News Kannada
Thursday, February 22 2024
ಮೈಸೂರು

ಮೈಸೂರು| ಫೇಲಾದ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆ ಅಗತ್ಯ: ಬನ್ನೂರು ರಾಜು

Students who failed need to think positively: Bannur Raju
Photo Credit :

ಮೈಸೂರು: ಚಿಕ್ಕದರಿಂದ ಹಿಡಿದು ಎಂಥ ದೊಡ್ಡ ಶೈಕ್ಷಣಿಕ ಪರೀಕ್ಷೆಯೇ ಆಗಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಯಾವಾಗಲೂ ಸಕಾರಾತ್ಮಕ ಚಿಂತನೆಗಳೇ ಇರಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಬೆಳಗಬೇಕಾದ ವಿದ್ಯಾರ್ಥಿ ಬದುಕು ಕತ್ತಲಾಗಿ ಬಿಡುತ್ತದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಅಖಿಲ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ದೇವರಾಜ  ಮೊಹಲ್ಲಾದಲ್ಲಿರುವ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಸ್ತುತ ವರ್ಷದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ  ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಉಚಿತ ಬೋಧನಾ ತರಗತಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಶಿಕ್ಷಣ ಕಲಿಕೆ ಎನ್ನುವುದು ನಡಿಗೆ ಇದ್ದಂತೆ. ಯಾರೇ ಆಗಲಿ ನಡೆಯುವವರು ಎಡಗದಿರರು. ಇಲ್ಲಿ ಎಡಗುವುದು ಸಹಜ. ಆದರೆ ಎಡಗಿದವರು ಆತ್ಮ ವಿಶ್ವಾಸದಿಂದ ಮೇಲೆದ್ದು ಮುನ್ನಡೆಯಬೇಕೆಂದರು.

ಎಡಗಿ ಮುಗ್ಗರಿಸುವುದು, ಬೀಳುವುದು ತಪ್ಪಲ್ಲ. ಆದರೆ ಬಿದ್ದವರು ಎದ್ದು ನಡೆಯದೆ ಹಾಗೆಯೇ ಇದ್ದು ಬಿಡುವುದು ದೊಡ್ಡ ತಪ್ಪು. ಇದು ಶಿಕ್ಷಣಕ್ಕೂ ಸಂಬಂಧಿಸಿದ್ದು ಹಾಗಾಗಿ ಯಾವುದೇ ತರಗತಿಯ ಪರೀಕ್ಷೆಗಳಿರಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದು ಸರ್ವೇಸಾಮಾನ್ಯವಾಗಿದ್ದು ಇದೇನು ದೊಡ್ಡ ವಿಷಯವಲ್ಲ. ಆದರೆ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ನಕಾರಾತ್ಮಕವಾಗಿ ಚಿಂತನೆಮಾಡದೆ ನಾನೇಕೆ ಫೇಲಾದೆ? ಎಂಬ ಪ್ರಶ್ನೆಯನ್ನು ತಮ್ಮ ಮುಂದಿಟ್ಟುಕೊಂಡು ಸಕಾರಾತ್ಮಕವಾಗಿ ಯೋಚಿಸಿದ್ದೇ ಆದಲ್ಲಿ ಪರೀಕ್ಷೆಯಲ್ಲಿ ತಾವೆಲ್ಲಿ ಎಡವಿದ್ದೇವೆಂಬುದು ಅವರಿಗೇ ಅರಿವಾಗುತ್ತದೆ. ಅದನ್ನು ತಿದ್ದಿಕೊಂಡರೆ ಮರು ಪರೀಕ್ಷೆಯಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆಂದ ಅವರು, ಪಾಸಾದವರೆಲ್ಲಾ ಬುದ್ಧಿವಂತರಲ್ಲ. ಫೇಲಾದವರೆಲ್ಲಾ ದಡ್ಡರಲ್ಲ ಎಂದು ಹೇಳಿದರು.

