News Kannada
Tuesday, December 06 2022

ಮೈಸೂರು

ಬನ್ನಾರಿ ಅಮ್ಮನ್‌ ಕಾರ್ಖಾನೆಯಲ್ಲಿ ಲಾರಿ ಚಾಲಕ ಸಾವು ; ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಹ

Photo Credit :

ಮೈಸೂರು : ಇಲ್ಲಿಗೆ ಸಮೀಪದ ಬನ್ನಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾನುವಾರ ರಾತ್ರಿ ಹೃದಯಾಘಾತದಿಂದ ಸಾವಿಗೀಡಾದ ಲಾರಿ ಚಾಲಕನಿಗೆ ಪರಿಹಾರ ನೀಡಬೇಕು ಎಂದು ಚಾಲಕನ ಗ್ರಾಮಸ್ಥರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಪರಿಣಾಮವಾಗಿ ಕಬ್ಬನ್ನು ತುಂಬಿ ಬಂದಿದ್ದ ಲಾರಿಗಳು ಕಾರ್ಖಾನೆ ಪ್ರವೇಶಿಸಲಾಗದೇ ಹೊರಗಡೆ ಸಾಲಾಗಿ ನಿಂತಿವೆ. ಲಾರಿ ಚಾಲಕ ಭಾನುವಾರ ರಾತ್ರಿ ಕಾರ್ಖಾನೆ ಆವರಣದಲ್ಲಿ ಸಾವಿಗೀಡಾಗಿದ್ದ. ಲಾರಿ ಒಳಗಡೆಯೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಚಾಲಕನ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

 

See also  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣದ ಸಂಚಾರಿ ಠಾಣೆ ಎಎಸ್‌ಐ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು