News Kannada
Monday, February 26 2024
ಮಂಡ್ಯ

ಕಾವೇರಿ ನೀರಿಗಾಗಿ ಅಹೋರಾತ್ರಿ ಧರಣಿ ಕೂತ ಶಾಸಕ ದರ್ಶನ್ ಪುಟ್ಟಣ್ಣಯ್ಯ

Mla Darshan Puttannaiah sits on dharna for Cauvery water
Photo Credit : News Kannada

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದರಿಂದ ಕೆಆರ್​ಎಸ್​ ಡ್ಯಾಮ್​ನ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ. ಈಗಾಗಲೇ ನೀರಿನಮಟ್ಟ 100 ಅಡಿಗೆ ಕಡಿಮೆಯಾಗಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶದ ಪ್ರಕಾರ 15 ದಿನ ತಮಿಳುನಾಡಿಗೆ ನೀರನ್ನ ಕೊಟ್ರೆ ಡ್ಯಾಮ್​ನ ನೀರಿನ ಮಟ್ಟ 90 ಅಡಿಗೆ ಕುಸಿಯುತ್ತದೆ. ಹೀಗೆ ಮುಂದಿವರಿದ್ರೆ ಸಂಪೂರ್ಣವಾಗಿ ಕೆ.ಆರ್.ಎಸ್ ಡ್ಯಾಂ ಬರಿದಾಗುವ ಆತಂಕ ಮೂಡಿದೆ.

ಇನ್ನೂ ಕಾವೇರಿ ಬಗ್ಗೆ ನಾಳೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರೂ ಆಗಿರೋ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು​ ದೆಹಲಿಗೆ ತೆರಳಿ ಇಂದು ಕಾನೂನು ತಂಡದ ಜೊತೆ ಸಭೆ ನಡೆಸಲಿದ್ದಾರೆ. ಈಗಾಗಲೇ ದಿನಕ್ಕೆ 5 ಸಾವಿರದ ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಬಿಡುಗಡೆಗೆ ಮಾಡಬೇಕು ಎಂದು ಪ್ರಾಧಿಕಾರ ಆದೇಶ ಮಾಡಿದೆ. ಆದರೆ ಕಾವೇರಿ ಪ್ರಾಧಿಕಾರದ ಆದೇಶ ಪಾಲನೆ ಕಷ್ಟವೆಂದು ರಾಜ್ಯ ಸರ್ಕಾರ ಹೇಳಿದೆ.

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಕೊನೆಗೂ ಮಂಡ್ಯ ಜೆಡಿಎಸ್ ನಾಯಕರು ಮೌನ ಮುರಿದಿದ್ದಾರೆ. ಇಷ್ಟುದಿನ ಸೈಲೆಂಟ್ ಆಗಿದ್ದ ಜೆಡಿಎಸ್ ನಾಯಕರು ಇದೀಗ ರೊಚ್ಚಿಗೆದ್ದಿದ್ದು, ಸರ್ಕಾರಕ್ಕೆ ಇಂದು ಮತ್ತು ನಾಳೆ ಡೆಡ್​ಲೈನ್ ನೀಡಿದ್ದಾರೆ. ಈ 2 ದಿನದದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡ್ತಿರೋದನ್ನು ನಿಲ್ಲಿಸದಿದ್ದರೆ ಸೆ.02 ರಂದು ಶನಿವಾರ ಬೀದಿಗಿಳಿದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನೀರು ಬಿಡುಗಡೆಗೆ ಖಂಡಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆ.30 ರಿಂದ ಕೆ.ಆರ್‌.ಎಸ್‌. ಅಣೆಕಟ್ಟೆ ಬಳಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮುಂಜಾನೆಯು ಹೋರಾಟ ಮುಂದುವರೆಸಿರೋ ಹೋರಾಟಗಾರರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು