News Karnataka Kannada
Friday, March 29 2024
Cricket
ಮೈಸೂರು

ಮೈಸೂರು: ಹೊಸ ಭಾಷೆಗಳ ದಾಖಲೀಕರಣ ಅಗತ್ಯ – ಪ್ರೊ.ಅನ್ವಿತಾ ಅಬ್ಬಿ

Mysore/Mysuru: There is a need for documentation of new languages: Prof. Anvitha Abbi
Photo Credit : By Author

ಮೈಸೂರು: ಕೇವಲ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಮಾತ್ರ ಅಧ್ಯಯನ ಮಾಡದೇ ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಭಾಷೆಗಳ ದಾಖಲೀಕರಣಕ್ಕೂ ಒತ್ತು ನೀಡಬೇಕಿದೆ. ಮಾತ್ರವಲ್ಲದೇ ಆಗಿಂದ್ದಾಗ್ಗೆ ಭಾಷೆಯನ್ನು ಪರಾರ‍್ಶೆಗೆ ಒಳಪಡಿಸಿ ಅದರ ಸ್ಥಿತಿಗತಿಗಳ ಕುರಿತು ಮೌಲ್ಯ ಮಾಪನ ಮಾಡಬೇಕು ಎಂದು  ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಾಪಕಿ ಪದ್ಮಶ್ರೀ ಪ್ರೊ.ಅನ್ವಿತಾ ಅಬ್ಬಿ ಅಭಿಪ್ರಾಯಪಟ್ಟರು.

ಭಾರತೀಯ ಭಾಷಾ ಸಂಸ್ಥಾನ ಅಳಿವಿನಂಚಿನ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣಾ ಯೋಜನೆ ವತಿಯಿಂದ ಆಯೋಜಿಸಿದ್ದ ಭಾಷಾ ದಾಖಲೀಕರಣ ಕುರಿತ  ಎರಡು ವಾರಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಹೊತ್ತು ತರುತ್ತಿರುವ ಜ್ಞಾನದ ವೈಜ್ಞಾನಿಕ ದಾಖಲೀಕರಣವಾಗಬೇಕಿದೆ ಎಂದು  ಹೇಳಿದರು.

ಹಲವು ದಶಕಗಳಿಂದ ಅಳಿವಿನಂಚಿನಲ್ಲಿರುವ ಭಾಷೆಗಳ ಉಳಿಸುವ ಕಾರ್ಯ ನಡೆಯುತ್ತಿದೆ. ಈ ಸಂರ್ಭದಲ್ಲಿ ಕೇವಲ ಭಾಷೆ ಹಾಗೂ ಅದರಲ್ಲಿರುವ ವ್ಯಾಕರಣವನ್ನು ದಾಖಲಿಸಲಾಗುತ್ತದೆ. ಆದರೆ ಪ್ರತಿಯೊಂದು ಭಾಷೆಯೂ ಅದು ಉಗಮವಾದಾಗಿನಿಂದಲೂ ಕೆಲವೊಂದು ಜ್ಞಾನವನ್ನು ಹೊತ್ತಿ ತರುತ್ತದೆ. ಆ ರೀತಿಯ ಜ್ಞಾನ  ಭಂಡಾರ ನಮಗೆ ಹಾಗೂ ಭವಿಷ್ಯದ ಪೀಳಿಗೆಗೆ ಮುಖ್ಯವಾಗಿದೆ. ಹಾಗಾಗಿ ಈ ಉಪಯುಕ್ತ ವಿಷಯದ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ದಾಖಲೀಕರಣ ಮಾಡಬೇಕಿದೆ ಸಲಹೆ ನೀಡಿದರು.

ಅಂಡಮಾನ್ ನಿಕೋಬಾರ್‌ನಲ್ಲಿ ಸುನಾಮಿಯಾದ ಸಂದರ್ಭದಲ್ಲಿ ಯಾವುದೇ ಒಬ್ಬ ಬುಡಕಟ್ಟು ವ್ಯಕ್ತಿಯೂ ಸಾಯಲಿಲ್ಲ. ಆ ಸಂದರ್ಭದಲ್ಲಿ ಏರು ಅಲೆಗಳು  ಬರುತ್ತಿರುವುದನ್ನು ಗಮನಿಸಿ ತಮ್ಮ ಸಮುದಾಯದ ಎಲ್ಲರಿಗೂ ಒಂದು ಸೂಚನೆ ನೀಡಿದರು. ಮಾತ್ರವಲ್ಲದೇ ಈ ರೀತಿಯ ಪ್ರಕೃತಿ ವಿಕೋಪವಾದಾಗ ಏನು ಮಾಡಬೇಕೆಂದು ಅವರ ಹಿರಿಯರು ಹೇಳಿಕೊಟ್ಟ ಪಾಠವನ್ನು ತಾವು ಪಾಲಿಸುವುದಲ್ಲದೇ ತಮ್ಮ ಮಕ್ಕಳಿಗೂ ಮಾರ್ಗದರ್ಶನ ಮಾಡಿದರು. ಅದರಂತೆ ಸುನಾಮಿ ಬರುವ ಸಂದರ್ಭದಲ್ಲಿ ಎಲ್ಲರು ಓಡಲು ಆರಂಭಿಸಿದರು. ಮಾತ್ರವಲ್ಲದೇ ಸುಮಾರು 7 ಗಂಟೆಗಳ ಕಾಲ ಈಜುವ ಮುಖಾಂತರ ತಮ್ಮ ಜೀವ ಉಳಿಸಿಕೊಂಡರು. ಈ ಘಟನೆ ಪರಂಪರಾನುಗತವಾಗಿ ಬಂದ ಜ್ಞಾನದ ಪ್ರಾಮುಖ್ಯತೆ ಸಾರುತ್ತದೆ ಎಂದರು.

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್, ಕಾರ್ಯಕ್ರಮ ಸಂಯೋಜಕ ಡಾ.ಸುಯೋಜ್ ಸರ್ಕಾರ್ ಹಾಗೂ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು