News Kannada
Tuesday, December 06 2022

ಮೈಸೂರು

ಬಳಸಿ ಬಿಸಾಡೋದು ಬಿಜೆಪಿಯ ಸಂಸ್ಕೃತಿ ಮತ್ತು ಸ್ವಭಾವ ; ಕಾಂಗ್ರೆಸ್‌

Photo Credit :

ಮೈಸೂರು: ಬಳಸಿ ಬಿಸಾಡೋದು ಬಿಜೆಪಿಯ ಸಂಸ್ಕೃತಿ ಮತ್ತು ಸ್ವಭಾವ. ಅದೇ ರೀತಿ ಯಡಿಯೂರಪ್ಪ ಅವರನ್ನು ಬಿಜೆಪಿ ನಾಯಕರು ಬಳಸಿಕೊಂಡು ಬಿಸಾಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪ ಮಾಡಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಮೋದಿ ಮತ್ತು ಅಮಿತ್ ಶಾಗೆ ಹಿರಿಯ ನಾಯಕರ ಬಗ್ಗೆ ಗೌರವ ಇಲ್ಲ. ಹಿರಿಯ ನಾಯಕರನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರಿಗೂ ಅದನ್ನೇ ಮಾಡಿದ್ದಾರೆ. ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ, ಯಶ್ವಂತ್ ಸಿನ್ಹಾ, ಕೇಶೂಬಾಯಿ ಪಟೇಲ್, ನರೇನ್ ಪಾಂಡ್ಯ ಮುಂತಾದ ಹಲವು ನಾಯಕರನ್ನು ಮೂಲೆ ಗುಂಪು ಮಾಡಲಾಗಿದೆ. ಮೋದಿ ಬಿಜೆಪಿ ಸೃಷ್ಠಿಸಿದ ನಾಯಕ, ಹಿರಿತನದ ನಾಯಕ ಅಲ್ಲ ಎಂದು ಟೀಕಿಸಿದರು.

ಪೋನ್ ದುರ್ಬಳಕೆ ಸ್ಪೈ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಣದೀಪ್ ಸಿಂಗ್ ಸುರ್ಜೇವಾಲ, ಚುನಾಯಿತ ಸರ್ಕಾರವನ್ನು ಬೀಳಿಸಲು ಬಳಸಿದೆ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಯಡಿಯೂರಪ್ಪ ಅವರನ್ನು ತೆಗೆಯಲಾಯಿತು ? ಆರ್ ಎಸ್ ಎಸ್ ಕೆಲವರು ಸಚಿವರನ್ನು ತೆಗೆಯಲು ಹೇಳುತ್ತಿದೆ. ಇನ್ನು ಸಚಿವರು ಸಿಡಿ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದರು.

ರಾಜ್ಯದ ಕೊರೊನಾ ಪರಿಸ್ಥಿತಿ ಉಲ್ಲೇಖಿಸಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಆಕ್ಸಿಜನ್, ರೆಮಿಡಿಸಿಯರ್ ಸಿಗದೆ ಜನರ ಸಮಸ್ಯೆಗೆ ಸಿಲುಕಿದ್ದರು. ಆಗ ಪ್ರಧಾನಿ ಎಲ್ಲಿ ಹೋಗಿದ್ದರು ಜೆಪಿ ನಡ್ಡಾ ಎಲ್ಲಿ ಹೋಗಿದ್ದರು ? ಯಡಿಯೂರಪ್ಪ ಬೊಮ್ಮಾಯಿ ಎಲ್ಲಿ ಹೋಗಿದ್ದಾರೆ ? ಅವರಿಗೆಲ್ಲಾ ಅಧಿಕಾರದ ದಾಹ ಅಷ್ಟೇ. ಇದಕ್ಕಾಗಿ ನಾವು ಎಲ್ಲರೂ ಒಟ್ಟಿಗೆ ಸೇರಿದ್ದು, ನಮ್ಮಲ್ಲಿರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸೇರಿದ್ದೇವೆ ಎಂದು ತಿಳಿಸಿದರು.

See also  ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು