ಮೈಸೂರು: ಮೈಸೂರಿನ ಆರ್.ಟಿ.ನಗರ ರಿಂಗ್ ರಸ್ತೆ ಬಳಿ ಸಾಲದ ಹೊರೆಗೆ ಬೇಸತ್ತು ಮೊಬೈಲ್ ಅಂಗಡಿ ಮಾಲೀಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
24 ವರ್ಷದ ಹೇಮಂತ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೊಬೈಲ್ ಅಂಗಡಿ ಮಾಲೀಕನಾಗಿದ್ದ ಹೇಮಂತ್ ಕುಮಾರ್ ಬಹಳ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಸಾಲ ತೀರಿಸಲು ಸಾಧ್ಯವಾಗದೇ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.