ವಿಷಯ ತಜ್ಞ ಪ್ರಾಂಶುಪಾಲ ಡಾ.ರಮಾನಂದ್ ಅವರು ಮಾತನಾಡಿ, ನಾವು ಅನುತ್ತೀರ್ಣರಾಗಿದ್ದೇವೆಂಬ ಕೀಳರಿಮೆಯನ್ನು ಬದಿಗಿಟ್ಟು ಪಿಯುಸಿಯನ್ನು ಪಾಸು ಮಾಡುವುದು ನಮಗೇನೂ ದೊಡ್ಡ ವಿಷಯವಲ್ಲ. ಮನಸ್ಸು ಪಟ್ಟರೆ ಏನು ಬೇಕಾದರೂ ಮಾಡಬಲ್ಲೆವು ಎಂಬ ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು. ಆಗ ಪರೀಕ್ಷೆಯನ್ನು ಎದುರಿಸುವುದು ಬಹಳ ಸುಲಭವಾಗುತ್ತದೆ. ಇದಕ್ಕೆ ಬಹು ಮುಖ್ಯವಾಗಿ ಏಕಾಗ್ರತೆ, ಗ್ರಹಿಕೆ, ಮನನ, ಪುನರ್ಮನ ವಿದ್ಯಾರ್ಥಿಗಳಲ್ಲಿರಬೇಕು. ಇಂದು ಕಲಿಯಬೇಕೆಂದರೆ ಟ್ಯೂಷನ್ ಸೆಂಟರ್ ಗಳನ್ನು ಹುಡುಕಿಕೊಂಡು ಹೋಗಬೇಕು.ಟ್ಯೂಷನ್ ಎನ್ನುವುದು ಇವತ್ತು   ವ್ಯಾಪಾರೀಕರಣವಾಗಿದೆ. ಉಚಿತವಾಗಿ ಯಾರೂ ಕೂಡ ಟ್ಯೂಷನ್ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಬಡ ಮಕ್ಕಳಿಗೆ ಟ್ಯೂಷನ್ ಎನ್ನುವುದು ದೂರದ ಮಾತು. ಹಾಗಾಗಿ ವಿದ್ಯಾರ್ಥಿಪರ ಕಾಳಜಿಯುಳ್ಳ ಈ.ಶಿವೇಗೌಡರ ಮೂಲಕ ಟ್ಯೂಷನ್ ಎಂಬುದು ಉಚಿತವಾಗಿ ನಿಮ್ಮ ಬಳಿಗೇ ಬಂದಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ  ಮಾಡಿಕೊಳ್ಳಬೇಕೆಂದ ಅವರು, ರಾಜ್ಯದ ಬಹುತೇಕ ಕಡೆಗಳಲ್ಲಿ ದ್ವಿತೀಯ ಪಿಯುಸಿ ಅನುತ್ತೀರ್ಣರಾಗಿರುವ ಬಡ ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಅಖಿಲ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತ ರಕ್ಷಣಾ ಸಂಘವು ತಜ್ಞ ಉಪನ್ಯಾಸಕರ ನೆರವಿನೊಂದಿಗೆ ಸಂಘದ ಅಧ್ಯಕ್ಷ ಈ. ಶಿವೇಗೌಡರ ಸಾರಥ್ಯದಲ್ಲಿ ಉಚಿತವಾಗಿ ಅಲ್ಪಾವಧಿ ವಿಶೇಷ ಬೋಧನಾ ತರಗತಿಗಳನ್ನು ನಡೆಸಲಾಗುತ್ತಿದ್ದು ಫೇಲ್ ಆಗಿರುವ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ  ಇದೊಂದು ಒಳ್ಳೆ ಶೈಕ್ಷಣಿಕ ಕಾರ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಉಪನ್ಯಾಸಕರ ಸಂಘದ ಅಧ್ಯಕ್ಷರೂ ಆದ ಪ್ರಾಶುಂಪಾಲಾರಾದ ಈ. ಶಿವೇಗೌಡರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಜಿಲ್ಲಾಧ್ಯಕ್ಷ ವೆಂಕಟೇಶ್ ಕೋಟೆ ಹಾಗೂ ವಿಷಯ ತಜ್ಞ ಉಪನ್ಯಾಸಕರಾದ ಬಾಲಸುಬ್ರಹ್ಮಣ್ಯ, ಟಿ. ಎಂ. ನಾಗೇಶ್, ಕೋಟೆ ವೆಂಕಟೇಶ್, ಅನಂತ ಕುಮಾರ್, ಡಾ.ಪಿ. ಶ್ರೀಮತಿ, ಎ.ಎಸ್.ಜಗದೀಶ್, ಎ. ಬಿ. ಸಬಿತಾ, ಸುಶೀಲಾ ವಿ.  ಭಟ್ ಕುರ್ಸಿ, ವಿ. ಆನಂದಕುಮಾರಿ, ಎಂ. ಕೆ. ರಾಧಾ, ಎಸ್. ಶ್ಯಾಮಲಾ, ಡಿ. ಪ್ರಭಾವತಿ, ಉಷಾ ಎಸ್. ಗೊಂಧಳಿ ಇನ್ನಿತರರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಾದ ಸಾನಿಕಾ ಮತ್ತು ವೃಂದ ಪ್ರಾರ್ಥನೆ ಮಾಡಿದರು. ಉಪನ್ಯಾಸಕ ಅನಂತಕುಮಾರ್ ಸ್ವಾಗತಿಸಿದರೆ ಜಗದೀಶ್ ವಂದಿಸಿದರು. ಪ್ರಸ್ತುತ ವರ್ಷ ಪ್ರವೇಶ ಪಡೆದಿರುವ ನೂತನ ವಿದ್ಯಾರ್ಥಿಗಳು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು