲಾ ಭಾರತ್ ಮಾಲಾ ಯೋಜನೆಯಿಂದ ಕರ್ನಾಟಕ ಅಭಿವೃದ್ಧಿ ಪಥದಲ್ಲಿದೆ. ಆದರೆ ಕಾಂಗ್ರೆಸ್ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿತು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಬಡವರು ಪ್ರತಿ ಸವಲತ್ತು ಪಡೆಯಲು ಕಷ್ಟಪಡಬೇಕಾದ ಸ್ಥಿತಿಯಿತ್ತು. ಇದೀಗ ಪ್ರತಿ ಸೌಲಭ್ಯಗಳು ಜನರ ಬಳಿಗೆ ತಲುಪಿವೆ ಎಂದರು.
ಭದ್ರ ಮೇಲ್ದಂಡೆ ಯೋಜನೆಗೆ ನಮ್ಮ ಸರ್ಕಾರ 5300 ಕೋಟಿ ರೂ. ಘೋಷಿಸಿದೆ. ಕಿಸಾನ್ ಸಮ್ಮಾನ್ ಮೂಲಕ ರೈತರ ಕಲ್ಯಾಣ ನಡೆಯುತ್ತಿದೆ ಎಂದರು. ರಕ್ಷಣಾ ವಲಯದಲ್ಲಿಯೂ ಕುಂಠಿತವಾಗಿದ್ದ ಪ್ರಗತಿ ಉನ್ನತ ಮಟ್ಟಕ್ಕೇ ಏರಿದೆ ಎಂದರು.