ಮೈಸೂರು: ನಗರದಲ್ಲಿನ ಪ್ರಸಿದ್ಧ ಕಾರು ಮಾರಾಟ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಕಾರುಗಳು ಸುಟ್ಟು ಭಸ್ಮವಾಗಿರೋ ಘಟನೆ ನಡೆದಿದೆ.
ನಗರದ ಜೆ ಎಲ್ ಬಿ ರಸ್ತೆಯಲ್ಲಿನ ಅದ್ವೈತ ಹೊಂಡಾ ಶೋ ರೂಂ ನಲ್ಲಿಯೇ ಬೆಂಕಿ ಕಾಣಿಸಿಕೊಂಡು, ಕಾರುಗಳು ಬೆಂಕಿಗೆ ಆಹುತಿ ಆಗಿರೋದು.
ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕಾರು ಶೋ ರೂಂಗೆ ಬಹುಬೇಗನೆ ಆವರಿಸಿದ ಕಾರಣ, ಶೋ ರೂಂ ನಲ್ಲಿ ನಿಲ್ಲಿಸಿದ್ದಂತ 10ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ.
ವಿಷಯ ತಿಳಿದು ಸ್ಥಳಕ್ಕೆ 3 ಆಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿವೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ. ಭಾನುವಾರದ ರಜಾ ದಿನ ಬೆಂಕಿ ಕಾಣಿಸಿಕೊಂಡ ಕಾರಣ, ಯಾವುದೇ ನೌಕರರು ಕರ್ತವ್ಯದಲ್ಲಿ ಇರದ ಕಾರಣ, ಪ್ರಾಣಾಪಾಯ ಸಂಭವಿಸಿಲ್ಲ.