News Kannada
Monday, March 04 2024
ಮೈಸೂರು

ಮೈಸೂರಲ್ಲಿ ಮಹಿಳಾ ಶಿಕ್ಷಕರಿಗೆ ಗೌರವ ಸಮರ್ಪಣೆ

Photo Credit : News Kannada

ಮೈಸೂರು: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮೈಸೂರು ನಗರ ಘಟಕ ವತಿಯಿಂದ ವಿದ್ಯಾರಣ್ಯಪುರಂನ ವಾಣಿ ವಿದ್ಯಾಮಂದಿರ ಶಾಲೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮೈಸೂರು ನಗರ ಘಟಕದ ಅಧ್ಯಕ್ಷ ಮನೋಜ್.ಎನ್ ಮಾತನಾಡಿ, ಸಾಧಕರನ್ನು ಕರೆತಂದು ಗೌರವಿಸವುದು ಸಹಜ, ಆದರೆ ಭವಿಷ್ಯದ ಸಾಧಕರನ್ನು ರೂಪಿಸುವ ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳ ಮುಂದೆ ಗೌರವ ಸಮರ್ಪಣೆ ಮಾಡುವುದರ ಮೂಲಕ, ಅಪರೂಪದ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಶಾಲಾ ಮಹಿಳಾ ಶಿಕ್ಷಕರಾದ ಯಶೋಧಾ, ಭವಾನಿ, ಶೈಲಜಾ, ವಿಜಯಲಕ್ಷ್ಮೀ, ಜ್ಯೋತಿ, ನಿಷಾ ಅವರನ್ನು ಗೌರವ ಪೂರ್ವಕವಾಗಿ ಸ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಪರಶುರಾಮೇಗೌಡ, ಶಿಕ್ಷಕ ರಾಘವೇಂದ್ರರಾವ್ ಅವರನ್ನು ಸನ್ಮಾನಿಸಿ, ನಂತರ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿಗಳೊಂದಿಗೆ ಸಿಹಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ರಜತ್.ಆರ್, ಅಜ್ಞಾನ್, ರೇಖಾ, ಯಶಸ್ವಿನಿ, ಚಂದನ, ದರ್ಶನ್, ಮಂಜುನಾಥ್.ಎನ್, ಗೌತಮ್ ಸಿಂಗ್, ಆಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು